Translation of the Meanings of the Noble Qur'an - Kannada translation - Hamza Butur

Page Number:close

external-link copy
19 : 44

وَّاَنْ لَّا تَعْلُوْا عَلَی اللّٰهِ ؕ— اِنِّیْۤ اٰتِیْكُمْ بِسُلْطٰنٍ مُّبِیْنٍ ۟ۚ

ನೀವು ಅಲ್ಲಾಹನ ಮುಂದೆ ದರ್ಪ ತೋರಬೇಡಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯವನ್ನು ತರುವೆನು. info
التفاسير:

external-link copy
20 : 44

وَاِنِّیْ عُذْتُ بِرَبِّیْ وَرَبِّكُمْ اَنْ تَرْجُمُوْنِ ۟ۚ

ನೀವು ನನಗೆ ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಯಾಚಿಸುತ್ತೇನೆ. info
التفاسير:

external-link copy
21 : 44

وَاِنْ لَّمْ تُؤْمِنُوْا لِیْ فَاعْتَزِلُوْنِ ۟

ನೀವು ನನ್ನಲ್ಲಿ ವಿಶ್ವಾಸವಿಡುವುದಿಲ್ಲ ಎಂದಾದರೆ ನನ್ನಿಂದ ಬೇರೆ ಹೋಗಿರಿ.” info
التفاسير:

external-link copy
22 : 44

فَدَعَا رَبَّهٗۤ اَنَّ هٰۤؤُلَآءِ قَوْمٌ مُّجْرِمُوْنَ ۟

ಇವರೆಲ್ಲರೂ ಅಪರಾಧಿಗಳಾದ ಜನರು ಎಂದು ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು. info
التفاسير:

external-link copy
23 : 44

فَاَسْرِ بِعِبَادِیْ لَیْلًا اِنَّكُمْ مُّتَّبَعُوْنَ ۟ۙ

(ಅಲ್ಲಾಹು ಹೇಳಿದನು): “ನೀವು ರಾತ್ರಿ ವೇಳೆ ನನ್ನ ದಾಸರೊಡನೆ ಹೊರಡಿರಿ. ನಿಶ್ಚಯವಾಗಿಯೂ ವೈರಿಗಳು ನಿಮ್ಮನ್ನು ಹಿಂಬಾಲಿಸುವರು. info
التفاسير:

external-link copy
24 : 44

وَاتْرُكِ الْبَحْرَ رَهْوًا ؕ— اِنَّهُمْ جُنْدٌ مُّغْرَقُوْنَ ۟

ನೀವು ಸಮುದ್ರವನ್ನು ಶಾಂತ ಸ್ಥಿತಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಈ ಸೈನ್ಯವನ್ನು ಮುಳುಗಿಸಲಾಗುವುದು. info
التفاسير:

external-link copy
25 : 44

كَمْ تَرَكُوْا مِنْ جَنّٰتٍ وَّعُیُوْنٍ ۟ۙ

ಅವರು ಎಷ್ಟೊಂದು ತೋಟಗಳನ್ನು ಮತ್ತು ತೊರೆಗಳನ್ನು ಬಿಟ್ಟು ಹೋದರು! info
التفاسير:

external-link copy
26 : 44

وَّزُرُوْعٍ وَّمَقَامٍ كَرِیْمٍ ۟ۙ

ಎಷ್ಟೊಂದು ಕೃಷಿಗಳನ್ನು ಮತ್ತು ಗೌರವಾನ್ವಿತ ವಸತಿಗಳನ್ನು! info
التفاسير:

external-link copy
27 : 44

وَّنَعْمَةٍ كَانُوْا فِیْهَا فٰكِهِیْنَ ۟ۙ

ಅವರು ಆನಂದದಿಂದ ಅನುಭವಿಸುತ್ತಿದ್ದ ಎಷ್ಟೊಂದು ಸವಲತ್ತುಗಳನ್ನು! info
التفاسير:

external-link copy
28 : 44

كَذٰلِكَ ۫— وَاَوْرَثْنٰهَا قَوْمًا اٰخَرِیْنَ ۟

ಈ ರೀತಿ ಅದು ಸಂಭವಿಸಿತು. ನಾವು ಅವೆಲ್ಲವನ್ನೂ ಬೇರೆ ಜನರಿಗೆ ಉತ್ತರಾಧಿಕಾರವಾಗಿ ನೀಡಿದೆವು. info
التفاسير:

external-link copy
29 : 44

فَمَا بَكَتْ عَلَیْهِمُ السَّمَآءُ وَالْاَرْضُ وَمَا كَانُوْا مُنْظَرِیْنَ ۟۠

ಆಕಾಶ ಅಥವಾ ಭೂಮಿ ಅವರಿಗಾಗಿ ಅಳಲಿಲ್ಲ. ಅವರಿಗೆ ಕಾಲಾವಕಾಶವೂ ದೊರೆಯಲಿಲ್ಲ. info
التفاسير:

external-link copy
30 : 44

وَلَقَدْ نَجَّیْنَا بَنِیْۤ اِسْرَآءِیْلَ مِنَ الْعَذَابِ الْمُهِیْنِ ۟ۙ

ನಾವು ಇಸ್ರಾಯೇಲ್ ಮಕ್ಕಳನ್ನು ಅವಮಾನಕರ ಶಿಕ್ಷೆಯಿಂದ ಪಾರು ಮಾಡಿದೆವು. info
التفاسير:

external-link copy
31 : 44

مِنْ فِرْعَوْنَ ؕ— اِنَّهٗ كَانَ عَالِیًا مِّنَ الْمُسْرِفِیْنَ ۟

ಫರೋಹ‍ನಿಂದ. ನಿಶ್ಚಯವಾಗಿಯೂ ಅವನು ಅಹಂಕಾರಿಯಾಗಿದ್ದು ಎಲ್ಲೆ ಮೀರಿದವರಲ್ಲಿ ಸೇರಿದ್ದನು. info
التفاسير:

external-link copy
32 : 44

وَلَقَدِ اخْتَرْنٰهُمْ عَلٰی عِلْمٍ عَلَی الْعٰلَمِیْنَ ۟ۚ

ನಿಶ್ಚಯವಾಗಿಯೂ ನಾವು ತಿಳಿದೂ ಸಹ ಇಸ್ರಾಯೇಲ್ ಮಕ್ಕಳನ್ನು (ಸಮಕಾಲೀನ) ಜಗತ್ತಿನಲ್ಲಿ ಶ್ರೇಷ್ಠಗೊಳಿಸಿದೆವು. info
التفاسير:

external-link copy
33 : 44

وَاٰتَیْنٰهُمْ مِّنَ الْاٰیٰتِ مَا فِیْهِ بَلٰٓؤٌا مُّبِیْنٌ ۟

ನಾವು ಅವರಿಗೆ ಸ್ಪಷ್ಟ ಪರೀಕ್ಷೆಯನ್ನು ಹೊಂದಿದ್ದ ದೃಷ್ಟಾಂತಗಳನ್ನು ನೀಡಿದೆವು. info
التفاسير:

external-link copy
34 : 44

اِنَّ هٰۤؤُلَآءِ لَیَقُوْلُوْنَ ۟ۙ

ನಿಶ್ಚಯವಾಗಿಯೂ ಇವರು (ಸತ್ಯನಿಷೇಧಿಗಳು) ಹೇಳುತ್ತಾರೆ: info
التفاسير:

external-link copy
35 : 44

اِنْ هِیَ اِلَّا مَوْتَتُنَا الْاُوْلٰی وَمَا نَحْنُ بِمُنْشَرِیْنَ ۟

“ನಮ್ಮ ಮೊದಲ ಸಾವಲ್ಲದೆ ಬೇರೇನೂ ಇಲ್ಲ. ನಮ್ಮನ್ನು ಪುನಃ ಜೀವಂತಗೊಳಿಸಲಾಗುವುದೂ ಇಲ್ಲ. info
التفاسير:

external-link copy
36 : 44

فَاْتُوْا بِاٰبَآىِٕنَاۤ اِنْ كُنْتُمْ صٰدِقِیْنَ ۟

ನೀವು ಸತ್ಯವಂತರಾಗಿದ್ದರೆ (ಸತ್ತು ಹೋದ) ನಮ್ಮ ಪೂರ್ವಜರನ್ನು ಕರೆದುಕೊಂಡು ಬನ್ನಿ.” info
التفاسير:

external-link copy
37 : 44

اَهُمْ خَیْرٌ اَمْ قَوْمُ تُبَّعٍ ۙ— وَّالَّذِیْنَ مِنْ قَبْلِهِمْ ؕ— اَهْلَكْنٰهُمْ ؗ— اِنَّهُمْ كَانُوْا مُجْرِمِیْنَ ۟

ಇವರು ಶ್ರೇಷ್ಠರೋ? ಅಥವಾ ತುಬ್ಬಅ್‌ನ ಜನರು[1] ಮತ್ತು ಅವರಿಗಿಂತ ಮೊದಲಿನವರೋ? ನಾವು ಅವರೆಲ್ಲರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅವರು ಅಪರಾಧಿಗಳಾಗಿದ್ದರು. info

[1] ತುಬ್ಬಅ್ ಎಂದರೆ ಹಳೆಯ ಸಬಾ ಸಾಮ್ರಾಜ್ಯಕ್ಕೆ ಸೇರಿದ ಹಿಮ್ಯರ್ ಗೋತ್ರದ ಆಡಳಿತಗಾರರು.

التفاسير:

external-link copy
38 : 44

وَمَا خَلَقْنَا السَّمٰوٰتِ وَالْاَرْضَ وَمَا بَیْنَهُمَا لٰعِبِیْنَ ۟

ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ. info
التفاسير:

external-link copy
39 : 44

مَا خَلَقْنٰهُمَاۤ اِلَّا بِالْحَقِّ وَلٰكِنَّ اَكْثَرَهُمْ لَا یَعْلَمُوْنَ ۟

ನಾವು ಅವುಗಳನ್ನು ಸರಿಯಾದ ಉದ್ದೇಶದಿಂದಲೇ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. info
التفاسير: