Translation of the Meanings of the Noble Qur'an - Kannada language - Sh. Bashir Misuri

external-link copy
25 : 4

وَمَنْ لَّمْ یَسْتَطِعْ مِنْكُمْ طَوْلًا اَنْ یَّنْكِحَ الْمُحْصَنٰتِ الْمُؤْمِنٰتِ فَمِنْ مَّا مَلَكَتْ اَیْمَانُكُمْ مِّنْ فَتَیٰتِكُمُ الْمُؤْمِنٰتِ ؕ— وَاللّٰهُ اَعْلَمُ بِاِیْمَانِكُمْ ؕ— بَعْضُكُمْ مِّنْ بَعْضٍ ۚ— فَانْكِحُوْهُنَّ بِاِذْنِ اَهْلِهِنَّ وَاٰتُوْهُنَّ اُجُوْرَهُنَّ بِالْمَعْرُوْفِ مُحْصَنٰتٍ غَیْرَ مُسٰفِحٰتٍ وَّلَا مُتَّخِذٰتِ اَخْدَانٍ ۚ— فَاِذَاۤ اُحْصِنَّ فَاِنْ اَتَیْنَ بِفَاحِشَةٍ فَعَلَیْهِنَّ نِصْفُ مَا عَلَی الْمُحْصَنٰتِ مِنَ الْعَذَابِ ؕ— ذٰلِكَ لِمَنْ خَشِیَ الْعَنَتَ مِنْكُمْ ؕ— وَاَنْ تَصْبِرُوْا خَیْرٌ لَّكُمْ ؕ— وَاللّٰهُ غَفُوْرٌ رَّحِیْمٌ ۟۠

ಮತ್ತು ನಿಮ್ಮ ಪೈಕಿ ಯಾರಿಗೆ ಸತ್ಯವಿಶ್ವಾಸಿನಿಗಳಾದ ಸ್ವತಂತ್ರ ಸ್ತಿçÃಯರನ್ನು ವಿವಾಹವಾಗುವ ಸಾಮರ್ಥ್ಯವಿಲ್ಲವೋ ಅವರು ನಿಮ್ಮ ಒಡೆತನದಲ್ಲಿರುವ ಸತ್ಯವಿಶ್ವಾಸಿಗಳಾದ ಗುಲಾಮ ಸ್ತಿçÃಯರಲ್ಲಿ ಯಾರನ್ನಾದರೂ (ವಿವಾಹ ಮಾಡಿಕೊಳ್ಳÀಬಹುದು) ಅಲ್ಲಾಹನು ನಿಮ್ಮ ಕರ್ಮಗಳ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ. ನೀವು ಪರಸ್ಪರರು ಒಂದೇ ಆಗಿರುವಿರಿ. ಆದ್ದರಿಂದ ಅವರ ಒಡೆಯರ ಅನುಮತಿಯೊಂದಿಗೆ ವಿವಾಹವಾಗಿರಿ ಮತ್ತು ನೀವು ಶಿಷ್ಟಾಚಾರಕ್ಕಾನುಸಾರವಾಗಿ ವಧುಧನವನ್ನು ಅವರಿಗೆ ನೀಡಿರಿ. ಅವರು ಚಾರಿತ್ರö್ಯವಂತರಾಬೇಕೇ ಹೊರತು ಬಹಿರಂಗವಾಗಿ ನೀಚ ಕೃತ್ಯವನ್ನೇಸಗುವವರೂ, ರಹಸ್ಯ ಸಂಬAಧವಿರಿಸಿ ಕೊಳ್ಳುವವರೂ ಆಗಿರಬಾರದು. ಅವರು ವಿವಾಹಿತರಾದ ಬಳಿಕ ನಿರ್ಲಜ್ಜೆಯ ಕೃತ್ಯವನ್ನೆಸಗಿದರೆ ಸ್ವತಂತ್ರ ಸ್ತಿçÃಯರಿಗೆ ಕೊಡಲಾಗುವ ಶಿಕ್ಷೆಯ ಅರ್ಧಾಂಶವನ್ನು ಅವರಿಗೆ ಕೊಡಲಾಗುವುದು. (ದಾಸಿಯರನ್ನು ವಿವಾಹವಾಗುವ) ಈ ಅನುಮತಿಯು ನಿಮ್ಮ ಪೈಕಿ ಪಾಪದ ಭಯ ಹೊಂದಿರುವವರಿಗಾಗಿರುತ್ತದೆ ಮತ್ತು ನಿಮ್ಮನ್ನು ನಿಂಯತ್ರಿಸಿಕೊAಡರೆ ಅದು ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير: