Translation of the Meanings of the Noble Qur'an - Kannada language - Sh. Bashir Misuri

Page Number:close

external-link copy
5 : 63

وَاِذَا قِیْلَ لَهُمْ تَعَالَوْا یَسْتَغْفِرْ لَكُمْ رَسُوْلُ اللّٰهِ لَوَّوْا رُءُوْسَهُمْ وَرَاَیْتَهُمْ یَصُدُّوْنَ وَهُمْ مُّسْتَكْبِرُوْنَ ۟

ಅವರೊಂದಿಗೆ (ಕಪಟಿಗಳೊಂದಿಗೆ) ಬನ್ನಿರಿ ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಕ್ಷಮೆಯಾಚಿಸುತ್ತಾರೆ ಎಂದು ಹೇಳಲಾದರೆ ಅವರು ತಲೆಗಳನ್ನು ಕೊಡವಿಕೊಳ್ಳುತ್ತಾರೆ ಮತ್ತು ಅಹಂಕಾರ ತೋರುತ್ತಾ ವಿಮುಖರಾಗುತ್ತಿರುವುದಾಗಿ ನೀವು ಅವರನ್ನು ಕಾಣುವಿರಿ. info
التفاسير:

external-link copy
6 : 63

سَوَآءٌ عَلَیْهِمْ اَسْتَغْفَرْتَ لَهُمْ اَمْ لَمْ تَسْتَغْفِرْ لَهُمْ ؕ— لَنْ یَّغْفِرَ اللّٰهُ لَهُمْ ؕ— اِنَّ اللّٰهَ لَا یَهْدِی الْقَوْمَ الْفٰسِقِیْنَ ۟

ನೀವು ಅವರಿಗೋಸ್ಕರ ಕ್ಷಮೆಯಾಚಿಸಿದರೂ ಅಥವ ಯಾಚಿಸದಿದ್ದರೂ ಅವರ ಪಾಲಿಗೆ ಸಮಾನವಾಗಿವೆ. ಅಲ್ಲಾಹನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ದುರಾಚಾರಿಗಳಾದ ಜನರಿಗೆ ಸನ್ಮರ‍್ಗವನ್ನು ಕರುಣಿಸುವುದಿಲ್ಲ. info
التفاسير:

external-link copy
7 : 63

هُمُ الَّذِیْنَ یَقُوْلُوْنَ لَا تُنْفِقُوْا عَلٰی مَنْ عِنْدَ رَسُوْلِ اللّٰهِ حَتّٰی یَنْفَضُّوْا ؕ— وَلِلّٰهِ خَزَآىِٕنُ السَّمٰوٰتِ وَالْاَرْضِ وَلٰكِنَّ الْمُنٰفِقِیْنَ لَا یَفْقَهُوْنَ ۟

ಅವರು (ಕಪಟಿಗಳು) ಅಲ್ಲಾಹನ ಸಂದೇಶವಾಹಕರ ಸಂಗಾತಿಗಳಿಗಾಗಿ, ಅವರು ಚದುರಿ ಹೋಗುವವರೆಗೆ ಅವರ ಮೇಲೆ ರ‍್ಚು ಮಾಡಬೇಡಿರಿ ಎಂದು ಹೇಳುವರು. ಇವರೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಭಂಡಾರಗಳು ಅಲ್ಲಾಹನ ಒಡೆತನದಲ್ಲಿವೆ, ಆದರೆ ಈ ಕಪಟ ವಿಶ್ವಾಸಿಗಳು ಗ್ರಹಿಸುವುದಿಲ್ಲ. info
التفاسير:

external-link copy
8 : 63

یَقُوْلُوْنَ لَىِٕنْ رَّجَعْنَاۤ اِلَی الْمَدِیْنَةِ لَیُخْرِجَنَّ الْاَعَزُّ مِنْهَا الْاَذَلَّ ؕ— وَلِلّٰهِ الْعِزَّةُ وَلِرَسُوْلِهٖ وَلِلْمُؤْمِنِیْنَ وَلٰكِنَّ الْمُنٰفِقِیْنَ لَا یَعْلَمُوْنَ ۟۠

ಅವರು ಹೇಳುತ್ತಾರೆ; ನಾವು ಮದೀನಕ್ಕೆ ಮರಳಿದರೆ ಗೌರವಾನ್ವಿತನು ನಿಂದ್ಯನನ್ನು ಹೊರಗಟ್ಟಲಿರುವನು. ಗಮನಿಸಿರಿ ಗೌರವವಂತೂ ಅಲ್ಲಾಹನಿಗೇ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಮಾತ್ರವಿರುವುದು, ಆದರೆ ಕಪಟ ವಿಶ್ವಾಸಿಗಳು ತಿಳಿಯುವುದಿಲ್ಲ. info
التفاسير:

external-link copy
9 : 63

یٰۤاَیُّهَا الَّذِیْنَ اٰمَنُوْا لَا تُلْهِكُمْ اَمْوَالُكُمْ وَلَاۤ اَوْلَادُكُمْ عَنْ ذِكْرِ اللّٰهِ ۚ— وَمَنْ یَّفْعَلْ ذٰلِكَ فَاُولٰٓىِٕكَ هُمُ الْخٰسِرُوْنَ ۟

ಓ ಸತ್ಯವಿಶ್ವಾಸಿಗಳೇ ನಿಮ್ಮ ಸಂಪತ್ತು ಮತ್ತು ಸಂತಾನಗಳು ಅಲ್ಲಾಹನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷö್ಯಗೊಳಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರಾಗಿದ್ದಾರೆ. info
التفاسير:

external-link copy
10 : 63

وَاَنْفِقُوْا مِنْ مَّا رَزَقْنٰكُمْ مِّنْ قَبْلِ اَنْ یَّاْتِیَ اَحَدَكُمُ الْمَوْتُ فَیَقُوْلَ رَبِّ لَوْلَاۤ اَخَّرْتَنِیْۤ اِلٰۤی اَجَلٍ قَرِیْبٍ ۙ— فَاَصَّدَّقَ وَاَكُنْ مِّنَ الصّٰلِحِیْنَ ۟

ನಿಮ್ಮ ಪೈಕಿ ಯಾರಿಗಾದರೂ ಮರಣ ಸಮಯವು ಬಂದಿದ್ದು ಆಗ ಅವನು 'ಓ ನನ್ನ ಪ್ರಭು ನೀನು ನನಗೆ ಇನ್ನೂ ಒಂದಿಷ್ಟು ಕಾಲಾವಕಾಶವನ್ನು ಏಕೆ ಕೊಡುವುದಿಲ್ಲ ? ಹಾಗಿದ್ದರೆ ನಾನು ದಾನ-ರ‍್ಮ ಮಾಡುತ್ತಿದ್ದೆ ಹಾಗು ಸಜ್ಜನರ ಪೈಕಿ ಸೇರುತ್ತಿದ್ದೆ'; ಎಂದು ಹೇಳುವುದಕ್ಕಿಂತ ಮುಂಚೆ ನಾವು ನಿಮಗೆ ನೀಡಿರುವ ಸಂಪತ್ತಿನಿಂದ ನಮ್ಮ ಮರ‍್ಗದಲ್ಲಿ ರ‍್ಚು ಮಾಡಿರಿ. info
التفاسير:

external-link copy
11 : 63

وَلَنْ یُّؤَخِّرَ اللّٰهُ نَفْسًا اِذَا جَآءَ اَجَلُهَا ؕ— وَاللّٰهُ خَبِیْرٌ بِمَا تَعْمَلُوْنَ ۟۠

ಯಾವೊಬ್ಬ ವ್ಯಕ್ತಿಗೆ ಮರಣ ಸಮಯವು ಬಂದುಬಿಟ್ಟರೆ ಅನಂತರ ಅವನಿಗೆ ಅಲ್ಲಾಹನು ಎಂದಿಗೂ ಕಾಲಾವಕಾಶ ಕೊಡುವುದಿಲ್ಲ ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. info
التفاسير: