Translation of the Meanings of the Noble Qur'an - Kannada language - Sh. Bashir Misuri

external-link copy
193 : 3

رَبَّنَاۤ اِنَّنَا سَمِعْنَا مُنَادِیًا یُّنَادِیْ لِلْاِیْمَانِ اَنْ اٰمِنُوْا بِرَبِّكُمْ فَاٰمَنَّا ۖۗ— رَبَّنَا فَاغْفِرْ لَنَا ذُنُوْبَنَا وَكَفِّرْ عَنَّا سَیِّاٰتِنَا وَتَوَفَّنَا مَعَ الْاَبْرَارِ ۟ۚ

ನಮ್ಮ ಪ್ರಭೂ, ಓರ್ವ ಕರೆ ನೀಡುವಾತನು: 'ನೀವು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಡಿರಿ' ಎಂದು ಹೇಳುತ್ತಾ ಸತ್ಯವಿಶ್ವಾಸದೆಡೆಗೆ ಕರೆಯುವುದನ್ನು ನಾವು ಆಲಿಸಿದೆವು. ಆಗ ನಾವು ವಿಶ್ವಾಸವಿಟ್ಟೆವು. ಆದುದರಿಂದ ನಮ್ಮ ಪ್ರಭು, ನಮ್ಮ ಪಾಪಗಳನ್ನು ಕ್ಷಮಿಸಿಬಿಡು ಮತ್ತು ನಮ್ಮ ಕೆಡುಕುಗಳನ್ನು ನಮ್ಮಿಂದ ದೂರ ಮಾಡು ಮತ್ತು ಸಜ್ಜನರ ಜೊತೆ ನಮಗೆ ಮರಣವನ್ನು ಕೊಡು. info
التفاسير: