Translation of the Meanings of the Noble Qur'an - Kannada language - Sh. Bashir Misuri

external-link copy
196 : 2

وَاَتِمُّوا الْحَجَّ وَالْعُمْرَةَ لِلّٰهِ ؕ— فَاِنْ اُحْصِرْتُمْ فَمَا اسْتَیْسَرَ مِنَ الْهَدْیِ ۚ— وَلَا تَحْلِقُوْا رُءُوْسَكُمْ حَتّٰی یَبْلُغَ الْهَدْیُ مَحِلَّهٗ ؕ— فَمَنْ كَانَ مِنْكُمْ مَّرِیْضًا اَوْ بِهٖۤ اَذًی مِّنْ رَّاْسِهٖ فَفِدْیَةٌ مِّنْ صِیَامٍ اَوْ صَدَقَةٍ اَوْ نُسُكٍ ۚ— فَاِذَاۤ اَمِنْتُمْ ۥ— فَمَنْ تَمَتَّعَ بِالْعُمْرَةِ اِلَی الْحَجِّ فَمَا اسْتَیْسَرَ مِنَ الْهَدْیِ ۚ— فَمَنْ لَّمْ یَجِدْ فَصِیَامُ ثَلٰثَةِ اَیَّامٍ فِی الْحَجِّ وَسَبْعَةٍ اِذَا رَجَعْتُمْ ؕ— تِلْكَ عَشَرَةٌ كَامِلَةٌ ؕ— ذٰلِكَ لِمَنْ لَّمْ یَكُنْ اَهْلُهٗ حَاضِرِی الْمَسْجِدِ الْحَرَامِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ شَدِیْدُ الْعِقَابِ ۟۠

ನೀವು ಅಲ್ಲಾಹನಿಗಾಗಿ ಹಜ್ಜ್ ಹಾಗೂ ಉಮ್ರಾವನ್ನು ನೆರವೇರಿಸಿರಿ. ಇನ್ನು ನೀವು ತಡೆಯಲ್ಪಟ್ಟರೆ ಬಲಿಮೃಗಗಳಲ್ಲಿ ಸಾಧ್ಯವಾಗುವುದನ್ನು ಬಲಿ ಅರ್ಪಿಸಿರಿ. ನೀವು ನಿಮ್ಮ ತಲೆಗಳನ್ನು ಬಲಿಮೃಗವು ಅದರ ಬಲಿದಾಣವನ್ನು ತಲುಪುವವರೆಗೆ ಕೇಶ ಮುಂಡನೆ ಮಾಡಬೇಡಿರಿ. ಆದರೆ ನಿಮ್ಮ ಪೈಕಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಅವನ ತಲೆಯಲ್ಲಿ ಏನಾದರೂ ತೊಂದರೆಯಿದ್ದರೆ (ಅವನು ಕೇಶಮುಂಡನ ಮಾಡಿಕೊಂಡರೆ) ಉಪವಾಸಗಳಿಂದ ಇಲ್ಲವೇ ದಾನಧರ್ಮಗಳಿಂದ ಇಲ್ಲವೇ ಬಲಿದಾನಗಳಿಂದ ಪ್ರಾಯಶ್ಚಿತ್ತ ನೀಡಬೇಕಾಗಿದೆ. ಇನ್ನು ನೀವು ನಿರ್ಭಯ ಸ್ಥಿತಿಯಲ್ಲಿದ್ದರೆ ಯಾರಾದರೂ ಹಜ್ಜ್-ಎ-ತಮತ್ತೂ ಮಾಡುತ್ತಾನೋ ಅವನು ಸಾಧ್ಯವಾಗುವ ಬಲಿ ಮೃಗವನ್ನು ಬಲಿ ನೀಡಲಿ ಇನ್ನೂ ಸಾಮರ್ಥ್ಯವಿಲ್ಲದವನು ಮೂರು ದಿನ ಹಜ್ಜ್ನ ವೇಳೆಯಲ್ಲೂ, ಏಳುದಿನ ಮರಳಿ ಹೋದಾಗಲೂ ಉಪವಾಸ ಆಚರಿಸಬೇಕು. ಇವು ಒಟ್ಟು ಹತ್ತು ದಿನಗಳಾದವು. ಈ ನಿಯಮವು ಯಾರ ಕುಟುಂಬವು ಮಸ್ಜಿದುಲ್ ಹರಾಮ್‌ನ ಪರಿಸರದಲ್ಲಿ ಇಲ್ಲವೋ ಅವರಿಗೆ ಅನ್ವಯವಾಗಿರುವುದು. ಓ ಜನರೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅಲ್ಲಾಹನು ಅತ್ಯುಗ್ರವಾಗಿ ಶಿಕ್ಷಿಸುವವನಾಗಿದ್ದಾನೆಂದು ನೀವು ತಿಳಿದುಕೊಳ್ಳಿರಿ. info
التفاسير: