Übersetzung der Bedeutungen von dem heiligen Quran - Die Kannada-Übersetzung - Hamza Batur.

Nummer der Seite:close

external-link copy
42 : 30

قُلْ سِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الَّذِیْنَ مِنْ قَبْلُ ؕ— كَانَ اَكْثَرُهُمْ مُّشْرِكِیْنَ ۟

ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿ ಹಿಂದಿನ ಕಾಲದ ಜನರ ಅಂತ್ಯವು ಹೇಗಿತ್ತೆಂದು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.” info
التفاسير:

external-link copy
43 : 30

فَاَقِمْ وَجْهَكَ لِلدِّیْنِ الْقَیِّمِ مِنْ قَبْلِ اَنْ یَّاْتِیَ یَوْمٌ لَّا مَرَدَّ لَهٗ مِنَ اللّٰهِ یَوْمَىِٕذٍ یَّصَّدَّعُوْنَ ۟

ಯಾರಿಗೂ ತಡೆಯೊಡ್ಡಲು ಸಾಧ್ಯವಾಗದ ಒಂದು ದಿನ ಬರುವುದಕ್ಕೆ ಮೊದಲು ನೀವು ನಿಮ್ಮ ಮುಖವನ್ನು ನೇರವಾದ ಧರ್ಮದ ಕಡೆಗೆ ತಿರುಗಿಸಿರಿ. ಅಂದು ಎಲ್ಲರೂ ಬೇರೆ ಬೇರೆಯಾಗಿ ಬಿಡುವರು. info
التفاسير:

external-link copy
44 : 30

مَنْ كَفَرَ فَعَلَیْهِ كُفْرُهٗ ۚ— وَمَنْ عَمِلَ صَالِحًا فَلِاَنْفُسِهِمْ یَمْهَدُوْنَ ۟ۙ

ಯಾರು ಸತ್ಯವನ್ನು ನಿಷೇಧಿಸುತ್ತಾರೋ ಅವರ ಸತ್ಯನಿಷೇಧವು ಅವರಿಗೇ ಕೆಡುಕಾಗಿದೆ. ಯಾರು ಸತ್ಕರ್ಮವೆಸಗುತ್ತಾರೋ ಅವರು ಸ್ವಯಂ ಅವರಿಗೇ ವಾಸ್ತವ್ಯಗಳನ್ನು ಸಿದ್ಧಗೊಳಿಸುತ್ತಿದ್ದಾರೆ. info
التفاسير:

external-link copy
45 : 30

لِیَجْزِیَ الَّذِیْنَ اٰمَنُوْا وَعَمِلُوا الصَّلِحٰتِ مِنْ فَضْلِهٖ ؕ— اِنَّهٗ لَا یُحِبُّ الْكٰفِرِیْنَ ۟

ಅಲ್ಲಾಹು ತನ್ನ ಔದಾರ್ಯದಿಂದ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಪ್ರತಿಫಲವನ್ನು ನೀಡಲೆಂದು. ಅವನು ಸತ್ಯನಿಷೇಧಿಗಳನ್ನು ಎಂದಿಗೂ ಇಷ್ಟಪಡುವುದಿಲ್ಲ. info
التفاسير:

external-link copy
46 : 30

وَمِنْ اٰیٰتِهٖۤ اَنْ یُّرْسِلَ الرِّیٰحَ مُبَشِّرٰتٍ وَّلِیُذِیْقَكُمْ مِّنْ رَّحْمَتِهٖ وَلِتَجْرِیَ الْفُلْكُ بِاَمْرِهٖ وَلِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟

ನಿಮಗೆ ಮಳೆಯ ಬಗ್ಗೆ ಸಿಹಿ ಸುದ್ದಿ ನೀಡಲು, ಅವನ ದಯೆಯ ರುಚಿಯನ್ನು ನಿಮಗೆ ತೋರಿಸಲು, ನಾವೆಗಳು ಅವನ ಆಜ್ಞೆಯಂತೆ (ಸಮುದ್ರದಲ್ಲಿ) ಚಲಿಸಲು ಮತ್ತು ಅವನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕಲು ಅವನು ಗಾಳಿಗಳನ್ನು ಕಳುಹಿಸುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಕೃತಜ್ಞರಾಗುವುದಕ್ಕಾಗಿ. info
التفاسير:

external-link copy
47 : 30

وَلَقَدْ اَرْسَلْنَا مِنْ قَبْلِكَ رُسُلًا اِلٰى قَوْمِهِمْ فَجَآءُوْهُمْ بِالْبَیِّنٰتِ فَانْتَقَمْنَا مِنَ الَّذِیْنَ اَجْرَمُوْا ؕ— وَكَانَ حَقًّا عَلَیْنَا نَصْرُ الْمُؤْمِنِیْنَ ۟

ನಾವು ನಿಮಗಿಂತ ಮೊದಲು ಅನೇಕ ಪ್ರವಾದಿಗಳನ್ನು ಅವರ ಜನರ ಬಳಿಗೆ ಕಳುಹಿಸಿದ್ದೇವೆ. ಅವರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆಗ ನಾವು ಅಪರಾಧವೆಸಗಿದ ಜನರಿಂದ ಪ್ರತೀಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. info
التفاسير:

external-link copy
48 : 30

اَللّٰهُ الَّذِیْ یُرْسِلُ الرِّیٰحَ فَتُثِیْرُ سَحَابًا فَیَبْسُطُهٗ فِی السَّمَآءِ كَیْفَ یَشَآءُ وَیَجْعَلُهٗ كِسَفًا فَتَرَی الْوَدْقَ یَخْرُجُ مِنْ خِلٰلِهٖ ۚ— فَاِذَاۤ اَصَابَ بِهٖ مَنْ یَّشَآءُ مِنْ عِبَادِهٖۤ اِذَا هُمْ یَسْتَبْشِرُوْنَ ۟

ಅಲ್ಲಾಹು ಗಾಳಿಗಳನ್ನು ಕಳುಹಿಸುತ್ತಾನೆ. ಅವು ಮೋಡಗಳನ್ನು ಎತ್ತಿಕೊಳ್ಳುತ್ತವೆ. ನಂತರ ಅಲ್ಲಾಹು ಅವನು ಇಚ್ಛಿಸುವಂತೆ ಅದನ್ನು ಆಕಾಶದಲ್ಲಿ ಹರಡುತ್ತಾನೆ. ನಂತರ ಅದನ್ನು ತುಣುಕುಗಳನ್ನಾಗಿ ಮಾಡುತ್ತಾನೆ. ಆಗ ಅದರ ಎಡೆಯಿಂದ ಮಳೆಹನಿಗಳು ಹೊರಬರುವುದನ್ನು ನೀವು ಕಾಣುತ್ತೀರಿ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರ ಮೇಲೆ ಅದನ್ನು ಸುರಿಸಿದಾಗ ಅಗೋ! ಅವರು ಸಂತೋಷಪಡುತ್ತಾರೆ. info
التفاسير:

external-link copy
49 : 30

وَاِنْ كَانُوْا مِنْ قَبْلِ اَنْ یُّنَزَّلَ عَلَیْهِمْ مِّنْ قَبْلِهٖ لَمُبْلِسِیْنَ ۟

ಆ ಮಳೆಯು ಅವರ ಮೇಲೆ ಸುರಿಯುವುದಕ್ಕೆ ಮೊದಲು ಖಂಡಿತವಾಗಿಯೂ ಅವರು ನಿರಾಶರಾಗಿದ್ದರು. info
التفاسير:

external-link copy
50 : 30

فَانْظُرْ اِلٰۤی اٰثٰرِ رَحْمَتِ اللّٰهِ كَیْفَ یُحْیِ الْاَرْضَ بَعْدَ مَوْتِهَا ؕ— اِنَّ ذٰلِكَ لَمُحْیِ الْمَوْتٰى ۚ— وَهُوَ عَلٰى كُلِّ شَیْءٍ قَدِیْرٌ ۟

ಅಲ್ಲಾಹನ ದಯೆಯ ಪರಿಣಾಮಗಳನ್ನು ನೋಡಿರಿ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಹೇಗೆ ಜೀವ ನೀಡುತ್ತಾನೆಂದು. ಅಂತಹವನು ಸತ್ತವರಿಗೆ ಜೀವ ನೀಡುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير: