Prijevod značenja časnog Kur'ana - Prijevod na kannada jezik (južno indijski jezik) - Hamza Betur

Broj stranice:close

external-link copy
106 : 4

وَّاسْتَغْفِرِ اللّٰهَ ؕ— اِنَّ اللّٰهَ كَانَ غَفُوْرًا رَّحِیْمًا ۟ۚ

ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
107 : 4

وَلَا تُجَادِلْ عَنِ الَّذِیْنَ یَخْتَانُوْنَ اَنْفُسَهُمْ ؕ— اِنَّ اللّٰهَ لَا یُحِبُّ مَنْ كَانَ خَوَّانًا اَثِیْمًا ۟ۚۙ

ಆತ್ಮವಂಚನೆ ಮಾಡುವವರಿಗಾಗಿ ತರ್ಕಿಸಬೇಡಿ. ನಿಶ್ಚಯವಾಗಿಯೂ ಪಾಪಿಯಾದ ನಯವಂಚಕನನ್ನು ಅಲ್ಲಾಹು ಇಷ್ಟಪಡುವುದಿಲ್ಲ. info
التفاسير:

external-link copy
108 : 4

یَّسْتَخْفُوْنَ مِنَ النَّاسِ وَلَا یَسْتَخْفُوْنَ مِنَ اللّٰهِ وَهُوَ مَعَهُمْ اِذْ یُبَیِّتُوْنَ مَا لَا یَرْضٰی مِنَ الْقَوْلِ ؕ— وَكَانَ اللّٰهُ بِمَا یَعْمَلُوْنَ مُحِیْطًا ۟

ಅವರು ಜನರಿಂದ (ತಮ್ಮ ನಿಜಬಣ್ಣವನ್ನು) ಅಡಗಿಸುತ್ತಾರೆ. ಆದರೆ ಅಲ್ಲಾಹನಿಂದ ಅಡಗಿಸಲು ಅವರಿಗೆ ಸಾಧ್ಯವಿಲ್ಲ. ಅಲ್ಲಾಹು ಇಷ್ಟಪಡದ ಮಾತುಗಳನ್ನು ಹೇಳುತ್ತಾ, ಅವರು ರಾತ್ರಿಯಲ್ಲಿ ಗೂಢ ಮಾತುಕತೆ ನಡೆಸುವಾಗ ಅವನು ಅವರ ಜೊತೆಯಲ್ಲೇ ಇದ್ದಾನೆ. ಅಲ್ಲಾಹು (ತನ್ನ ಜ್ಞಾನದಿಂದ) ಅವರು ಮಾಡುವುದನ್ನು ಪೂರ್ಣವಾಗಿ ಆವರಿಸಿಕೊಂಡಿದ್ದಾನೆ. info
التفاسير:

external-link copy
109 : 4

هٰۤاَنْتُمْ هٰۤؤُلَآءِ جَدَلْتُمْ عَنْهُمْ فِی الْحَیٰوةِ الدُّنْیَا ۫— فَمَنْ یُّجَادِلُ اللّٰهَ عَنْهُمْ یَوْمَ الْقِیٰمَةِ اَمْ مَّنْ یَّكُوْنُ عَلَیْهِمْ وَكِیْلًا ۟

ಹೌದು, ನೀವು ಇಹಲೋಕ ಜೀವನದಲ್ಲಿ ಅವರಿಗಾಗಿ ತರ್ಕಿಸಿದ್ದೀರಿ. ಆದರೆ ಪುನರುತ್ಥಾನ ದಿನದಂದು ಅವರ ವಿಷಯದಲ್ಲಿ ಅಲ್ಲಾಹನೊಂದಿಗೆ ತರ್ಕಿಸಲು ಯಾರು ಮುಂದೆ ಬರುತ್ತೀರಿ? ಅಥವಾ ಅವರ ವಿಷಯವನ್ನು ಯಾರು ವಹಿಸಿಕೊಳ್ಳುತ್ತೀರಿ? info
التفاسير:

external-link copy
110 : 4

وَمَنْ یَّعْمَلْ سُوْٓءًا اَوْ یَظْلِمْ نَفْسَهٗ ثُمَّ یَسْتَغْفِرِ اللّٰهَ یَجِدِ اللّٰهَ غَفُوْرًا رَّحِیْمًا ۟

ಪಾಪವನ್ನು ಮಾಡಿದ ನಂತರ, ಅಥವಾ ಸ್ವಯಂ ಅನ್ಯಾಯವೆಸಗಿದ ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸುವವನು ಯಾರೋ—ಅವನು ಅಲ್ಲಾಹನನ್ನು ಕ್ಷಮಿಸುವವನಾಗಿ ಮತ್ತು ದಯೆ ತೋರುವವನಾಗಿ ಕಾಣುವನು. info
التفاسير:

external-link copy
111 : 4

وَمَنْ یَّكْسِبْ اِثْمًا فَاِنَّمَا یَكْسِبُهٗ عَلٰی نَفْسِهٖ ؕ— وَكَانَ اللّٰهُ عَلِیْمًا حَكِیْمًا ۟

ಪಾಪ ಮಾಡುವವನು ಸ್ವಯಂ ತನಗೆ ವಿರುದ್ಧವಾಗಿಯೇ ಅದನ್ನು ಮಾಡುತ್ತಾನೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
112 : 4

وَمَنْ یَّكْسِبْ خَطِیْٓئَةً اَوْ اِثْمًا ثُمَّ یَرْمِ بِهٖ بَرِیْٓـًٔا فَقَدِ احْتَمَلَ بُهْتَانًا وَّاِثْمًا مُّبِیْنًا ۟۠

ಯಾರು ಒಂದು ತಪ್ಪು ಅಥವಾ ಪಾಪವನ್ನು ಮಾಡಿ, ನಂತರ ಅದನ್ನು ಒಬ್ಬ ಅಮಾಯಕನ ಮೇಲೆ ಹೊರಿಸುತ್ತಾನೋ, ನಿಶ್ಚಯವಾಗಿಯೂ ಅವನು ಸುಳ್ಳಾರೋಪವನ್ನು ಮತ್ತು ಪ್ರತ್ಯಕ್ಷ ಪಾಪವನ್ನು ವಹಿಸಿಕೊಂಡನು. info
التفاسير:

external-link copy
113 : 4

وَلَوْلَا فَضْلُ اللّٰهِ عَلَیْكَ وَرَحْمَتُهٗ لَهَمَّتْ طَّآىِٕفَةٌ مِّنْهُمْ اَنْ یُّضِلُّوْكَ ؕ— وَمَا یُضِلُّوْنَ اِلَّاۤ اَنْفُسَهُمْ وَمَا یَضُرُّوْنَكَ مِنْ شَیْءٍ ؕ— وَاَنْزَلَ اللّٰهُ عَلَیْكَ الْكِتٰبَ وَالْحِكْمَةَ وَعَلَّمَكَ مَا لَمْ تَكُنْ تَعْلَمُ ؕ— وَكَانَ فَضْلُ اللّٰهِ عَلَیْكَ عَظِیْمًا ۟

(ಪ್ರವಾದಿಯವರೇ) ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ಅವರಲ್ಲೊಂದು ಗುಂಪು ನಿಮ್ಮನ್ನು ದಾರಿತಪ್ಪಿಸಲು ಮುಂದಾಗುತ್ತಿದ್ದರು. ಆದರೆ ಅವರು ಸ್ವಯಂ ಅವರನ್ನೇ ದಾರಿತಪ್ಪಿಸುತ್ತಿದ್ದಾರೆ. ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅಲ್ಲಾಹು ನಿಮಗೆ ಗ್ರಂಥವನ್ನು ಮತ್ತು ವಿವೇಕವನ್ನು ಅವತೀರ್ಣಗೊಳಿಸಿದ್ದಾನೆ ಮತ್ತು ನೀವು ತಿಳಿಯದ ವಿಷಯಗಳನ್ನು ನಿಮಗೆ ಕಲಿಸಿದ್ದಾನೆ. ಅಲ್ಲಾಹು ನಿಮ್ಮ ಮೇಲೆ ತೋರಿದ ಔದಾರ್ಯವು ಬಹಳ ದೊಡ್ಡದಾಗಿದೆ. info
التفاسير: