Translation of the Meanings of the Noble Qur'an - Kannada translation - Hamza Butur

external-link copy
12 : 11

فَلَعَلَّكَ تَارِكٌ بَعْضَ مَا یُوْحٰۤی اِلَیْكَ وَضَآىِٕقٌ بِهٖ صَدْرُكَ اَنْ یَّقُوْلُوْا لَوْلَاۤ اُنْزِلَ عَلَیْهِ كَنْزٌ اَوْ جَآءَ مَعَهٗ مَلَكٌ ؕ— اِنَّمَاۤ اَنْتَ نَذِیْرٌ ؕ— وَاللّٰهُ عَلٰی كُلِّ شَیْءٍ وَّكِیْلٌ ۟ؕ

“ಇವನ ಮೇಲೆ ಒಂದು ನಿಧಿಯನ್ನೇಕೆ ಇಳಿಸಲಾಗಿಲ್ಲ? ಅಥವಾ ಇವನೊಡನೆ ಒಬ್ಬ ದೇವದೂತರೇಕೆ ಬರಲಿಲ್ಲ” ಎಂಬ ಅವರ ಮಾತುಗಳನ್ನು ಕೇಳಿ ನೀವು ನಿಮಗೆ ನೀಡಲಾದ ದೇವವಾಣಿಗಳಲ್ಲಿ ಕೆಲವನ್ನು ತ್ಯಜಿಸಲೂಬಹುದು ಮತ್ತು ಅದರಿಂದ ನಿಮ್ಮ ಹೃದಯದಲ್ಲಿ ಇಕ್ಕಟ್ಟು ಅನುಭವವಾಗಲೂಬಹುದು. ಆದರೆ ನೆನಪಿಡಿ! ನೀವು ಒಬ್ಬ ಮುನ್ನೆಚ್ಚರಿಕೆಗಾರ ಮಾತ್ರ. ಅಲ್ಲಾಹು ಎಲ್ಲಾ ವಿಷಯಗಳಿಗೂ ಹೊಣೆಗಾರನಾಗಿದ್ದಾನೆ. info
التفاسير: