Übersetzung der Bedeutungen von dem heiligen Quran - Die Kannada-Übersetzung - Hamza Batur.

Nummer der Seite:close

external-link copy
46 : 3

وَیُكَلِّمُ النَّاسَ فِی الْمَهْدِ وَكَهْلًا وَّمِنَ الصّٰلِحِیْنَ ۟

ಅವರು ತೊಟ್ಟಿಲಲ್ಲಿರುವಾಗ ಮತ್ತು ಮಧ್ಯವಯಸ್ಕನಾಗಿರುವಾಗ[1] ಜನರೊಡನೆ ಮಾತನಾಡುವರು. ಅವರು ನೀತಿವಂತರಲ್ಲಿ ಸೇರಿದವರಾಗಿರುವರು.” info

[1] ಅಂದರೆ ಮಧ್ಯವಯಸ್ಕನಾಗಿರುವಾಗ ಅವರು ಪ್ರವಾದಿಯಾಗಿ ನೇಮಕಗೊಂಡು ದೇವವಾಣಿಯ ಆಧಾರದಲ್ಲಿ ಮಾತನಾಡುತ್ತಾರೆ.

التفاسير:

external-link copy
47 : 3

قَالَتْ رَبِّ اَنّٰی یَكُوْنُ لِیْ وَلَدٌ وَّلَمْ یَمْسَسْنِیْ بَشَرٌ ؕ— قَالَ كَذٰلِكِ اللّٰهُ یَخْلُقُ مَا یَشَآءُ ؕ— اِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟

ಮರ್ಯಮ್ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗುವಾಗುವುದು ಹೇಗೆ? ಯಾವುದೇ ಪುರುಷನು ನನ್ನನ್ನು ಸ್ಪರ್ಶಿಸಿಲ್ಲವಲ್ಲ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ ಅದರೊಡನೆ ಉಂಟಾಗು ಎನ್ನುತ್ತಾನೆ. ಆಗ ಅದು ಉಂಟಾಗುತ್ತದೆ! info
التفاسير:

external-link copy
48 : 3

وَیُعَلِّمُهُ الْكِتٰبَ وَالْحِكْمَةَ وَالتَّوْرٰىةَ وَالْاِنْجِیْلَ ۟ۚ

ಅವನು ಅವರಿಗೆ ಗ್ರಂಥವನ್ನು, ವಿವೇಕವನ್ನು, ತೌರಾತನ್ನು ಮತ್ತು ಇಂಜೀಲನ್ನು ಕಲಿಸಿಕೊಡುವನು. info
التفاسير:

external-link copy
49 : 3

وَرَسُوْلًا اِلٰی بَنِیْۤ اِسْرَآءِیْلَ ۙ۬— اَنِّیْ قَدْ جِئْتُكُمْ بِاٰیَةٍ مِّنْ رَّبِّكُمْ ۙۚ— اَنِّیْۤ اَخْلُقُ لَكُمْ مِّنَ الطِّیْنِ كَهَیْـَٔةِ الطَّیْرِ فَاَنْفُخُ فِیْهِ فَیَكُوْنُ طَیْرًا بِاِذْنِ اللّٰهِ ۚ— وَاُبْرِئُ الْاَكْمَهَ وَالْاَبْرَصَ وَاُحْیِ الْمَوْتٰی بِاِذْنِ اللّٰهِ ۚ— وَاُنَبِّئُكُمْ بِمَا تَاْكُلُوْنَ وَمَا تَدَّخِرُوْنَ ۙ— فِیْ بُیُوْتِكُمْ ؕ— اِنَّ فِیْ ذٰلِكَ لَاٰیَةً لَّكُمْ اِنْ كُنْتُمْ مُّؤْمِنِیْنَ ۟ۚ

ಅವರನ್ನು ಇಸ್ರಾಯೇಲ್ ಮಕ್ಕಳ ಬಳಿಗೆ ಸಂದೇಶವಾಹಕರಾಗಿ ಕಳುಹಿಸುವನು. (ಅವರು ಹೇಳುವರು:) “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ವಚನದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ನಾನು ನಿಮಗೆ ಜೇಡಿಮಣ್ಣಿನಿಂದ ಹಕ್ಕಿಯ ಆಕೃತಿಯನ್ನು ರಚಿಸುತ್ತೇನೆ. ನಂತರ ನಾನು ಅದರಲ್ಲಿ ಊದುತ್ತೇನೆ. ಆಗ ಅದು ಅಲ್ಲಾಹನ ಅಪ್ಪಣೆಯಿಂದ ಹಕ್ಕಿಯಾಗಿ ಮಾರ್ಪಡುತ್ತದೆ. ನಾನು ಅಲ್ಲಾಹನ ಅಪ್ಪಣೆಯಿಂದ ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತೇನೆ ಹಾಗೂ ಸತ್ತವರಿಗೆ ಜೀವ ನೀಡುತ್ತೇನೆ. ನೀವು ತಿನ್ನುವುದನ್ನು ಮತ್ತು ನೀವು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಾನು ನಿಮಗೆ ತಿಳಿಸುತ್ತೇನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ಇದರಲ್ಲಿ ನಿಮಗೆ ದೃಷ್ಟಾಂತವಿದೆ. info
التفاسير:

external-link copy
50 : 3

وَمُصَدِّقًا لِّمَا بَیْنَ یَدَیَّ مِنَ التَّوْرٰىةِ وَلِاُحِلَّ لَكُمْ بَعْضَ الَّذِیْ حُرِّمَ عَلَیْكُمْ وَجِئْتُكُمْ بِاٰیَةٍ مِّنْ رَّبِّكُمْ ۫— فَاتَّقُوا اللّٰهَ وَاَطِیْعُوْنِ ۟

ನಾನು ನನ್ನ ಮುಂದಿರುವ ತೌರಾತನ್ನು ದೃಢೀಕರಿಸುತ್ತೇನೆ. ನಿಮಗೆ ನಿಷೇಧಿಸಲಾಗಿರುವ ಕೆಲವು ವಸ್ತುಗಳನ್ನು ನಾನು ನಿಮಗೆ ಧರ್ಮಸಮ್ಮತಗೊಳಿಸುತ್ತೇನೆ. ನಾನು ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತವನ್ನು ತಂದಿರುದ್ದೇನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. info
التفاسير:

external-link copy
51 : 3

اِنَّ اللّٰهَ رَبِّیْ وَرَبُّكُمْ فَاعْبُدُوْهُ ؕ— هٰذَا صِرَاطٌ مُّسْتَقِیْمٌ ۟

ನಿಶ್ಚಯವಾಗಿಯೂ ಅಲ್ಲಾಹು ನನ್ನ ಮತ್ತು ನಿಮ್ಮ ಪರಿಪಾಲಕನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಇದೇ ನೇರವಾದ ಮಾರ್ಗ. info
التفاسير:

external-link copy
52 : 3

فَلَمَّاۤ اَحَسَّ عِیْسٰی مِنْهُمُ الْكُفْرَ قَالَ مَنْ اَنْصَارِیْۤ اِلَی اللّٰهِ ؕ— قَالَ الْحَوَارِیُّوْنَ نَحْنُ اَنْصَارُ اللّٰهِ ۚ— اٰمَنَّا بِاللّٰهِ ۚ— وَاشْهَدْ بِاَنَّا مُسْلِمُوْنَ ۟

ನಂತರ ಈಸಾರಿಗೆ ಅವರ ಸತ್ಯನಿಷೇಧದ ಅರಿವಾದಾಗ ಅವರು ಹೇಳಿದರು: “ಅಲ್ಲಾಹನ ಮಾರ್ಗದಲ್ಲಿ ನನಗೆ ಯಾರು ಸಹಾಯ ಮಾಡುತ್ತೀರಿ?” ಹವಾರಿಗಳು[1] ಹೇಳಿದರು: “ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯ ಮಾಡುತ್ತೇವೆ. ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ. ನಾವು (ಅಲ್ಲಾಹನಿಗೆ) ಶರಣಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.” info

[1] ಹವಾರಿಗಳು ಎಂದರೆ ಸಹಾಯಕರು.

التفاسير: