Übersetzung der Bedeutungen von dem heiligen Quran - Die Kannada-Übersetzung - Bashir Maisuri.

Nummer der Seite:close

external-link copy
43 : 10

وَمِنْهُمْ مَّنْ یَّنْظُرُ اِلَیْكَ ؕ— اَفَاَنْتَ تَهْدِی الْعُمْیَ وَلَوْ كَانُوْا لَا یُبْصِرُوْنَ ۟

ಮತ್ತು ಅವರ ಪೈಕಿ ನಿಮ್ಮನ್ನು ನೋಡುವ ಕೆಲವರಿದ್ದಾರೆ, ಏನು ನೀವು ಕುರುಡರಿಗೆ ಕಾಣದಿದ್ದರೂ ಮಾರ್ಗ ತೋರಿಸುವಿರಾ? info
التفاسير:

external-link copy
44 : 10

اِنَّ اللّٰهَ لَا یَظْلِمُ النَّاسَ شَیْـًٔا وَّلٰكِنَّ النَّاسَ اَنْفُسَهُمْ یَظْلِمُوْنَ ۟

ನಿಶ್ಚಯವಾಗಿಯೂ ಅಲ್ಲಾಹನು ಜನರಿಗೆ ಒಂದಿಷ್ಟೂ ಅನ್ಯಾಯ ಮಾಡುವುದಿಲ್ಲ. ಆದರೆ ಜನರು ಸ್ವತಃ ತಮ್ಮ ಮೇಲೆ ತಾವೇ ಅನ್ಯಾಯವೆಸಗುತ್ತಾರೆ. info
التفاسير:

external-link copy
45 : 10

وَیَوْمَ یَحْشُرُهُمْ كَاَنْ لَّمْ یَلْبَثُوْۤا اِلَّا سَاعَةً مِّنَ النَّهَارِ یَتَعَارَفُوْنَ بَیْنَهُمْ ؕ— قَدْ خَسِرَ الَّذِیْنَ كَذَّبُوْا بِلِقَآءِ اللّٰهِ وَمَا كَانُوْا مُهْتَدِیْنَ ۟

ಮತ್ತು ಅಲ್ಲಾಹನು ಒಟ್ಟುಗೂಡಿಸುವ ದಿನದಂದು ಅವರಿಗೆ ತಾವು (ಭೂಲೋಕದಲ್ಲಿ) ದಿನದ ಒಂದು ಗಳಿಗೆ ಮಾತ್ರ ವಾಸಿಸಿದ್ದೆವು ಎಂಬAತೆ ಭಾಸವಾಗುವುದು, ಅವರು ಪರಸ್ಪರ ಒಬ್ಬರನ್ನೊಬ್ಬರು ಪರಿಚಯಿಸಿ ಕೊಳ್ಳುತ್ತಿರುವರು. ನಿಜವಾಗಿಯೂ ಅಲ್ಲಾಹನ ಭೇಟಿಯನ್ನು ಸುಳ್ಳಾಗಿಸಿದವರು ನಷ್ಟ ಹೊಂದಿದರು ಮತ್ತು ಅವರು ಸನ್ಮಾರ್ಗ ಪಡೆಯುವವರಾಗಿರಲಿಲ್ಲ. info
التفاسير:

external-link copy
46 : 10

وَاِمَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِلَیْنَا مَرْجِعُهُمْ ثُمَّ اللّٰهُ شَهِیْدٌ عَلٰی مَا یَفْعَلُوْنَ ۟

ಮತ್ತು ಅವರಿಗೆ ನಾವು ವಾಗ್ದಾನ ಮಾಡಿರುವಂತಹ ಕೆಲವು ಶಿಕ್ಷೆಗಳನ್ನು ನಿಮಗೆ ತೋರಿಸಬಹುದು ಅಥವ (ಅದರ ಪ್ರಕಟಣೆಗೆ ಮುನ್ನ) ನಿಮಗೆ ಮರಣ ನೀಡಬಹುದು. ಹೇಗಿದ್ದರೂ ನಮ್ಮ ಬಳಿಗೆ ಅವರಿಗೆ ಮರಳಲಿಕ್ಕಿದೆ. ಅನಂತರ ಅಲ್ಲಾಹನು ಅವರ ಎಲ್ಲ ಕೃತ್ಯಗಳ ಮೇಲೆ ಸಾಕ್ಷಿಯಾಗಿರುವನು. info
التفاسير:

external-link copy
47 : 10

وَلِكُلِّ اُمَّةٍ رَّسُوْلٌ ۚ— فَاِذَا جَآءَ رَسُوْلُهُمْ قُضِیَ بَیْنَهُمْ بِالْقِسْطِ وَهُمْ لَا یُظْلَمُوْنَ ۟

ಪ್ರತಿಯೊಂದು ಸಮುದಾಯಕ್ಕೂ ಒಬ್ಬ ಸಂದೇಶವಾಹಕನಿದ್ದಾನೆ. ಅವರ ಬಳಿಗೆ ಸಂದೇಶವಾಹಕನು ಬಂದಾಗ ಅವರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಮಾಡಲಾಗುವುದು ಮತ್ತು ಅವರ ಮೇಲೆ ಅನ್ಯಾಯ ಮಾಡಲಾಗುವುದಿಲ್ಲ. info
التفاسير:

external-link copy
48 : 10

وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟

ಮತ್ತು ನೀವು ಸತ್ಯವಂತರಾಗಿದ್ದರೆ, ಈ ವಾಗ್ದಾನವು ಯಾವಾಗ ಪೂರ್ಣಗೊಳ್ಳುವುದು? ಎಂದು ಅವರು ಕೇಳುತ್ತಾರೆ info
التفاسير:

external-link copy
49 : 10

قُلْ لَّاۤ اَمْلِكُ لِنَفْسِیْ ضَرًّا وَّلَا نَفْعًا اِلَّا مَا شَآءَ اللّٰهُ ؕ— لِكُلِّ اُمَّةٍ اَجَلٌ ؕ— اِذَا جَآءَ اَجَلُهُمْ فَلَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟

ಉತ್ತರಿಸಿರಿ; ಸ್ವತಃ ನನ್ನ ಹಾನಿ ಮತ್ತು ಲಾಭದ ಅಧಿಕಾರವು ನನ್ನ ಕೈಯಲ್ಲಿಲ್ಲ. ಆದರೆ ಅಲ್ಲಾಹನು ಇಚ್ಛಿಸಿದಷ್ಟು ಮಾತ್ರ ಪ್ರತಿಯೊಂದು ಸಮುದಾಯಕ್ಕೂ ಒಂದು ನಿಶ್ಚಿತಾವಧಿಯಿದೆ. ಅವರ ಆ ನಿಶ್ಚಿತಾವಧಿಯು ಬಂದು ಬಿಟ್ಟರೆ ಅವರು ಒಂದು ಕ್ಷಣವೂ ಹಿಂದೆ ಮುಂದೆ ಆಗಲಾರರು. info
التفاسير:

external-link copy
50 : 10

قُلْ اَرَءَیْتُمْ اِنْ اَتٰىكُمْ عَذَابُهٗ بَیَاتًا اَوْ نَهَارًا مَّاذَا یَسْتَعْجِلُ مِنْهُ الْمُجْرِمُوْنَ ۟

ಓ ಪೈಗಂಬರರೇ ಇವರೊಡನೆ ಹೇಳಿರಿ; ಅಲ್ಲಾಹನ ಶಿಕ್ಷೆಯು ರಾತ್ರಿಯ ವೇಳೆ ಅಥವಾ ಹಗಲಿನ ವೇಳೆ ನಿಮ್ಮ ಮೇಲೆ ಬಂದೆರಗಿದರೆ ಇದರಲ್ಲಿ ಯಾವ ಒಳಿತಿದೆಯೆಂದು ಅಪರಾಧಿಗಳು ಇದಕ್ಕಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ ? info
التفاسير:

external-link copy
51 : 10

اَثُمَّ اِذَا مَا وَقَعَ اٰمَنْتُمْ بِهٖ ؕ— آٰلْـٰٔنَ وَقَدْ كُنْتُمْ بِهٖ تَسْتَعْجِلُوْنَ ۟

ಅದು (ಯಾತನೆ) ಸಂಭವಿಸಿದ ನಂತರವೇ ನೀವು ಅದರಲ್ಲಿ ವಿಶ್ವಾಸವಿಡುತ್ತೀರಾ, ವಸ್ತುತಃ ನೀವು ಅದರ ಬಗ್ಗೆ ಆತುರಪಟ್ಟುಕೊಳ್ಳುತ್ತಿದ್ದೀರಿ! info
التفاسير:

external-link copy
52 : 10

ثُمَّ قِیْلَ لِلَّذِیْنَ ظَلَمُوْا ذُوْقُوْا عَذَابَ الْخُلْدِ ۚ— هَلْ تُجْزَوْنَ اِلَّا بِمَا كُنْتُمْ تَكْسِبُوْنَ ۟

ಅನಂತರ ಅಕ್ರಮಿಗಳೊಂದಿಗೆ ಹೇಳಲಾಗುವುದು ನೀವು ಚಿರಯಾತನೆಯ ಸವಿಯನ್ನುಣ್ಣಿರಿ. ನಿಮಗಂತು ನಿಮ್ಮ ಆ ಕೃತ್ಯಗಳ ಪ್ರತಿಫಲವೇ ನೀಡಲಾಗುತ್ತಿದೆ. info
التفاسير:

external-link copy
53 : 10

وَیَسْتَنْۢبِـُٔوْنَكَ اَحَقٌّ هُوَ ؔؕ— قُلْ اِیْ وَرَبِّیْۤ اِنَّهٗ لَحَقٌّ ؔؕ— وَمَاۤ اَنْتُمْ بِمُعْجِزِیْنَ ۟۠

ಮತ್ತು ಅವರು ನಿಮ್ಮೊಂದಿಗೆ ಅದು (ಯಾತನೆ) ನಿಜಕ್ಕೂ ಸತ್ಯವಾಗಿದೆಯೇ ಎಂದು ವಿಚಾರಿಸುತ್ತಾರೆ. ನೀವು ಅಲ್ಲಾಹನನ್ನು ಸೋಲಿಸಲಾರಿರಿ. info
التفاسير: