Translation of the Meanings of the Noble Qur'an - Kannada language - Sh. Bashir Misuri

Page Number:close

external-link copy
15 : 12

فَلَمَّا ذَهَبُوْا بِهٖ وَاَجْمَعُوْۤا اَنْ یَّجْعَلُوْهُ فِیْ غَیٰبَتِ الْجُبِّ ۚ— وَاَوْحَیْنَاۤ اِلَیْهِ لَتُنَبِّئَنَّهُمْ بِاَمْرِهِمْ هٰذَا وَهُمْ لَا یَشْعُرُوْنَ ۟

ಅನಂತರ ಅವರು (ತಂದೆಗೆ ಒತ್ತಾಯಪಡಿಸಿ) ಅವನನ್ನು ಕರೆದುಕೊಂಡು ಹೋದರು ಮತ್ತು ಅವರೆಲ್ಲರೂ ಅವನನ್ನು ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಹಾಕಲೆಂಬ ದೃಢ ನಿರ್ಧಾರಕ್ಕೆ ಬಂದಾಗ ನಾವು ಯೂಸುಫ್‌ರವರ ಕಡೆಗೆ ದಿವ್ಯವಾಣಿ ಮಾಡಿದೆವು. ಖಂಡಿತ ನೀನು ಅವರ ಈ ಕೃತ್ಯದ ಕುರಿತು ಅವರು ತಿಳಿದೇ ಇಲ್ಲದಂತಹ ಸ್ಥಿತಿಯಲ್ಲಿ ತಿಳಿಸಿಕೊಡಲಿರುವೆ info
التفاسير:

external-link copy
16 : 12

وَجَآءُوْۤ اَبَاهُمْ عِشَآءً یَّبْكُوْنَ ۟ؕ

ರಾತ್ರಿಯ ವೇಳೆ ಅವರೆಲ್ಲರೂ ತಮ್ಮ ತಂದೆಯ ಬಳಿ ಅಳುತ್ತಾ ಬಂದರು. info
التفاسير:

external-link copy
17 : 12

قَالُوْا یٰۤاَبَانَاۤ اِنَّا ذَهَبْنَا نَسْتَبِقُ وَتَرَكْنَا یُوْسُفَ عِنْدَ مَتَاعِنَا فَاَكَلَهُ الذِّئْبُ ۚ— وَمَاۤ اَنْتَ بِمُؤْمِنٍ لَّنَا وَلَوْ كُنَّا صٰدِقِیْنَ ۟

ಮತ್ತೆ ಹೇಳತೊಡಗಿದರು ನಮ್ಮ ತಂದೆಯೇ ನಾವು ಪರಸ್ಪರ ಓಟದ ಸ್ಪರ್ಧೆಯಲ್ಲಿ ನಿರತರಾಗಿದ್ದೆವು. ಯೂಸುಫ್‌ರವರನ್ನು ನಮ್ಮ ಸಾಮಾನುಗಳ ಬಳಿ ಬಿಟ್ಟಿದ್ದೆವು, ಅಷ್ಟರಲ್ಲಿ ಅವನನ್ನು ತೋಳವು ತಿಂದುಬಿಟ್ಟಿತು. ನಾವು ಸತ್ಯವಂತರಾಗಿದ್ದರು ನೀವಂತೂ ನಮ್ಮ ಮಾತನ್ನು ನಂಬುವವರೇ ಅಲ್ಲ. info
التفاسير:

external-link copy
18 : 12

وَجَآءُوْ عَلٰی قَمِیْصِهٖ بِدَمٍ كَذِبٍ ؕ— قَالَ بَلْ سَوَّلَتْ لَكُمْ اَنْفُسُكُمْ اَمْرًا ؕ— فَصَبْرٌ جَمِیْلٌ ؕ— وَاللّٰهُ الْمُسْتَعَانُ عَلٰی مَا تَصِفُوْنَ ۟

ಅವರು ಯೂಸುಫ್‌ರ ಅಂಗಿಗೆ ಹುಸಿ ರಕ್ತ ಹಚ್ಚಿ ತಂದಿದ್ದರು. ತಂದೆಯು ಹೇಳಿದರು; (ವಾಸ್ತವಿಕತೆ ಹೀಗಿಲ್ಲ) ಆದರೆ ನಿಮಗೆ ನಿಮ್ಮ ಮನಸ್ಸು ಈ ಸ್ವರಚಿತ ಕೃತ್ಯವನ್ನು ಸುಂದರವಾಗಿ ತೋರಿಸಿದೆ. ಇನ್ನು ನನಗೆ ಉತ್ತಮ ಸಹನÉಯೇ ಲೇಸು ಮತ್ತು ನಿಮ್ಮ ಕಲ್ಪಿತ ಕಥೆಗಳ ಮೇಲೆ ಅಲ್ಲಾಹನಿಂದಲೇ ಸಹಾಯ ಬೇಡಲಾಗುವುದು. info
التفاسير:

external-link copy
19 : 12

وَجَآءَتْ سَیَّارَةٌ فَاَرْسَلُوْا وَارِدَهُمْ فَاَدْلٰی دَلْوَهٗ ؕ— قَالَ یٰبُشْرٰی هٰذَا غُلٰمٌ ؕ— وَاَسَرُّوْهُ بِضَاعَةً ؕ— وَاللّٰهُ عَلِیْمٌۢ بِمَا یَعْمَلُوْنَ ۟

ಅಲ್ಲಿಗೆ ಯಾತ್ರಾ ತಂಡವೊAದು ಬಂತು ಮತ್ತು ಅವರು ತಮ್ಮ ನೀರು ಸೇದುವವನನ್ನು ಕಳುಹಿಸಿದರು, ಅವನು ತನ್ನ ತೊಟ್ಟಿಯನ್ನು ಇಳಿಸಿದಾಗ ಹೇಳತೊಡಗಿದನು, ಆಹಾ ಶುಭಸುದ್ದಿ ಇದೆ! ಇವನೊಬ್ಬ ಬಾಲಕನಾಗಿದ್ದಾನೆ. ಅವರು ಅವನನ್ನು ವ್ಯಾಪಾರ ಸರಕನ್ನಾಗಿಸಿ ಅಡಗಿಸಿಟ್ಟರು ಮತ್ತು ಅಲ್ಲಾಹನು ಅವರು ಮಾಡುತ್ತಿದ್ದ ಕೃತ್ಯಗಳ ಕುರಿತು ಅರಿವುಳ್ಳವನಾಗಿದ್ದನು info
التفاسير:

external-link copy
20 : 12

وَشَرَوْهُ بِثَمَنٍ بَخْسٍ دَرَاهِمَ مَعْدُوْدَةٍ ۚ— وَكَانُوْا فِیْهِ مِنَ الزَّاهِدِیْنَ ۟۠

ಮತ್ತು ಅವರು ಅವನನ್ನು ಅತ್ಯಲ್ಪ ಬೆಲೆಗೆ ಕೆಲವು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಅವರಂತೂ ಯೂಸುಫ್‌ರವರ ವಿಚಾರದಲ್ಲಿ ಅತ್ಯಂತ ನಿರಾಸಕ್ತರಾಗಿದ್ದರು. info
التفاسير:

external-link copy
21 : 12

وَقَالَ الَّذِی اشْتَرٰىهُ مِنْ مِّصْرَ لِامْرَاَتِهٖۤ اَكْرِمِیْ مَثْوٰىهُ عَسٰۤی اَنْ یَّنْفَعَنَاۤ اَوْ نَتَّخِذَهٗ وَلَدًا ؕ— وَكَذٰلِكَ مَكَّنَّا لِیُوْسُفَ فِی الْاَرْضِ ؗ— وَلِنُعَلِّمَهٗ مِنْ تَاْوِیْلِ الْاَحَادِیْثِ ؕ— وَاللّٰهُ غَالِبٌ عَلٰۤی اَمْرِهٖ وَلٰكِنَّ اَكْثَرَ النَّاسِ لَا یَعْلَمُوْنَ ۟

ಈಜಿಪ್ಟಿನವರಲ್ಲಿ ಅವರನ್ನು ಖರೀಸಿದವನು ತನ್ನ ಪತ್ನಿಗೆ ಹೇಳಿದನು; ನೀನು ಅವನನ್ನು ಗೌರವದಿಂದ ಇರಿಸು ಪ್ರಾಯಶಃ ಅವನು ನಮಗೆ ಪ್ರಯೋಜನಕಾರಿಯಾಗಬಹುದು. ಅಥವಾ ನಾವು ಅವನನ್ನು ನಮ್ಮ ಪುತ್ರನನ್ನಾಗಿಯು ಮಾಡಿಕೊಳ್ಳಬಹುದು. ಹೀಗೆ ನಾವು ಈಜಿಪ್ಟ್ನ ಭೂಮಿಯಲ್ಲಿ ಯೂಸುಫ್‌ರವರಿಗೆ ನೆಲೆಯನ್ನು ಸುಭದ್ರವಾಗಿಸಿಕೊಟ್ಟೆವು ಮತ್ತು ನಾವು ಅವರಿಗೆ ವಿಷಯಗಳ ಆಳಕ್ಕೆ ತಲುಪುವ ಜ್ಞಾನವನ್ನು ಕಲಿಸಿಕೊಟ್ಟೆವು ಮತ್ತು ಅಲ್ಲಾಹನು ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಸಾಮರ್ಥ್ಯವುಳ್ಳವನಾಗಿದ್ದಾನೆ. ಆದರೆ ಹೆಚ್ಚಿನ ಜನರು ಅಜ್ಞಾನಿಗಳಾಗಿರುತ್ತಾರೆ. info
التفاسير:

external-link copy
22 : 12

وَلَمَّا بَلَغَ اَشُدَّهٗۤ اٰتَیْنٰهُ حُكْمًا وَّعِلْمًا ؕ— وَكَذٰلِكَ نَجْزِی الْمُحْسِنِیْنَ ۟

ಮತ್ತು ಯೂಸುಫ್ ಯೌವ್ವನಕ್ಕೆ ತಲುಪಿದಾಗ ನಾವು ಅವರಿಗೆ ಯುಕ್ತಿಯನ್ನು ಸುಜ್ಞಾನವನ್ನು ದಯಪಾಲಿಸಿದೆವು ಮತ್ತು ಸಜ್ಜನರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ. info
التفاسير: