Übersetzung der Bedeutungen von dem heiligen Quran - Die Kannada-Übersetzung - Hamza Batur.

external-link copy
24 : 14

اَلَمْ تَرَ كَیْفَ ضَرَبَ اللّٰهُ مَثَلًا كَلِمَةً طَیِّبَةً كَشَجَرَةٍ طَیِّبَةٍ اَصْلُهَا ثَابِتٌ وَّفَرْعُهَا فِی السَّمَآءِ ۟ۙ

ಅಲ್ಲಾಹು ಪರಿಶುದ್ಧ ವಚನಕ್ಕೆ[1] ಯಾವ ರೀತಿಯಲ್ಲಿ ಉದಾಹರಣೆ ನೀಡಿದ್ದಾನೆಂದು ನೀವು ನೋಡಿಲ್ಲವೇ? ಅದೊಂದು ಪರಿಶುದ್ಧ ಮರದಂತೆ. ಅದರ ಬೇರುಗಳು ಭದ್ರವಾಗಿವೆ ಮತ್ತು ರೆಂಭೆಗಳು ಆಕಾಶದಲ್ಲಿವೆ. info

[1] ಪರಿಶುದ್ಧ ವಚನ ಎಂದರೆ ‘ಲಾಇಲಾಹ ಇಲ್ಲಲ್ಲಾಹ್’ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ) ಎಂಬ ವಚನ. ಈ ವಚನವನ್ನು ಸ್ವೀಕರಿಸಿ ಇದರ ಆಧಾರದಲ್ಲಿ ಬದುಕುವ ಸತ್ಯವಿಶ್ವಾಸಿಗೆ ಯಾವುದೇ ಭಯವಿಲ್ಲ. ಅವನು ಸಂಪೂರ್ಣ ಆತ್ಮಶಾಂತಿಯೊಂದಿಗೆ ಬದುಕುತ್ತಾನೆ. ಜೀವನದಲ್ಲಿ ಏರುಪೇರುಗಳನ್ನು ಕಾಣುವಾಗ, ಕಷ್ಟಗಳು ಬರುವಾಗ, ದುರಂತಗಳು ಸಂಭವಿಸುವಾಗ ಅವನು ಧೃತಿಗೆಡುವುದಿಲ್ಲ. ಅವನು ಅಲ್ಲಾಹನಲ್ಲಿ ಸಂಪೂರ್ಣ ಭರವಸೆಯಿಟ್ಟು ಮುಂದುವರಿಯುತ್ತಾನೆ. ಅವನ ಎಲ್ಲಾ ಕರ್ಮಗಳಿಗೂ ಪರಲೋಕದಲ್ಲಿ ಅತ್ಯುತ್ತಮ ಪ್ರತಿಫಲವಿರುತ್ತದೆ.

التفاسير: