Prijevod značenja časnog Kur'ana - Prijevod na kannada jezik (južno indijski jezik) - Bešir Misuri

Broj stranice:close

external-link copy
135 : 4

یٰۤاَیُّهَا الَّذِیْنَ اٰمَنُوْا كُوْنُوْا قَوّٰمِیْنَ بِالْقِسْطِ شُهَدَآءَ لِلّٰهِ وَلَوْ عَلٰۤی اَنْفُسِكُمْ اَوِ الْوَالِدَیْنِ وَالْاَقْرَبِیْنَ ۚ— اِنْ یَّكُنْ غَنِیًّا اَوْ فَقِیْرًا فَاللّٰهُ اَوْلٰی بِهِمَا ۫— فَلَا تَتَّبِعُوا الْهَوٰۤی اَنْ تَعْدِلُوْا ۚ— وَاِنْ تَلْوٗۤا اَوْ تُعْرِضُوْا فَاِنَّ اللّٰهَ كَانَ بِمَا تَعْمَلُوْنَ خَبِیْرًا ۟

ಈ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೋಸ್ಕರ ಸಾಕ್ಷಿ ವಹಿಸುವವರಾಗಿರುತ್ತಾ ದೃಢವಾಗಿ ನಿಂತು ನ್ಯಾಯಪಾಲಿಸುವವರಾಗಿರಿ. ಅದು ಸ್ವತಃ ನಿಮಗೆ ಅಥವಾ ನಿಮ್ಮ ತಂದೆ ತಾಯಿಗೆ ಅಥವಾ ನಿಕಟ ಸಂಬAಧಿಕರಿಗೆ ವಿರುದ್ಧವಾಗಿದ್ದರೂ ಸರಿ (ನ್ಯಾಯ ಬೇಡುವಾತ) ಸಿರಿವಂತನಾಗಿರಲಿ, ಬಡವನಾಗಿರಲಿ ಅವರಿಬ್ಬರೊಂದಿಗೂ ಹೆಚ್ಚು ಸಂಬAಧ ಹೊಂದಿದವನು ಅಲ್ಲಾಹನಾಗಿದ್ದಾನೆ. ಆದುದರಿಂದ ನೀವು ಸ್ವೇಚ್ಛೆಗಳನ್ನು ಅನುಸರಿಸುತ್ತಾ ನ್ಯಾಯ ನೀತಿಯನ್ನು ಬಿಡಬೇಡಿ. ನೀವು ಸತ್ಯವನ್ನು ತಿರುಚಿದರೆ ಅಥವಾ ಸಾಕ್ಷಿ ಹೇಳುವುದರಿಂದ ಹಿಮ್ಮೆಟ್ಟಿದರೆ ಖಂಡಿತವಾಗಿಯೂ ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಸಂಪೂರ್ಣವಾಗಿ ಅರಿಯುವವನಾಗಿದ್ದಾನೆ. info
التفاسير:

external-link copy
136 : 4

یٰۤاَیُّهَا الَّذِیْنَ اٰمَنُوْۤا اٰمِنُوْا بِاللّٰهِ وَرَسُوْلِهٖ وَالْكِتٰبِ الَّذِیْ نَزَّلَ عَلٰی رَسُوْلِهٖ وَالْكِتٰبِ الَّذِیْۤ اَنْزَلَ مِنْ قَبْلُ ؕ— وَمَنْ یَّكْفُرْ بِاللّٰهِ وَمَلٰٓىِٕكَتِهٖ وَكُتُبِهٖ وَرُسُلِهٖ وَالْیَوْمِ الْاٰخِرِ فَقَدْ ضَلَّ ضَلٰلًا بَعِیْدًا ۟

ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ಅವನು ತನ್ನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ಗ್ರಂಥದಲ್ಲೂ ಮತ್ತು ಇದಕ್ಕಿಂತ ಮುಂಚೆ ಅವತೀರ್ಣಗೊಳಿಸಿದ ಗ್ರಂಥಗಳಲ್ಲೂ ವಿಶ್ವಾಸವಿಡಿರಿ. ಯಾರು ಅಲ್ಲಾಹನಲ್ಲೂ ಅವನ ಮಲಕ್‌ಗಳಲ್ಲೂ ಅವನ ಗ್ರಂಥಗಳಲ್ಲೂ, ಅವನ ಸಂದೇಶವಾಹಕರಲ್ಲೂ ಮತ್ತು ಅಂತ್ಯದಿನದಲ್ಲೂ ಅವಿಶ್ವಾಸ ಹೊಂದುತ್ತಾನೋ ಖಂಡಿತವಾಗಿಯು ಅವನು ವಿದೂರವಾದ ಪಥಭ್ರಷ್ಟತೆಯಲ್ಲಿರುವನು. info
التفاسير:

external-link copy
137 : 4

اِنَّ الَّذِیْنَ اٰمَنُوْا ثُمَّ كَفَرُوْا ثُمَّ اٰمَنُوْا ثُمَّ كَفَرُوْا ثُمَّ ازْدَادُوْا كُفْرًا لَّمْ یَكُنِ اللّٰهُ لِیَغْفِرَ لَهُمْ وَلَا لِیَهْدِیَهُمْ سَبِیْلًا ۟ؕ

ಯಾರು ಸತ್ಯವಿಶ್ವಾಸವನ್ನು ಸ್ವೀಕರಿಸಿ ಅನಂತರ ನಿಷೇಧಿಸಿದರೋ, ಬಳಿಕ ಪುನಃ ವಿಶ್ವಾಸವಿಟ್ಟು, ಅನಂತರ ಪುನಃ ನಿಷೇಧಿಸಿದರೋ, ಅನಂತರ ತಮ್ಮ ನಿಷೇಧದಲ್ಲಿ ಮುಂದುವರೆದರೋ ಖಂಡಿತ ಅವರಿಗೆ ಅಲ್ಲಾಹನು ಕ್ಷಮಿಸುವುದಿಲ್ಲ ಮತ್ತು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ. info
التفاسير:

external-link copy
138 : 4

بَشِّرِ الْمُنٰفِقِیْنَ بِاَنَّ لَهُمْ عَذَابًا اَلِیْمَا ۟ۙ

ನೀವು ಕಪಟ ವಿಶ್ವಾಸಿಗಳಿಗೆ ವೇದನಾಜನಕವಾದ ಶಿಕ್ಷೆಯಿದೆಯೆಂಬ ಸುವಾರ್ತೆಯನ್ನು ತಿಳಿಸಿರಿ. info
التفاسير:

external-link copy
139 : 4

١لَّذِیْنَ یَتَّخِذُوْنَ الْكٰفِرِیْنَ اَوْلِیَآءَ مِنْ دُوْنِ الْمُؤْمِنِیْنَ ؕ— اَیَبْتَغُوْنَ عِنْدَهُمُ الْعِزَّةَ فَاِنَّ الْعِزَّةَ لِلّٰهِ جَمِیْعًا ۟ؕ

ಅವರು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುವವರಾಗಿದ್ದಾರೆ. ಏನು ಅವರು ಅವರ ಬಳಿ ಗೌರವವನ್ನು ಅರಿಸಿ ಹೋಗುತ್ತಿದ್ದಾರೆಯೆ? ಗೌರವವು ಸಂಪೂರ್ಣವಾಗಿಯು ಅಲ್ಲಾಹನ ಅಧೀನದಲ್ಲಿದೆ. info
التفاسير:

external-link copy
140 : 4

وَقَدْ نَزَّلَ عَلَیْكُمْ فِی الْكِتٰبِ اَنْ اِذَا سَمِعْتُمْ اٰیٰتِ اللّٰهِ یُكْفَرُ بِهَا وَیُسْتَهْزَاُ بِهَا فَلَا تَقْعُدُوْا مَعَهُمْ حَتّٰی یَخُوْضُوْا فِیْ حَدِیْثٍ غَیْرِهٖۤ ۖؗ— اِنَّكُمْ اِذًا مِّثْلُهُمْ ؕ— اِنَّ اللّٰهَ جَامِعُ الْمُنٰفِقِیْنَ وَالْكٰفِرِیْنَ فِیْ جَهَنَّمَ جَمِیْعَا ۟ۙ

ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಾ, ಗೇಲಿ ಮಾಡುತ್ತಾ ಇರುವ ಯಾವುದಾದರೂ ಸಭೆಯನ್ನು ನೀವು ಆಲಿಸಿದರೆ ಅವರು ಬೇರಾವುದಾದರೂ ವಿಚಾರವನ್ನು ಆರಂಭಿಸುವ ತನಕ ನೀವು ಅವರೊಂದಿಗೆ ಕುಳಿತುಕೊಳ್ಳಬೇಡಿರಿ ಎಂದು ಅಲ್ಲಾಹನು ನಿಮ್ಮ ಬಳಿಯಿರುವ ಗ್ರಂಥದಲ್ಲಿ ಆದೇಶ ನೀಡಿರುತ್ತಾನೆ. ಇಲ್ಲವಾದರೆ ನೀವು ಸಹ ಅವರಂತೆಯೇ ಆಗಿ ಬಿಡುವಿರಿ ಖಂಡಿತವಾಗಿಯು ಅಲ್ಲಾಹನು ಸಕಲ ಸತ್ಯನಿಷೇಧಿಗಳನ್ನೂ, ಸಕಲ ಕಪಟವಿಶ್ವಾಸಿಗಳನ್ನೂ ನರಕದಲ್ಲಿ ಒಟ್ಟುಗೂಡಿಸಲಿರುವನು. info
التفاسير: