Prijevod značenja časnog Kur'ana - Prijevod na kannada jezik (južno indijski jezik) - Bešir Misuri

ಸಬಅ್

external-link copy
1 : 34

اَلْحَمْدُ لِلّٰهِ الَّذِیْ لَهٗ مَا فِی السَّمٰوٰتِ وَمَا فِی الْاَرْضِ وَلَهُ الْحَمْدُ فِی الْاٰخِرَةِ ؕ— وَهُوَ الْحَكِیْمُ الْخَبِیْرُ ۟

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳ ಒಡೆಯನಾದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು ಮತ್ತು ಅವನಿಗೇ ಪರಲೋಕದಲ್ಲಿ ಸರ್ವಸ್ತುತಿಯು ಮೀಸಲಿರುವುದು. ಅವನು ಯುಕ್ತಿಪೂರ್ಣನೂ, ವಿವರಪೂರ್ಣನೂ ಆಗಿದ್ದಾನೆ. info
التفاسير:

external-link copy
2 : 34

یَعْلَمُ مَا یَلِجُ فِی الْاَرْضِ وَمَا یَخْرُجُ مِنْهَا وَمَا یَنْزِلُ مِنَ السَّمَآءِ وَمَا یَعْرُجُ فِیْهَا ؕ— وَهُوَ الرَّحِیْمُ الْغَفُوْرُ ۟

ಭೂಮಿಯಲ್ಲಿ ಪ್ರವೇಶಿಸುವ ಮತ್ತು ಅದರಿಂದ ಹೊರಬರುವ, ಆಕಾಶದಿಂದ ಇಳಿಯುವ ಮತ್ತು ಅದರಲ್ಲಿ ಏರಿ ಹೋಗುವ ಎಲ್ಲವನ್ನೂ ಅವನು ಅರಿಯುತ್ತಾನೆ ಮತ್ತು ಅವನು ಕರುಣಾಮಯಿಯು, ಕ್ಷಮಾಶೀಲನೂ ಆಗಿದ್ದಾನೆ. info
التفاسير:

external-link copy
3 : 34

وَقَالَ الَّذِیْنَ كَفَرُوْا لَا تَاْتِیْنَا السَّاعَةُ ؕ— قُلْ بَلٰی وَرَبِّیْ لَتَاْتِیَنَّكُمْ ۙ— عٰلِمِ الْغَیْبِ ۚ— لَا یَعْزُبُ عَنْهُ مِثْقَالُ ذَرَّةٍ فِی السَّمٰوٰتِ وَلَا فِی الْاَرْضِ وَلَاۤ اَصْغَرُ مِنْ ذٰلِكَ وَلَاۤ اَكْبَرُ اِلَّا فِیْ كِتٰبٍ مُّبِیْنٍ ۟ۙ

ಅಂತ್ಯಗಳಿಗೆ (ಪ್ರಳಯ) ನಮ್ಮಲ್ಲಿಗೆ ಬರಲಾರದು ಎಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ: ಅಲ್ಲ ಅಗೋಚರ ಜ್ಞಾನಿಯಾದ ನನ್ನ ಪ್ರಭುವಿನಾಣೆ! ಅದು ನಿಮ್ಮಲ್ಲಿಗೆ ಖಂಡಿತ ಬರುವುದು. ಅಲ್ಲಾಹನಿಂದ ಆಕಾಶಗಳಲ್ಲಾಗಲೀ ಭೂಮಿಯಲ್ಲಾಗಲೀ, ಅಣೂತೂಕದಷ್ಟಾದರೂ ಸರಿ ಮರೆಯಾಗಿರುವುದಿಲ್ಲ. ಮತ್ತು ಅದಕ್ಕಿಂತ ಚಿಕ್ಕದಿರಲಿ, ಇಲ್ಲವೇ ದೊಡ್ಡದಿರಲಿ ಎಲ್ಲವೂ ಸುಸ್ಪಷ್ಟ ದಾಖಲೆಯಲ್ಲಿದೆ. info
التفاسير:

external-link copy
4 : 34

لِّیَجْزِیَ الَّذِیْنَ اٰمَنُوْا وَعَمِلُوا الصّٰلِحٰتِ ؕ— اُولٰٓىِٕكَ لَهُمْ مَّغْفِرَةٌ وَّرِزْقٌ كَرِیْمٌ ۟

ಪ್ರಳಯ ಬರುವುದು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರಿಗೆ ಪ್ರತಿಫಲ ನೀಡಲೆಂದಾಗಿರುತ್ತದೆ. ಅವರಿಗೆ ಕ್ಷಮೆ ಹಾಗೂ ಸನ್ಮಾನ್ಯ ಜೀವನಾಧಾರ ವಿರುವುದು. info
التفاسير:

external-link copy
5 : 34

وَالَّذِیْنَ سَعَوْ فِیْۤ اٰیٰتِنَا مُعٰجِزِیْنَ اُولٰٓىِٕكَ لَهُمْ عَذَابٌ مِّنْ رِّجْزٍ اَلِیْمٌ ۟

ನಮ್ಮನ್ನು ಸೋಲಿಸಬಲ್ಲವೆಂಬ ಕಲ್ಪನೆಯಲ್ಲಿ ನಮ್ಮ ಸೂಕ್ತಿಗಳ ವಿರುದ್ಧ ಪ್ರಯತ್ನ ಪಟ್ಟಿರುವವರಿಗೆ ಅತಿ ನಿಕೃಷ್ಟವಾದ ವೇದನಾಜನಕ ಶಿಕ್ಷೆೆಯಿರುವುದು. info
التفاسير:

external-link copy
6 : 34

وَیَرَی الَّذِیْنَ اُوْتُوا الْعِلْمَ الَّذِیْۤ اُنْزِلَ اِلَیْكَ مِنْ رَّبِّكَ هُوَ الْحَقَّ ۙ— وَیَهْدِیْۤ اِلٰی صِرَاطِ الْعَزِیْزِ الْحَمِیْدِ ۟

(ಓ ಪೈಗಂಬರರೇ) ನಿಮ್ಮೆಡೆಗೆ ತಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿರುವುದು ಸತ್ಯವಾಗಿದೆಯೆಂದು ಮತ್ತು ಇದು ಪ್ರಚಂಡನೂ ಸ್ತುತ್ಯರ್ಹನೂ ಆದ ಅಲ್ಲಾಹನ ಮಾರ್ಗದೆಡೆಗೆ ಮುನ್ನಡೆಸುತ್ತದೆಂದು ಜ್ಞಾನ ನೀಡಲ್ಪಟ್ಟವರು ಮಾತ್ರ ತಿಳಿಯುತ್ತಾರೆ. info
التفاسير:

external-link copy
7 : 34

وَقَالَ الَّذِیْنَ كَفَرُوْا هَلْ نَدُلُّكُمْ عَلٰی رَجُلٍ یُّنَبِّئُكُمْ اِذَا مُزِّقْتُمْ كُلَّ مُمَزَّقٍ ۙ— اِنَّكُمْ لَفِیْ خَلْقٍ جَدِیْدٍ ۟ۚ

ಮತ್ತು ಸತ್ಯನಿಷೇಧಿಗಳು ಹೇಳಿದರು: ನೀವು ಸಂಪೂರ್ಣವಾಗಿ ಛಿದ್ರ ಛಿದ್ರವಾದ ಬಳಿಕವೂ ಪುನಃ ಹೊಸದಾಗಿ ಸೃಷ್ಟಿಸಲ್ಪಡುವಿರೆಂದು ಹೇಳುವ ಒಬ್ಬ ವ್ಯಕ್ತಿಯನ್ನು ನಾವು ನಿಮಗೆ ತಿಳಿಸಕೊಡಲೇ. info
التفاسير: