Translation of the Meanings of the Noble Qur'an - Kannada language - Sh. Bashir Misuri

external-link copy
6 : 4

وَابْتَلُوا الْیَتٰمٰی حَتّٰۤی اِذَا بَلَغُوا النِّكَاحَ ۚ— فَاِنْ اٰنَسْتُمْ مِّنْهُمْ رُشْدًا فَادْفَعُوْۤا اِلَیْهِمْ اَمْوَالَهُمْ ۚ— وَلَا تَاْكُلُوْهَاۤ اِسْرَافًا وَّبِدَارًا اَنْ یَّكْبَرُوْا ؕ— وَمَنْ كَانَ غَنِیًّا فَلْیَسْتَعْفِفْ ۚ— وَمَنْ كَانَ فَقِیْرًا فَلْیَاْكُلْ بِالْمَعْرُوْفِ ؕ— فَاِذَا دَفَعْتُمْ اِلَیْهِمْ اَمْوَالَهُمْ فَاَشْهِدُوْا عَلَیْهِمْ ؕ— وَكَفٰی بِاللّٰهِ حَسِیْبًا ۟

ನೀವು ಅನಾಥರನ್ನು ಅವರು ಪ್ರಾಯಕ್ಕೆ ತಲುಪುವ ತನಕ ಸುಧಾರಿಸುತ್ತಾ, ಪರೀಕ್ಷಿಸಿರಿ. ನೀವು ಅವರಲ್ಲಿ ವ್ಯವಹಾರ ಪ್ರಜ್ಞೆಯನ್ನು ಕಂಡರೆ ಅವರ ಸಂಪತ್ತನ್ನು ಅವರಿಗೆ ಹಸ್ತಾಂತರಿಸಿರಿ. ಅವರು ಪ್ರೌಢರಾಗುತ್ತಿದ್ದಾರೆಂಬ ಭಯದಿಂದ ಅವರ ಸಂಪತ್ತನ್ನು ಲಗುಬಗನೆ ಅಮಿತವ್ಯಯದಿಂದ ಹಾಳು ಮಾಡದಿರಿ. ಶ್ರೀಮಂತರು (ಅವರ ಸಂಪತ್ತಿನಿAದ) ತಮ್ಮನ್ನು ದೂರವಿಡಲಿ. ಆದರೆ ನಿರ್ಗತಿಕನು ಅಗತ್ಯವಿದ್ದರೆ ಶಿಷ್ಟಾಚಾರದಂತೆ ನಿರ್ದಿಷ್ಟವಾಗಿ ತಿನ್ನಲಿ. ಅನಂತರ ಅವರ ಸೊತ್ತನ್ನು ಅವರಿಗೆ ನೀವು ಹಸ್ತಾಂತರಿಸುವಾಗ ಜನರನ್ನು ಸಾಕ್ಷಿಯಾಗಿರಿಸಿಕೊಳ್ಳಿರಿ ಲೆಕ್ಕಪರಿಶೋಧನೆಗೆ ಅಲ್ಲಾಹನೇ ಸಾಕು. info
التفاسير: