Translation of the Meanings of the Noble Qur'an - Kannada language - Sh. Bashir Misuri

Page Number:close

external-link copy
48 : 9

لَقَدِ ابْتَغَوُا الْفِتْنَةَ مِنْ قَبْلُ وَقَلَّبُوْا لَكَ الْاُمُوْرَ حَتّٰی جَآءَ الْحَقُّ وَظَهَرَ اَمْرُ اللّٰهِ وَهُمْ كٰرِهُوْنَ ۟

ಅವರು ಇದಕ್ಕೆ ಮೊದಲೂ ಕ್ಷೆÆÃಭೆ ಹರಡಲು ಬಯಸಿದ್ದರು ಮತ್ತು ನಿಮಗೋಸ್ಕರ ಸಂಗತಿಗಳನ್ನು ಬುಡಮೇಲುಗೊಳಿಸುತ್ತಲೂ ಇದ್ದರು ಕೊನೆಗೂ ಸತ್ಯವು ಬಂದುಬಿಟ್ಟಿತು; ಅವರು ಇಷ್ಟಪಡದಿದ್ದರೂ ಅಲ್ಲಾಹನ ತೀರ್ಮಾನ ಜಯಗಳಿಸಿತು. info
التفاسير:

external-link copy
49 : 9

وَمِنْهُمْ مَّنْ یَّقُوْلُ ائْذَنْ لِّیْ وَلَا تَفْتِنِّیْ ؕ— اَلَا فِی الْفِتْنَةِ سَقَطُوْا ؕ— وَاِنَّ جَهَنَّمَ لَمُحِیْطَةٌ بِالْكٰفِرِیْنَ ۟

'ನನಗೆ ಅನುಮತಿ ನೀಡಿರಿ ಮತ್ತು ನನ್ನನ್ನು ಆಪತ್ತಿಗೊಳಪಡಿಸದಿರಿ' ಎಂದು ಹೇಳುವವರು ಅವರ ಪೈಕಿ ಇದ್ದಾರೆ ತಿಳಿದುಕೊಳ್ಳಿರಿ. ಅವರು ಆಪತ್ತಿನಲ್ಲಿ ಬಿದ್ದುಬಿಟ್ಟಿದ್ದಾರೆ ಮತ್ತು ಖಂಡಿತವಾಗಿಯು ನರಕಾಗ್ನಿಯು ಸತ್ಯನಿಷೇಧಿಗಳನ್ನು ಮುತ್ತಿಕೊಂಡಿದೆ. info
التفاسير:

external-link copy
50 : 9

اِنْ تُصِبْكَ حَسَنَةٌ تَسُؤْهُمْ ۚ— وَاِنْ تُصِبْكَ مُصِیْبَةٌ یَّقُوْلُوْا قَدْ اَخَذْنَاۤ اَمْرَنَا مِنْ قَبْلُ وَیَتَوَلَّوْا وَّهُمْ فَرِحُوْنَ ۟

ತಮಗೇನಾದರೂ ಒಳಿತು ಲಭಿಸಿದರೆ ಅದವರಿಗೆ ದುಃಖವನ್ನುಂಟು ಮಾಡುತ್ತದೆ. ಮತ್ತು ನಿಮಗೇನಾದರೂ ವಿಪತ್ತು ಬಾಧಿಸಿದರೆ 'ನಾವು ನಮ್ಮ ವಿಚಾರದಲ್ಲಿ ಮೊದಲೇ ಜಾಗರೂಕತೆ ವಹಿಸಿದ್ದೆವು ಎಂದು ಅವರು ಹೇಳುತ್ತಾರೆ. ತರುವಾಯ ದುರಭಿಮಾನದೊಂದಿಗೆ ಮರಳುತ್ತಾರೆ. info
التفاسير:

external-link copy
51 : 9

قُلْ لَّنْ یُّصِیْبَنَاۤ اِلَّا مَا كَتَبَ اللّٰهُ لَنَا ۚ— هُوَ مَوْلٰىنَا ۚ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟

ಹೇಳಿರಿ: ‘ಅಲ್ಲಾಹ ನಮಗೆ ವಿಧಿಸಿರುವುದಲ್ಲದೆ ಬೇರೇನೂ ನಮ್ಮನ್ನು ಬಾಧಿಸಲಾರದು. ಅವನು ನಮ್ಮ ಒಡೆಯನಾಗಿರುವನು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆಯೇ ಭರವಸೆಯನ್ನಿಡಲಿ. info
التفاسير:

external-link copy
52 : 9

قُلْ هَلْ تَرَبَّصُوْنَ بِنَاۤ اِلَّاۤ اِحْدَی الْحُسْنَیَیْنِ ؕ— وَنَحْنُ نَتَرَبَّصُ بِكُمْ اَنْ یُّصِیْبَكُمُ اللّٰهُ بِعَذَابٍ مِّنْ عِنْدِهٖۤ اَوْ بِاَیْدِیْنَا ۖؗۗ— فَتَرَبَّصُوْۤا اِنَّا مَعَكُمْ مُّتَرَبِّصُوْنَ ۟

ಹೇಳಿರಿ: ಎರಡು ಒಳಿತು (ಹುತಾತ್ಮತೆ ಅಥವಾ ವಿಜಯ) ಗಳಲ್ಲಿ ನೀವು ನಮ್ಮ ಬಗ್ಗೆ ಯಾವುದಾದರೊಂದನ್ನು ನಿರೀಕ್ಷಿಸುತ್ತಿದ್ದೀರಿ. ಆದರೆ ನಿಮ್ಮ ಕುರಿತು ಅಲ್ಲಾಹನು ನಿಮಗೆ ತನ್ನ ಕಡೆಯಿಂದ ನೇರವಾಗಿ ಅಥವಾ ನಮ್ಮ ಕೈಯ್ಯಾರೆ ಶಿಕ್ಷೆಕೊಡಬೇಕೆಂದು ನಿರೀಕ್ಷಿಸುತ್ತಿದ್ದೇವೆ. ನೀವು ನಿರೀಕ್ಷಿಸುತ್ತಿರಿ ಮತ್ತು ನಾವೂ ನಿರೀಕ್ಷಿಸುವವರಾಗಿದ್ದೇವೆ. info
التفاسير:

external-link copy
53 : 9

قُلْ اَنْفِقُوْا طَوْعًا اَوْ كَرْهًا لَّنْ یُّتَقَبَّلَ مِنْكُمْ ؕ— اِنَّكُمْ كُنْتُمْ قَوْمًا فٰسِقِیْنَ ۟

ಹೇಳಿರಿ: ನೀವು ಸಂತೃಪ್ತಿಯಿAದ ವ್ಯಯಿಸಿರಿ ಅಥವಾ ಅತೃಪ್ತಿಯಿಂದ ವ್ಯಯಿಸಿರಿ. ನಿಮ್ಮಿಂದ ಖಂಡಿತ ಸ್ವೀಕರಿಸಲಾಗದು. ಖಂಡಿತವಾಗಿಯು ನೀವು ಧಿಕ್ಕಾರಿಗಳಾದ ಜನರಾಗಿದ್ದೀರಿ. info
التفاسير:

external-link copy
54 : 9

وَمَا مَنَعَهُمْ اَنْ تُقْبَلَ مِنْهُمْ نَفَقٰتُهُمْ اِلَّاۤ اَنَّهُمْ كَفَرُوْا بِاللّٰهِ وَبِرَسُوْلِهٖ وَلَا یَاْتُوْنَ الصَّلٰوةَ اِلَّا وَهُمْ كُسَالٰی وَلَا یُنْفِقُوْنَ اِلَّا وَهُمْ كٰرِهُوْنَ ۟

ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸುತ್ತಾರೆ ಮತ್ತು ಆಲಸ್ಯದಿಂದಲೇ ನಮಾಝ್‌ಗೆ ಬರುತ್ತಾರೆ ಹಾಗೂ ಅತೃಪ್ತಿಯಿಂದ ಖರ್ಚು ಮಾಡುತ್ತಾರೆ ಎಂಬುದೇ ಅವರ ದಾನಗಳು ಸ್ವೀಕೃತವಾಗದಿರುವುದಕ್ಕೆ ಕಾರಣವಾಗಿದೆ. info
التفاسير: