Übersetzung der Bedeutungen von dem heiligen Quran - Die Kannada-Übersetzung - Hamza Batur.

external-link copy
2 : 5

یٰۤاَیُّهَا الَّذِیْنَ اٰمَنُوْا لَا تُحِلُّوْا شَعَآىِٕرَ اللّٰهِ وَلَا الشَّهْرَ الْحَرَامَ وَلَا الْهَدْیَ وَلَا الْقَلَآىِٕدَ وَلَاۤ آٰمِّیْنَ الْبَیْتَ الْحَرَامَ یَبْتَغُوْنَ فَضْلًا مِّنْ رَّبِّهِمْ وَرِضْوَانًا ؕ— وَاِذَا حَلَلْتُمْ فَاصْطَادُوْا ؕ— وَلَا یَجْرِمَنَّكُمْ شَنَاٰنُ قَوْمٍ اَنْ صَدُّوْكُمْ عَنِ الْمَسْجِدِ الْحَرَامِ اَنْ تَعْتَدُوْا ۘ— وَتَعَاوَنُوْا عَلَی الْبِرِّ وَالتَّقْوٰی ۪— وَلَا تَعَاوَنُوْا عَلَی الْاِثْمِ وَالْعُدْوَانِ ۪— وَاتَّقُوا اللّٰهَ ؕ— اِنَّ اللّٰهَ شَدِیْدُ الْعِقَابِ ۟

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಲಾಂಛನಗಳಿಗೆ ಅಗೌರವ ತೋರಬೇಡಿ. ಪವಿತ್ರ ತಿಂಗಳಿಗೆ, ಬಲಿಮೃಗಗಳಿಗೆ, (ಅವುಗಳ ಕೊರಳಲ್ಲಿರುವ) ಪದಕಗಳಿಗೆ, ಮತ್ತು ತಮ್ಮ ಪರಿಪಾಲಕನ (ಅಲ್ಲಾಹನ) ಔದಾರ್ಯ ಹಾಗೂ ಸಂಪ್ರೀತಿಯನ್ನು ಹುಡುಕುತ್ತಾ ಪವಿತ್ರ ಭವನಕ್ಕೆ ತೀರ್ಥಯಾತ್ರೆ ಮಾಡುವವರಿಗೆ (ಅಗೌರವ ತೋರಬೇಡಿ). ನೀವು ಇಹ್ರಾಮ್‍ನಿಂದ ಮುಕ್ತರಾದರೆ ಬೇಟೆಯಾಡಿರಿ. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದರು ಎಂಬ ಕಾರಣದಿಂದ ಕೆಲವು ಜನರೊಡನೆ ನಿಮಗಿರುವ ದ್ವೇಷವು ಅತಿರೇಕವೆಸಗುವಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿರೇಕದಲ್ಲಿ ಪರಸ್ಪರ ಸಹಕರಿಸಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ. info
التفاسير: