Prijevod značenja časnog Kur'ana - Prijevod na kannada jezik (južno indijski jezik) - Bešir Misuri

Broj stranice:close

external-link copy
70 : 12

فَلَمَّا جَهَّزَهُمْ بِجَهَازِهِمْ جَعَلَ السِّقَایَةَ فِیْ رَحْلِ اَخِیْهِ ثُمَّ اَذَّنَ مُؤَذِّنٌ اَیَّتُهَا الْعِیْرُ اِنَّكُمْ لَسٰرِقُوْنَ ۟

ಯೂಸುಫ್‌ರವರು ಅವರ ಸಾಮಾನು ಸಿದ್ಧಪಡಿಸಿಕೊಟ್ಟಾಗ ತನ್ನ ಸಹೋದರನ ಸರಕಿನ ಚೀಲದಲ್ಲಿ ಪಾನ ಪಾತ್ರೆಯನ್ನು ಇಟ್ಟುಬಿಟ್ಟರು. ಅನಂತರ ಕರೆ ನೀಡುವವನೊಬ್ಬನು ಕೂಗಿ ಹೇಳಿದನು; ಓ ಯಾತ್ರಿಕ ತಂಡದವರೇ, ನಿಸ್ಸಂದೇಹವಾಗಿಯೂ ನೀವು ಕಳ್ಳರಾಗಿದ್ದೀರಿ. info
التفاسير:

external-link copy
71 : 12

قَالُوْا وَاَقْبَلُوْا عَلَیْهِمْ مَّاذَا تَفْقِدُوْنَ ۟

ಆವರು ಅವರ ಕಡೆಗೆ ತಿರುಗಿ ಹೇಳಿದರು; ನಿಮ್ಮ ಯಾವ ವಸ್ತು ಕಳೆದು ಹೋಗಿದೆ? info
التفاسير:

external-link copy
72 : 12

قَالُوْا نَفْقِدُ صُوَاعَ الْمَلِكِ وَلِمَنْ جَآءَ بِهٖ حِمْلُ بَعِیْرٍ وَّاَنَا بِهٖ زَعِیْمٌ ۟

ಅವರು ಉತ್ತರಿಸಿದರು; ರಾಜನ ಪಾನಪಾತ್ರೆ ಕಳೆದು ಹೋಗಿದೆ. ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆಯ ಹೊರÉಯಷÀÄ್ಟ ಧಾನ್ಯ ಸಿಗುವುದು ಮತ್ತು ಅದರ ಹೊಣೆಗಾರ ನಾನಾಗಿದ್ದೇನೆ. info
التفاسير:

external-link copy
73 : 12

قَالُوْا تَاللّٰهِ لَقَدْ عَلِمْتُمْ مَّا جِئْنَا لِنُفْسِدَ فِی الْاَرْضِ وَمَا كُنَّا سٰرِقِیْنَ ۟

ಅವರು ಹೇಳಿದರು; ಅಲ್ಲಾಹನ ಆಣೆ ನಾವು ಈ ದೇಶದಲ್ಲಿ ಕ್ಷೆÆÃಭೆ ಹರಡಲು ಬಂದಿಲ್ಲವೆAದು ಮತ್ತು ನಾವು ಕಳ್ಳರೂ ಅಲ್ಲವೆಂದು ನಿಮಗೆ ಚೆನ್ನಾಗಿ ತಿಳಿದಿದೆ. info
التفاسير:

external-link copy
74 : 12

قَالُوْا فَمَا جَزَآؤُهٗۤ اِنْ كُنْتُمْ كٰذِبِیْنَ ۟

ಅವರು; ಸರಿ, ನೀವು ಸುಳ್ಳುಗಾರರಾಗಿದ್ದರೆ ಕಳ್ಳನ ಶಿಕ್ಷೆಯೇನು ಎಂದು ಕೇಳಿದರು, info
التفاسير:

external-link copy
75 : 12

قَالُوْا جَزَآؤُهٗ مَنْ وُّجِدَ فِیْ رَحْلِهٖ فَهُوَ جَزَآؤُهٗ ؕ— كَذٰلِكَ نَجْزِی الظّٰلِمِیْنَ ۟

ಸಹೋದರರು ಉತ್ತರಿಸಿದರು ಯಾರ ಸರಕಿನಲ್ಲಿ ಅದು ಸಿಗುವುದು ಅವನನ್ನೇ ಅದರ ಬದಲಿಗೆ ವಶಪಡಿಸಿಕೊಳ್ಳಲಾಗುವುದು. ನಾವು ಇದೇ ಪ್ರಕಾರ ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ, info
التفاسير:

external-link copy
76 : 12

فَبَدَاَ بِاَوْعِیَتِهِمْ قَبْلَ وِعَآءِ اَخِیْهِ ثُمَّ اسْتَخْرَجَهَا مِنْ وِّعَآءِ اَخِیْهِ ؕ— كَذٰلِكَ كِدْنَا لِیُوْسُفَ ؕ— مَا كَانَ لِیَاْخُذَ اَخَاهُ فِیْ دِیْنِ الْمَلِكِ اِلَّاۤ اَنْ یَّشَآءَ اللّٰهُ ؕ— نَرْفَعُ دَرَجٰتٍ مَّنْ نَّشَآءُ ؕ— وَفَوْقَ كُلِّ ذِیْ عِلْمٍ عَلِیْمٌ ۟

ಹಾಗೆಯೇ ಯೂಸುಫ್ ತನ್ನ ಸಹೋದರನ ಸರಕಿಗಿಂತ ಮೊದಲು ಅವರ ಸರಕುಗಳಿಂದಲೇ ತಪಾಸಣೆ ಆರಂಭಿಸಿದರು. ಅನಂತರ ತನ್ನ ಸಹೋದರನ ಸರಕಿನಿಂದ ಪಾನ ಪಾತ್ರೆಯನ್ನು ಹೊರತೆಗೆದರು. ಹೀಗೆ ನಾವು ಯೂಸುಫ್‌ರವರಿಗೆ ಉಪಾಯವನ್ನು ಕಲಿಸಿಕೊಟ್ಟೆವು. ಅಲ್ಲಾಹನು ಇಚ್ಛಿಸದಿರುತ್ತಿದ್ದರೆ ರಾಜನ ಕಾನೂನಿನ ಪ್ರಕಾರ ತನ್ನ ಸಹೋದರನನ್ನು ತಡೆದಿರಿಸಿಕೊಳ್ಳಲಾಗುತ್ತಿರಲಿಲ್ಲ. ನಾವು ಇಚ್ಛಿಸಿದವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ ಮತ್ತು ಪ್ರತಿಯೊಬ್ಬ ಜ್ಞಾನಿಗಿಂತ ಔನ್ನತ್ಯವನ್ನು ಹೊಂದಿರುವ ಇನ್ನೊಬ್ಬ ಸರ್ವಜ್ಞಾನಿಯಿದ್ದಾನೆ. info
التفاسير:

external-link copy
77 : 12

قَالُوْۤا اِنْ یَّسْرِقْ فَقَدْ سَرَقَ اَخٌ لَّهٗ مِنْ قَبْلُ ۚ— فَاَسَرَّهَا یُوْسُفُ فِیْ نَفْسِهٖ وَلَمْ یُبْدِهَا لَهُمْ ۚ— قَالَ اَنْتُمْ شَرٌّ مَّكَانًا ۚ— وَاللّٰهُ اَعْلَمُ بِمَا تَصِفُوْنَ ۟

ಆಗ ಸಹೋದರರು ಹೇಳಿದರು; ಇವನು ಕದ್ದರೂ(ಆಶ್ಚರ್ಯವಿಲ್ಲ) ಇದಕ್ಕೆ ಮೊದಲು ಇವನ ಸಹೋದರ(ಯೂಸುಫ್)ನೂ ಸಹ ಕದ್ದಿದ್ದಾನೆ. ಆದರೆ ಯೂಸುಫ್ ಈ ವಿಚಾರವನ್ನು ತನ್ನ ಮನಸ್ಸಿನಲ್ಲಿ ಅಡಗಿಸಿಟ್ಟರು ಅವರ ಮುಂದೆ ಬಹಿರಂಗಗೊಳಿಸಲಿಲ್ಲ. ನೀವು ಅತ್ಯಂತ ನೀಚಮಟ್ಟದಲ್ಲಿ ಇದ್ದೀರಿ ಹಾಗೂ ನೀವು ಹೇಳುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಂಡರು. info
التفاسير:

external-link copy
78 : 12

قَالُوْا یٰۤاَیُّهَا الْعَزِیْزُ اِنَّ لَهٗۤ اَبًا شَیْخًا كَبِیْرًا فَخُذْ اَحَدَنَا مَكَانَهٗ ۚ— اِنَّا نَرٰىكَ مِنَ الْمُحْسِنِیْنَ ۟

ಅವರು ಹೇಳಿದರು; ರಾಜರೇ ಇವನ ತಂದೆ ತುಂಬಾ ಪ್ರಾಯದ ವೃದ್ಧ ವ್ಯಕ್ತಿಯಾಗಿದ್ದಾರೆ. ತಾವು ಅವನ ಸ್ಥಾನದಲ್ಲಿ ನಮ್ಮಲ್ಲಿ ಯಾರನ್ನಾದರೂ ತಡೆದಿರಿಸಿಕೊಳ್ಳಿರಿ. ನಾವು ತಮ್ಮನ್ನು ಮಹಾ ಸಜ್ಜನರಲ್ಲಿ ಕಾಣುತ್ತಿದ್ದೇವೆ. info
التفاسير: