Translation of the Meanings of the Noble Qur'an - Kannada translation - Hamza Butur

Page Number:close

external-link copy
44 : 24

یُقَلِّبُ اللّٰهُ الَّیْلَ وَالنَّهَارَ ؕ— اِنَّ فِیْ ذٰلِكَ لَعِبْرَةً لِّاُولِی الْاَبْصَارِ ۟

ಅಲ್ಲಾಹು ರಾತ್ರಿ-ಹಗಲುಗಳನ್ನು ಒಂದರ ನಂತರ ಒಂದರಂತೆ ಬದಲಾಯಿಸುತ್ತಾನೆ. ನಿಶ್ಚಯವಾಗಿಯೂ ದೃಷ್ಟಿಯುಳ್ಳವರಿಗೆ ಅದರಲ್ಲಿ ನೀತಿಪಾಠವಿದೆ. info
التفاسير:

external-link copy
45 : 24

وَاللّٰهُ خَلَقَ كُلَّ دَآبَّةٍ مِّنْ مَّآءٍ ۚ— فَمِنْهُمْ مَّنْ یَّمْشِیْ عَلٰی بَطْنِهٖ ۚ— وَمِنْهُمْ مَّنْ یَّمْشِیْ عَلٰی رِجْلَیْنِ ۚ— وَمِنْهُمْ مَّنْ یَّمْشِیْ عَلٰۤی اَرْبَعٍ ؕ— یَخْلُقُ اللّٰهُ مَا یَشَآءُ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟

ಅಲ್ಲಾಹು ಎಲ್ಲಾ ಜೀವರಾಶಿಗಳನ್ನು ನೀರಿನಿಂದ ಸೃಷ್ಟಿಸಿದನು. ಕೆಲವು ಅವುಗಳ ಹೊಟ್ಟೆಯ ಮೇಲೆ ತೆವಳುತ್ತವೆ. ಕೆಲವು ಎರಡು ಕಾಲುಗಳ ಮೇಲೆ ಚಲಿಸುತ್ತವೆ. ಕೆಲವು ನಾಲ್ಕು ಕಾಲುಗಳಲ್ಲಿ ಚಲಿಸುತ್ತವೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
46 : 24

لَقَدْ اَنْزَلْنَاۤ اٰیٰتٍ مُّبَیِّنٰتٍ ؕ— وَاللّٰهُ یَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟

ನಾವು ಸ್ಪಷ್ಟವಾದ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ಅಲ್ಲಾಹು ಅವನು ಇಚ್ಛಿಸುವವರಿಗೆ ನೇರ ಮಾರ್ಗವನ್ನು ತೋರಿಸುತ್ತಾನೆ. info
التفاسير:

external-link copy
47 : 24

وَیَقُوْلُوْنَ اٰمَنَّا بِاللّٰهِ وَبِالرَّسُوْلِ وَاَطَعْنَا ثُمَّ یَتَوَلّٰی فَرِیْقٌ مِّنْهُمْ مِّنْ بَعْدِ ذٰلِكَ ؕ— وَمَاۤ اُولٰٓىِٕكَ بِالْمُؤْمِنِیْنَ ۟

ಅವರು (ಕಪಟವಿಶ್ವಾಸಿಗಳು) ಹೇಳುತ್ತಾರೆ: “ನಾವು ಅಲ್ಲಾಹನಲ್ಲಿ ಮತ್ತು ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟಿದ್ದೇವೆ ಮತ್ತು ಅವರನ್ನು ಅನುಸರಿಸುತ್ತೇವೆ.” ನಂತರ ಅದರ ಬಳಿಕವೂ ಅವರಲ್ಲಿ ಒಂದು ಗುಂಪು ವಿಮುಖರಾಗಿ ಹೋಗುತ್ತಾರೆ. ಅವರು ಸತ್ಯವಿಶ್ವಾಸಿಗಳೇ ಅಲ್ಲ. info
التفاسير:

external-link copy
48 : 24

وَاِذَا دُعُوْۤا اِلَی اللّٰهِ وَرَسُوْلِهٖ لِیَحْكُمَ بَیْنَهُمْ اِذَا فَرِیْقٌ مِّنْهُمْ مُّعْرِضُوْنَ ۟

ಅವರ ಮಧ್ಯೆ ತೀರ್ಪು ನೀಡಲು ಅವರನ್ನು ಅಲ್ಲಾಹು ಮತ್ತು ಸಂದೇಶವಾಹಕರ ಕಡೆಗೆ ಆಮಂತ್ರಿಸಲಾದರೆ, ಅವರಲ್ಲಿ ಒಂದು ಗುಂಪು ಬೆನ್ನು ತೋರಿಸಿ ನಡೆಯುತ್ತಾರೆ. info
التفاسير:

external-link copy
49 : 24

وَاِنْ یَّكُنْ لَّهُمُ الْحَقُّ یَاْتُوْۤا اِلَیْهِ مُذْعِنِیْنَ ۟ؕ

ಸತ್ಯವು ಅವರ ಕಡೆಯಿದ್ದರೆ ಅವರು ಪ್ರವಾದಿಯ ಬಳಿಗೆ ವಿನಮ್ರತೆಯಿಂದ ಬರುತ್ತಾರೆ. info
التفاسير:

external-link copy
50 : 24

اَفِیْ قُلُوْبِهِمْ مَّرَضٌ اَمِ ارْتَابُوْۤا اَمْ یَخَافُوْنَ اَنْ یَّحِیْفَ اللّٰهُ عَلَیْهِمْ وَرَسُوْلُهٗ ؕ— بَلْ اُولٰٓىِٕكَ هُمُ الظّٰلِمُوْنَ ۟۠

ಅವರ ಹೃದಯಗಳಲ್ಲಿ ರೋಗವಿದೆಯೇ? ಅಥವಾ ಅವರಿಗೆ ಸಂಶಯವಿದೆಯೇ? ಅಥವಾ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವರಿಗೆ ಅನ್ಯಾಯ ಮಾಡುವರೆಂದು ಅವರಿಗೆ ಭಯವಿದೆಯೇ? ಅಲ್ಲ. ವಾಸ್ತವವಾಗಿ ಅವರೇ ಅಕ್ರಮಿಗಳು. info
التفاسير:

external-link copy
51 : 24

اِنَّمَا كَانَ قَوْلَ الْمُؤْمِنِیْنَ اِذَا دُعُوْۤا اِلَی اللّٰهِ وَرَسُوْلِهٖ لِیَحْكُمَ بَیْنَهُمْ اَنْ یَّقُوْلُوْا سَمِعْنَا وَاَطَعْنَا ؕ— وَاُولٰٓىِٕكَ هُمُ الْمُفْلِحُوْنَ ۟

ಸತ್ಯವಿಶ್ವಾಸಿಗಳನ್ನು—ಅವರ ನಡುವೆ ತೀರ್ಪು ನೀಡಲು—ಅಲ್ಲಾಹು ಮತ್ತು ಸಂದೇಶವಾಹಕರ ಕಡೆಗೆ ಆಮಂತ್ರಿಸಲಾದರೆ, “ನಾವು ಕೇಳಿದ್ದೇವೆ ಮತ್ತು ಅನುಸರಿಸಿದ್ದೇವೆ” ಎಂದು ಅವರು ಹೇಳುತ್ತಾರೆ. ಅವರೇ ಯಶಸ್ವಿಯಾದವರು. info
التفاسير:

external-link copy
52 : 24

وَمَنْ یُّطِعِ اللّٰهَ وَرَسُوْلَهٗ وَیَخْشَ اللّٰهَ وَیَتَّقْهِ فَاُولٰٓىِٕكَ هُمُ الْفَآىِٕزُوْنَ ۟

ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸುವವರು, ಅಲ್ಲಾಹನನ್ನು ಭಯಪಡುವವರು ಮತ್ತು ಅಲ್ಲಾಹನ ಶಿಕ್ಷೆಯನ್ನು ಹೆದರುವವರು ಯಾರೋ ಅವರೇ ಜಯಗಳಿಸಿದವರು. info
التفاسير:

external-link copy
53 : 24

وَاَقْسَمُوْا بِاللّٰهِ جَهْدَ اَیْمَانِهِمْ لَىِٕنْ اَمَرْتَهُمْ لَیَخْرُجُنَّ ؕ— قُلْ لَّا تُقْسِمُوْا ۚ— طَاعَةٌ مَّعْرُوْفَةٌ ؕ— اِنَّ اللّٰهَ خَبِیْرٌ بِمَا تَعْمَلُوْنَ ۟

ನೀವೇನಾದರೂ ಆಜ್ಞಾಪಿಸಿದರೆ ಅವರು ಖಂಡಿತ ಹೊರಟು ಬರುತ್ತಾರೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳುತ್ತಾರೆ. ಹೇಳಿರಿ: “ನೀವು ಆಣೆ ಮಾಡಬೇಡಿ. ನಿಮ್ಮ ಆಜ್ಞಾಪಾಲನೆ ಹೇಗಿದೆಯೆಂದು ಎಲ್ಲರಿಗೂ ತಿಳಿದಿದೆ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿದಿದ್ದಾನೆ.” info
التفاسير: