Prijevod značenja časnog Kur'ana - Prijevod na kannada jezik (južno indijski jezik) - Bešir Misuri

external-link copy
95 : 4

لَا یَسْتَوِی الْقٰعِدُوْنَ مِنَ الْمُؤْمِنِیْنَ غَیْرُ اُولِی الضَّرَرِ وَالْمُجٰهِدُوْنَ فِیْ سَبِیْلِ اللّٰهِ بِاَمْوَالِهِمْ وَاَنْفُسِهِمْ ؕ— فَضَّلَ اللّٰهُ الْمُجٰهِدِیْنَ بِاَمْوَالِهِمْ وَاَنْفُسِهِمْ عَلَی الْقٰعِدِیْنَ دَرَجَةً ؕ— وَكُلًّا وَّعَدَ اللّٰهُ الْحُسْنٰی ؕ— وَفَضَّلَ اللّٰهُ الْمُجٰهِدِیْنَ عَلَی الْقٰعِدِیْنَ اَجْرًا عَظِیْمًا ۟ۙ

ತನ್ನ ಜೀವ ಮತ್ತು ಸಂಪತ್ತುಗಳೊAದಿಗೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿರುವ ಸತ್ಯವಿಶ್ವಾಸಿಗಳು ಮತ್ತು ಕಾರಣವಿಲ್ಲದೆಯೇ ಮನೆಗಳಲ್ಲಿ ಕುಳಿತು ಬಿಟ್ಟಿರುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತಮ್ಮ ಜೀವ ಮತ್ತು ಸಂಪತ್ತುಗಳೊAದಿಗೆ ಯುದ್ಧ ಮಾಡುವವರನ್ನು ಮನೆಗಳಲ್ಲಿ ಕುಳಿತುಕೊಂಡಿರುವವರ ಮೇಲೆ ಅಲ್ಲಾಹನು ಪದವಿಗಳಲ್ಲಿ ಶ್ರೇಷ್ಠತೆ ನೀಡಿರುವನು. ಅಲ್ಲಾಹನು ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ಆದರೆ ಅಲ್ಲಾಹನು ಮನೆಗೆಗಳಲ್ಲಿ ಕುಳಿತುಕೊಂಡಿರುವವರಿ ಗಿಂತ ಹೋರಾಡುವವರಿಗೆ ಮಹಾ ಪ್ರತಿಫಲವನ್ನು ನೀಡಿ ಶ್ರೇಷ್ಠರನ್ನಾಗಿ ಮಾಡಿರುವನು. info
التفاسير: