Translation of the Meanings of the Noble Qur'an - Kannada translation - Hamza Butur

Page Number:close

external-link copy
23 : 3

اَلَمْ تَرَ اِلَی الَّذِیْنَ اُوْتُوْا نَصِیْبًا مِّنَ الْكِتٰبِ یُدْعَوْنَ اِلٰی كِتٰبِ اللّٰهِ لِیَحْكُمَ بَیْنَهُمْ ثُمَّ یَتَوَلّٰی فَرِیْقٌ مِّنْهُمْ وَهُمْ مُّعْرِضُوْنَ ۟

ಗ್ರಂಥದಿಂದ ಒಂದು ಪಾಲು ನೀಡಲಾದವರನ್ನು (ಯಹೂದಿಗಳನ್ನು) ನೀವು ನೋಡಿಲ್ಲವೇ? ಅವರ (ಯಹೂದಿಗಳ) ನಡುವೆ ತೀರ್ಪು ನೀಡಲು ಅವರನ್ನು ಅಲ್ಲಾಹನ ಗ್ರಂಥಕ್ಕೆ ಕರೆಯಲಾಗುತ್ತದೆ. ಅದರ ನಂತರವೂ ಅವರಲ್ಲೊಂದು ಗುಂಪು ಮುಖ ತಿರುಗಿಸಿ ವಿಮುಖರಾಗುತ್ತಾರೆ. info
التفاسير:

external-link copy
24 : 3

ذٰلِكَ بِاَنَّهُمْ قَالُوْا لَنْ تَمَسَّنَا النَّارُ اِلَّاۤ اَیَّامًا مَّعْدُوْدٰتٍ ۪— وَّغَرَّهُمْ فِیْ دِیْنِهِمْ مَّا كَانُوْا یَفْتَرُوْنَ ۟

ಅದೇಕೆಂದರೆ ಅವರು ಹೇಳುತ್ತಾರೆ: “ಬೆರಳೆಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಸುಡುವುದಿಲ್ಲ.” ಅವರು ಏನು ಕಲ್ಪಿಸಿ ಹೇಳುತ್ತಿದ್ದಾರೋ ಅದು ಅವರನ್ನು ಅವರ ಧರ್ಮದ ವಿಷಯದಲ್ಲಿ ಮರುಳುಗೊಳಿಸಿದೆ. info
التفاسير:

external-link copy
25 : 3

فَكَیْفَ اِذَا جَمَعْنٰهُمْ لِیَوْمٍ لَّا رَیْبَ فِیْهِ ۫— وَوُفِّیَتْ كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟

ಯಾವುದೇ ಸಂಶಯವಿಲ್ಲದ ಒಂದು ದಿನ (ಪುನರುತ್ಥಾನ ದಿನ) ನಾವು ಅವರನ್ನು ಒಟ್ಟುಗೂಡಿಸಿದರೆ (ಅವರ ಸ್ಥಿತಿ) ಹೇಗಿರಬಹುದು? ಅಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. info
التفاسير:

external-link copy
26 : 3

قُلِ اللّٰهُمَّ مٰلِكَ الْمُلْكِ تُؤْتِی الْمُلْكَ مَنْ تَشَآءُ وَتَنْزِعُ الْمُلْكَ مِمَّنْ تَشَآءُ ؗ— وَتُعِزُّ مَنْ تَشَآءُ وَتُذِلُّ مَنْ تَشَآءُ ؕ— بِیَدِكَ الْخَیْرُ ؕ— اِنَّكَ عَلٰی كُلِّ شَیْءٍ قَدِیْرٌ ۟

ಹೇಳಿರಿ: “ಓ ಸಾರ್ವಭೌಮತ್ವದ ಒಡೆಯನಾದ ಅಲ್ಲಾಹನೇ! ನೀನು ಇಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನು ಇಚ್ಛಿಸುವವರಿಂದ ಆಧಿಪತ್ಯವನ್ನು ಕಸಿಯುವೆ. ನೀನು ಇಚ್ಛಿಸುವವರಿಗೆ ಪ್ರತಿಷ್ಠೆಯನ್ನು ನೀಡುವೆ ಮತ್ತು ನೀನು ಇಚ್ಛಿಸುವವರನ್ನು ಅವಮಾನಕ್ಕೆ ಗುರಿಯಾಗಿಸುವೆ. ಒಳಿತುಗಳೆಲ್ಲವೂ ನಿನ್ನ ಕೈಯಲ್ಲಿದೆ. ನಿಶ್ಚಯವಾಗಿಯೂ ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ. info
التفاسير:

external-link copy
27 : 3

تُوْلِجُ الَّیْلَ فِی النَّهَارِ وَتُوْلِجُ النَّهَارَ فِی الَّیْلِ ؗ— وَتُخْرِجُ الْحَیَّ مِنَ الْمَیِّتِ وَتُخْرِجُ الْمَیِّتَ مِنَ الْحَیِّ ؗ— وَتَرْزُقُ مَنْ تَشَآءُ بِغَیْرِ حِسَابٍ ۟

ನೀನು ರಾತ್ರಿಯನ್ನು ಹಗಲಿನಲ್ಲಿ ತೂರಿಸುವೆ ಮತ್ತು ಹಗಲನ್ನು ರಾತ್ರಿಯಲ್ಲಿ ತೂರಿಸುವೆ. ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನು ಇಚ್ಛಿಸುವವರಿಗೆ ನೀನು ಲೆಕ್ಕವಿಲ್ಲದೆ ನೀಡುವೆ.” info
التفاسير:

external-link copy
28 : 3

لَا یَتَّخِذِ الْمُؤْمِنُوْنَ الْكٰفِرِیْنَ اَوْلِیَآءَ مِنْ دُوْنِ الْمُؤْمِنِیْنَ ۚ— وَمَنْ یَّفْعَلْ ذٰلِكَ فَلَیْسَ مِنَ اللّٰهِ فِیْ شَیْءٍ اِلَّاۤ اَنْ تَتَّقُوْا مِنْهُمْ تُقٰىةً ؕ— وَیُحَذِّرُكُمُ اللّٰهُ نَفْسَهٗ ؕ— وَاِلَی اللّٰهِ الْمَصِیْرُ ۟

ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬಾರದು.[1] ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನಿಂದ ಯಾವುದೇ ರಕ್ಷಣೆಯಿಲ್ಲ. ಆದರೆ ಅವರ ಕೆಡುಕಿನಿಂದ ಪಾರಾಗುವ ಉದ್ದೇಶವಿದ್ದರೆ ಹೊರತು.[2] ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. (ಎಲ್ಲರೂ) ಅಲ್ಲಾಹನ ಬಳಿಗೇ ಮರಳಬೇಕಾಗಿದೆ. info

[1] ಇಲ್ಲಿ ಸತ್ಯನಿಷೇಧಿಗಳು ಎಂದರೆ ಸತ್ಯವಿಶ್ವಾಸಿಗಳೊಂದಿಗೆ ವೈರ ಮತ್ತು ದ್ವೇಷ ಕಟ್ಟಿಕೊಂಡಿರುವ ಸತ್ಯನಿಷೇಧಿಗಳು. ಆದರೆ ಸತ್ಯವಿಶ್ವಾಸಿಗಳೊಂದಿಗೆ ವೈರತ್ವವಿಲ್ಲದ, ದ್ವೇಷವನ್ನು ಹೊಂದಿಲ್ಲದ ಸತ್ಯನಿಷೇಧಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವುದರಲ್ಲಿ ತೊಂದರೆಯಿಲ್ಲ. [2] ಅಂದರೆ ಸತ್ಯನಿಷೇಧಿಗಳೊಡನೆ ಸ್ನೇಹ ಮಾಡಿಕೊಳ್ಳದ ಹೊರತು ಅವರ ಹಿಂಸೆಯಿಂದ ಪಾರಾಗಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಬಾಹ್ಯವಾಗಿ ಅವರೊಡನೆ ಸ್ನೇಹ ಮಾಡಿಕೊಳ್ಳಬಹುದು. ಇದು ಸಾಮಾನ್ಯವಾಗಿ ಮುಸ್ಲಿಮೇತರ ದೇಶಗಳಲ್ಲಿ ವಾಸಿಸುವ ಮುಸಲ್ಮಾನರಿಗೆ ಸಂಬಂಧಿಸಿದ್ದಾಗಿದೆ.

التفاسير:

external-link copy
29 : 3

قُلْ اِنْ تُخْفُوْا مَا فِیْ صُدُوْرِكُمْ اَوْ تُبْدُوْهُ یَعْلَمْهُ اللّٰهُ ؕ— وَیَعْلَمُ مَا فِی السَّمٰوٰتِ وَمَا فِی الْاَرْضِ ؕ— وَاللّٰهُ عَلٰی كُلِّ شَیْءٍ قَدِیْرٌ ۟

ಹೇಳಿರಿ: “ನೀವು ನಿಮ್ಮ ಎದೆಗಳಲ್ಲಿರುವುದನ್ನು ಮುಚ್ಚಿಟ್ಟರೂ ಅಥವಾ ಬಹಿರಂಗಪಡಿಸಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅವನು ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ತಿಳಿಯುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.” info
التفاسير: