Übersetzung der Bedeutungen von dem heiligen Quran - Die Kannada-Übersetzung - Bashir Maisuri.

Nummer der Seite:close

external-link copy
76 : 17

وَاِنْ كَادُوْا لَیَسْتَفِزُّوْنَكَ مِنَ الْاَرْضِ لِیُخْرِجُوْكَ مِنْهَا وَاِذًا لَّا یَلْبَثُوْنَ خِلٰفَكَ اِلَّا قَلِیْلًا ۟

ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ ಆಗಿರುತ್ತಿದ್ದರೆ ಅವರು ಸಹ ಅಲ್ಪವೇ ಕಾಲ ಉಳಿಯುವವರಿದ್ದರು. info
التفاسير:

external-link copy
77 : 17

سُنَّةَ مَنْ قَدْ اَرْسَلْنَا قَبْلَكَ مِنْ رُّسُلِنَا وَلَا تَجِدُ لِسُنَّتِنَا تَحْوِیْلًا ۟۠

ನಿಮಗಿಂತ ಮುಂಚೆ ನಾವು ಕಳುಹಿಸಿದ ಸಂದೇಶವಾಹಕರೊAದಿಗಿನ ಕ್ರಮವು ಇದೇ ಪ್ರಕಾರವಿತ್ತು ಮತ್ತು ನೀವು ನಮ್ಮ ಕ್ರಮಕ್ಕೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ. info
التفاسير:

external-link copy
78 : 17

اَقِمِ الصَّلٰوةَ لِدُلُوْكِ الشَّمْسِ اِلٰی غَسَقِ الَّیْلِ وَقُرْاٰنَ الْفَجْرِ ؕ— اِنَّ قُرْاٰنَ الْفَجْرِ كَانَ مَشْهُوْدًا ۟

ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್‌ಆನ್ ಪಾರಾಯಣವನ್ನು ಸಹ. ನಿಶ್ಚಯವಾಗಿಯೂ ಪ್ರಭಾತದ ಕುರ್‌ಅನ್ ಪಾರಾಯಣವು ಪ್ರಮಾಣಿಕವಾಗಿದೆ. info
التفاسير:

external-link copy
79 : 17

وَمِنَ الَّیْلِ فَتَهَجَّدْ بِهٖ نَافِلَةً لَّكَ ۖۗ— عَسٰۤی اَنْ یَّبْعَثَكَ رَبُّكَ مَقَامًا مَّحْمُوْدًا ۟

ಮತ್ತು ರಾತ್ರಿಯ ಒಂದAಶದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಇದು ನಿಮಗೆ ಐಚ್ಛಿಕ ಕಾರ್ಯವಾಗಿದೆ. ಸಧ್ಯವೇ ನಿಮ್ಮ ಪ್ರಭುವು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸಲೂಬಹುದು. info
التفاسير:

external-link copy
80 : 17

وَقُلْ رَّبِّ اَدْخِلْنِیْ مُدْخَلَ صِدْقٍ وَّاَخْرِجْنِیْ مُخْرَجَ صِدْقٍ وَّاجْعَلْ لِّیْ مِنْ لَّدُنْكَ سُلْطٰنًا نَّصِیْرًا ۟

ಮತ್ತು ಪಾರ್ಥಿಸುತ್ತಿರಿ: ನನ್ನ ಪ್ರಭುವೇ, ನೀನು ಎಲ್ಲೇ ನನ್ನನ್ನು ಕೊಂಡೊಯ್ದರೂ ಉತ್ತಮವಾದ ಸ್ಥಿತಿಯಲ್ಲಿ ಕೊಂಡೊಯ್ಯು ಮತ್ತು ನೀನು ಎಲ್ಲಿಂದ ಹೊರತಂದರೂ ಉತ್ತಮವಾಗಿರುವ ಸ್ಥಿತಿಯಲ್ಲಿ ಹೊರತೆಗೆ ಮತ್ತು ನನಗಾಗಿ ನಿನ್ನ ವತಿಯಿಂದ ಸಹಾಯದಾಯಕ ಅಧಿಕಾರ ಒದಗಿಸು. info
التفاسير:

external-link copy
81 : 17

وَقُلْ جَآءَ الْحَقُّ وَزَهَقَ الْبَاطِلُ ؕ— اِنَّ الْبَاطِلَ كَانَ زَهُوْقًا ۟

ಹೇಳಿರಿ: ಸತ್ಯ ಬಂದಿತು ಮತ್ತು ಮಿಥ್ಯವು ಅಳಿದು ಹೋಯಿತು. ನಿಶ್ಚಯವಾಗಿಯೂ ಮಿಥ್ಯವು ಅಳಿದು ಹೋಗುವಂತಹದ್ದಾಗಿದೆ. info
التفاسير:

external-link copy
82 : 17

وَنُنَزِّلُ مِنَ الْقُرْاٰنِ مَا هُوَ شِفَآءٌ وَّرَحْمَةٌ لِّلْمُؤْمِنِیْنَ ۙ— وَلَا یَزِیْدُ الظّٰلِمِیْنَ اِلَّا خَسَارًا ۟

ನಾವು ಅವತೀರ್ಣಗೊಳಿಸುತ್ತಿರುವಂತಹ ಈ ಕುರ್‌ಆನಿನಲ್ಲಿ ಸತ್ಯವಿಶ್ವಾಸಿಗಳಿಗೆ ಉಪಶಮನ ಹಾಗೂ ಕಾರುಣ್ಯವಿದೆ. ಆದರೆ ಇದು ಅಕ್ರಮಿಗಳಿಗೆ ನಷ್ಟದ ಹೊರತು ಇನ್ನೇನೂ ಹೆಚ್ಚಿಸುವುದಿಲ್ಲ. info
التفاسير:

external-link copy
83 : 17

وَاِذَاۤ اَنْعَمْنَا عَلَی الْاِنْسَانِ اَعْرَضَ وَنَاٰ بِجَانِبِهٖ ۚ— وَاِذَا مَسَّهُ الشَّرُّ كَانَ یَـُٔوْسًا ۟

ನಾವು ಮನುಷ್ಯನಿಗೆ ಅನುಗ್ರಹಿಸಿದಾಗ ಅವನು ಮುಖ ತಿರುಗಿಸಿ ದೂರ ಸರಿದು ಬಿಡುತ್ತಾನೆ ಮತ್ತು ಅವನಿಗೆ ಸಂಕಷ್ಟವೇನಾದರೂ ಬಾಧಿಸಿದರೆ ಅವನು ಹತಾಶನಾಗಿ ಬಿಡುತ್ತಾನೆ. info
التفاسير:

external-link copy
84 : 17

قُلْ كُلٌّ یَّعْمَلُ عَلٰی شَاكِلَتِهٖ ؕ— فَرَبُّكُمْ اَعْلَمُ بِمَنْ هُوَ اَهْدٰی سَبِیْلًا ۟۠

ಹೇಳಿರಿ: ಪ್ರತಿಯೊಬ್ಬನು ತನ್ನ ಪದ್ಧತಿಗನುಗುಣವಾಗಿ ಕರ್ಮವೆಸಗುತ್ತಾನೆ. ಅತ್ಯಂತ ಸನ್ಮಾರ್ಗದಲ್ಲಿರುವವರನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು. info
التفاسير:

external-link copy
85 : 17

وَیَسْـَٔلُوْنَكَ عَنِ الرُّوْحِ ؕ— قُلِ الرُّوْحُ مِنْ اَمْرِ رَبِّیْ وَمَاۤ اُوْتِیْتُمْ مِّنَ الْعِلْمِ اِلَّا قَلِیْلًا ۟

ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ ಆಜ್ಞೆಯಿಂದಾಗಿರುತ್ತದೆ ಮತ್ತು ನಿಮಗೆ ಅತ್ಯಲ್ಪವೇ ಜ್ಞಾನವನ್ನು ನೀಡಲಾಗಿದೆ. info
التفاسير:

external-link copy
86 : 17

وَلَىِٕنْ شِئْنَا لَنَذْهَبَنَّ بِالَّذِیْۤ اَوْحَیْنَاۤ اِلَیْكَ ثُمَّ لَا تَجِدُ لَكَ بِهٖ عَلَیْنَا وَكِیْلًا ۟ۙ

ನಾವು ಇಚ್ಛಿಸಿರುತ್ತಿದ್ದರೆ ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸಂದೇಶವನ್ನು ಕಸಿದುಕೊಳ್ಳುತ್ತಿದ್ದೆವು. ಅನಂತರ ಅದಕ್ಕಾಗಿ ನಮ್ಮ ವಿರುದ್ಧ ನೀವು ಯಾವ ಬೆಂಬಲಿಗನನ್ನು ಪಡೆಯಲಾರಿರಿ. info
التفاسير: