[1] ಪ್ರಾಚೀನ ಸಬಾ ಸಾಮ್ರಾಜ್ಯ ಎಂದರೆ ಇಂದಿನ ಯಮನ್ ದೇಶ.
[1] ಅವರು ಬೆಟ್ಟದಿಂದ ಹರಿದು ಬರುವ ನೀರನ್ನು ತಡೆಗಟ್ಟಿ ಕೃಷಿಗೆ ಉಪಯೋಗಿಸಲು ಅಣೆಕಟ್ಟು ನಿರ್ಮಿಸಿದ್ದರು. ಬೆಟ್ಟದಿಂದ ಉಕ್ಕಿ ಬಂದ ಪ್ರವಾಹದಿಂದ ಈ ಅಣೆಕಟ್ಟು ಒಡೆದು ಅವರ ಹೊಲ ಬೆಳೆಗಳೆಲ್ಲವೂ ನಾಶವಾದವು. ನಂತರ ಅಲ್ಲಿ ಕಹಿ ಹಣ್ಣುಗಳು, ಪಕ್ಕೆ ಮರಗಳು ಮತ್ತು ಬೋರೆ ಮರಗಳ ಹೊರತು ಬೇರೇನೂ ಬೆಳೆಯಲಿಲ್ಲ.
[1] ಇದು ಸಿರಿಯಾ ಮತ್ತು ಯಮನ್‌ನ ನಡುವಿನಲ್ಲಿದ್ದ ಹೆದ್ದಾರಿಯ ಬಗ್ಗೆಯಾಗಿದೆ. ಈ ಹೆದ್ದಾರಿಯಲ್ಲಿ 4,700 ಊರುಗಳಿದ್ದವು ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಊರುಗಳಿದ್ದುದರಿಂದ ಈ ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಆಹಾರ-ಪಾನೀಯ ಮತ್ತು ವಸತಿಗಾಗಿ ಪರದಾಡಬೇಕಾಗಿ ಬರುತ್ತಿರಲಿಲ್ಲ. ಹಾಗೆಯೇ ಕಳ್ಳರು ದರೋಡೆಕೋರರ ಭಯವೂ ಇರಲಿಲ್ಲ.
[1] ಯಮನ್ ನಿವಾಸಿಗಳಿಗೆ ಈ ಹೆದ್ದಾರಿ ಪ್ರಯಾಣವು ಸುರಕ್ಷಿತ ಮತ್ತು ಅನುಕೂಲಕರವಾಗಿದ್ದರೂ ಸಹ ಅವರು ಅದನ್ನು ಅಸಹ್ಯಪಟ್ಟರು. ಈ ಹೆದ್ದಾರಿ ಕೂಡ ಜಗತ್ತಿನ ಇತರ ಹೆದ್ದಾರಿಗಳಂತೆ ದುರ್ಗಮ ಮತ್ತು ಕಷ್ಟಕರವಾಗಿಬೇಕೆಂದು ಅವರು ಬಯಸಿದರು.