Translation of the Meanings of the Noble Qur'an - Kannada language - Sh. Bashir Misuri

Page Number:close

external-link copy
4 : 59

ذٰلِكَ بِاَنَّهُمْ شَآقُّوا اللّٰهَ وَرَسُوْلَهٗ ۚ— وَمَنْ یُّشَآقِّ اللّٰهَ فَاِنَّ اللّٰهَ شَدِیْدُ الْعِقَابِ ۟

ಇದೇಕೆಂದರೆ ಅವರು ಅಲ್ಲಾಹನನ್ನೂ. ಅವನ ಸಂದೇಶವಾಹಕರನ್ನೂ ವಿರೋಧಿಸಿದುದರ ನಿಮಿತ್ತವಾಗಿದೆ, ಮತ್ತು ಯಾರು ಅಲ್ಲಾಹನನ್ನು ವಿರೋಧಿಸುತ್ತಾನೋ ಖಂಡಿತವಾಗಿಯೂ ಅಲ್ಲಾಹನು ಅವರಿಗೆ ಅತ್ಯುಗ್ರ ಯಾತನೆಯನ್ನು ನೀಡುವವನಾಗಿದ್ದಾನೆ. info
التفاسير:

external-link copy
5 : 59

مَا قَطَعْتُمْ مِّنْ لِّیْنَةٍ اَوْ تَرَكْتُمُوْهَا قَآىِٕمَةً عَلٰۤی اُصُوْلِهَا فَبِاِذْنِ اللّٰهِ وَلِیُخْزِیَ الْفٰسِقِیْنَ ۟

ನೀವು ಖರ್ಜೂರ ಮರವನ್ನು ಕಡಿದಿದ್ದೂ ಅಥವ ಅವುಗಳನ್ನು ಅವುಗಳ ಕಾಂಡಗಳಲ್ಲಿ ಉಳಿಯಬಿಟ್ಟಿದ್ದೂ ಎಲ್ಲವೂ ಅಲ್ಲಾಹನ ಅಪ್ಪಣೆಯ ಮೇರೆಗೆ ಆಗಿತ್ತು ಹಾಗೂ ಇದು ಧಿಕ್ಕಾರಿಗಳನ್ನು ಅಲ್ಲಾಹನು ಅಪಮಾನಿಸಲೆಂದೂ ಆಗಿತ್ತು. info
التفاسير:

external-link copy
6 : 59

وَمَاۤ اَفَآءَ اللّٰهُ عَلٰی رَسُوْلِهٖ مِنْهُمْ فَمَاۤ اَوْجَفْتُمْ عَلَیْهِ مِنْ خَیْلٍ وَّلَا رِكَابٍ وَّلٰكِنَّ اللّٰهَ یُسَلِّطُ رُسُلَهٗ عَلٰی مَنْ یَّشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟

ಅಲ್ಲಾಹನು ಯಹೂದರಿಂದ ಪಡೆದು ತನ್ನ ಸಂದೇಶವಾಹಕರ ವಶಕ್ಕೆ ಕೊಟ್ಟಿರುವ ಸಂಪತ್ತಿಗಾಗಿ, ನೀವು ಕುದುರೆಗಳನ್ನಾಗಲಿ, ಒಂಟೆಗಳನ್ನಾಗಲಿ ಓಡಿಸಲಿಲ್ಲ. ಆದರೆ ಅಲ್ಲಾಹನು ತನ್ನ ಸಂದೇಶವಾಹಕರನ್ನು ತಾನಿಚ್ಛಿಸಿದವರ ಮೇಲೆ ಅಧಿಕಾರವನ್ನು ಕೊಡುತ್ತಾನೆ. ಅಲ್ಲಾಹನು ಸಕಲ ವಿಷಯಗಳ ಮೇಲೆ ಸಾಮರ್ಥ್ಯ ಉಳ್ಳವನಾಗಿದ್ದಾನೆ. info
التفاسير:

external-link copy
7 : 59

مَاۤ اَفَآءَ اللّٰهُ عَلٰی رَسُوْلِهٖ مِنْ اَهْلِ الْقُرٰی فَلِلّٰهِ وَلِلرَّسُوْلِ وَلِذِی الْقُرْبٰی وَالْیَتٰمٰی وَالْمَسٰكِیْنِ وَابْنِ السَّبِیْلِ ۙ— كَیْ لَا یَكُوْنَ دُوْلَةً بَیْنَ الْاَغْنِیَآءِ مِنْكُمْ ؕ— وَمَاۤ اٰتٰىكُمُ الرَّسُوْلُ فَخُذُوْهُ ۚ— وَمَا نَهٰىكُمْ عَنْهُ فَانْتَهُوْا ۚ— وَاتَّقُوا اللّٰهَ ؕ— اِنَّ اللّٰهَ شَدِیْدُ الْعِقَابِ ۟ۘ

ಅಲ್ಲಾಹನು ತನ್ನ ಸಂದೇಶವಾಹಕರಿಗೆ ಗ್ರಾಮವಾಸಿಗಳಿಂದ ನೀಡಿರುವ ಸಂಪತ್ತು ಅಲ್ಲಾಹನಿಗೂ ಸಂದೇಶವಾಹಕರಿಗೂ, ಆಪ್ತ ಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ ಮತ್ತು ಯಾತ್ರಿಕರಿಗೂ ಆಗಿದೆ. ಇದೇಕೆಂದರೆ ಸಂಪತ್ತು ನಿಮ್ಮಲ್ಲಿನ ಸಿರಿವಂತರ ಕೈಯಲ್ಲಿ ಮಾತ್ರ ಚಲಿಸುತ್ತಾ ಇರಬಾರದೆಂಬುದಾಗಿದೆ ಮತ್ತು ಸಂದೇಶವಾಹಕರು ನಿಮಗೆ ಏನನ್ನು ನೀಡುತ್ತಾರೋ ಅದನ್ನು ಸ್ವೀಕರಿಸಿರಿ ಮತ್ತು ಅವರು ಯಾವುದರಿಂದ ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ, ಖಂಡಿತವಾಗಿಯೂ ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ. info
التفاسير:

external-link copy
8 : 59

لِلْفُقَرَآءِ الْمُهٰجِرِیْنَ الَّذِیْنَ اُخْرِجُوْا مِنْ دِیَارِهِمْ وَاَمْوَالِهِمْ یَبْتَغُوْنَ فَضْلًا مِّنَ اللّٰهِ وَرِضْوَانًا وَّیَنْصُرُوْنَ اللّٰهَ وَرَسُوْلَهٗ ؕ— اُولٰٓىِٕكَ هُمُ الصّٰدِقُوْنَ ۟ۚ

ಆ ಸೊತ್ತು ತಮ್ಮ ಮನೆಗಳಿಂದಲೂ, ತಮ್ಮ ಸೊತ್ತು ಸಂಪತ್ತುಗಳಿAದಲೂ ಹೊರ ಹಾಕಲಾದ ಬಡ ಮುಹಾಜಿರ್‌ಗಳಿಗಾಗಿದೆ. ಅವರು ಅಲ್ಲಾಹನ ಕಡೆಯ ಅನುಗ್ರಹ ಮತ್ತು ಸಂಪ್ರೀತಿಯನ್ನು ಬಯಸುತ್ತಾರೆ ಹಾಗೂ ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಸಹಾಯ ಮಾಡುತ್ತಾರೆ, ಅವರೇ ಸತ್ಯವಂತರಾಗಿದ್ದಾರೆ. info
التفاسير:

external-link copy
9 : 59

وَالَّذِیْنَ تَبَوَّءُو الدَّارَ وَالْاِیْمَانَ مِنْ قَبْلِهِمْ یُحِبُّوْنَ مَنْ هَاجَرَ اِلَیْهِمْ وَلَا یَجِدُوْنَ فِیْ صُدُوْرِهِمْ حَاجَةً مِّمَّاۤ اُوْتُوْا وَیُؤْثِرُوْنَ عَلٰۤی اَنْفُسِهِمْ وَلَوْ كَانَ بِهِمْ خَصَاصَةٌ ۫ؕ— وَمَنْ یُّوْقَ شُحَّ نَفْسِهٖ فَاُولٰٓىِٕكَ هُمُ الْمُفْلِحُوْنَ ۟ۚ

ಮತ್ತು ಆ ಸೊತ್ತು ಮುಹಾಜಿರ್‌ಗಳ ಆಗಮನಕ್ಕೆ ಮುಂಚೆ ಸತ್ಯವಿಶ್ವಾಸ ಸ್ವೀಕರಿಸಿ ಮದೀನಾದಲ್ಲಿ ವಾಸವಾಗಿದ್ದವರಿಗೂ ಇದೆ. ಅವರು ತಮ್ಮೆಡೆಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ ಹಾಗೂ ಮುಹಾಜಿರ್‌ಗಳಿಗೆ ನೀಡಲಾದ ಧನದ ಕುರಿತು ಅವರು ತಮ್ಮ ಹೃದಯಗಳಲ್ಲಿ ಯಾವ ಪ್ರಯಾಸವನ್ನು ಕಾಣುವುದಿಲ್ಲ ಮತ್ತು ಸ್ವತಃ ತಮಗೆ ಅಗತ್ಯವಿದ್ದರೂ ತಮ್ಮ ಮೇಲೆ ಇತರರಿಗೆ ಆದ್ಯತೆ ನೀಡುತ್ತಾರೆ (ವಸ್ತುತಃ) ಯಾರು ತನ್ನಲ್ಲಿನ ಲೋಭತನದಿಂದ ರಕ್ಷಿಸಲ್ಪಡುತ್ತಾರೋ ಅವರೇ ವಿಜಯಿಗಳು. info
التفاسير: