Übersetzung der Bedeutungen von dem heiligen Quran - Die Kannada-Übersetzung - Hamza Batur.

external-link copy
71 : 6

قُلْ اَنَدْعُوْا مِنْ دُوْنِ اللّٰهِ مَا لَا یَنْفَعُنَا وَلَا یَضُرُّنَا وَنُرَدُّ عَلٰۤی اَعْقَابِنَا بَعْدَ اِذْ هَدٰىنَا اللّٰهُ كَالَّذِی اسْتَهْوَتْهُ الشَّیٰطِیْنُ فِی الْاَرْضِ حَیْرَانَ ۪— لَهٗۤ اَصْحٰبٌ یَّدْعُوْنَهٗۤ اِلَی الْهُدَی ائْتِنَا ؕ— قُلْ اِنَّ هُدَی اللّٰهِ هُوَ الْهُدٰی ؕ— وَاُمِرْنَا لِنُسْلِمَ لِرَبِّ الْعٰلَمِیْنَ ۟ۙ

ಹೇಳಿರಿ: “ಅಲ್ಲಾಹನನ್ನು ಬಿಟ್ಟು ನಮಗೆ ಉಪಕಾರ ಅಥವಾ ತೊಂದರೆ ಮಾಡಲು ಸಾಧ್ಯವಿಲ್ಲದವರನ್ನು ನಾವು ಕರೆದು ಪ್ರಾರ್ಥಿಸಬೇಕೇ? ಅಲ್ಲಾಹು ನಮಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ನಾವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿ ಹೋಗುವಂತಾಗಬೇಕೇ? “ನಮ್ಮ ಬಳಿ ಬಾ” ಎಂದು ಸನ್ಮಾರ್ಗಕ್ಕೆ ಕರೆಯುವ ಗೆಳೆಯರಿದ್ದೂ ಸಹ, ಶೈತಾನರ ಆಮಿಷಕ್ಕೆ ಬಲಿಯಾಗಿ ಭೂಮಿಯಲ್ಲಿ ದಿಗ್ಭ್ರಾಂತನಾಗಿ ಅಲೆದಾಡುವ ವ್ಯಕ್ತಿಯಂತೆ ನಾವಾಗಬೇಕೇ?” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ.” info
التفاسير: