আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
29 : 46

وَاِذْ صَرَفْنَاۤ اِلَیْكَ نَفَرًا مِّنَ الْجِنِّ یَسْتَمِعُوْنَ الْقُرْاٰنَ ۚ— فَلَمَّا حَضَرُوْهُ قَالُوْۤا اَنْصِتُوْا ۚ— فَلَمَّا قُضِیَ وَلَّوْا اِلٰی قَوْمِهِمْ مُّنْذِرِیْنَ ۟

(ಓ ಪೈಗಂಬರರೇ)ಕುರ್‌ಆನನ್ನು ಆಲಿಸಲೆಂದು ನಾವು ಯಕ್ಷ(ಜಿನ್ನ್)ಗಳ ಸಮೂಹವೊಂದನ್ನು ನಿಮ್ಮೆಡೆಗೆ ತಿರುಗಿಸಿದ ಸಂದರ್ಭವನ್ನು ಸ್ಮರಿಸಿರಿ. ಹಾಗೆಯೇ ಅವರು ಪೈಗಂಬರರ ಬಳಿಗೆ ಬಂದಾಗ ಪರಸ್ಪರ ಮೌನವಾಗಿ ಆಲಿಸಿರಿ ಎಂದರು. ಅನಂತರ ಓದಿ ಮುಗಿದ ಬಳಿಕ ಮುನ್ನೆಚ್ಚರಿಕೆ ನೀಡುವವರಾಗಿ ತಮ್ಮ ಜನಾಂಗದೆಡೆಗೆ ಮರಳಿದರು. info
التفاسير:

external-link copy
30 : 46

قَالُوْا یٰقَوْمَنَاۤ اِنَّا سَمِعْنَا كِتٰبًا اُنْزِلَ مِنْ بَعْدِ مُوْسٰی مُصَدِّقًا لِّمَا بَیْنَ یَدَیْهِ یَهْدِیْۤ اِلَی الْحَقِّ وَاِلٰی طَرِیْقٍ مُّسْتَقِیْمٍ ۟

ಅವರು ಹೇಳಿದರು; ಓ ನಮ್ಮ ಜನಾಂಗವೇ, ನಿಜವಾಗಿಯೂ ನಾವು ಮೂಸಾರವರ ನಂತರ ಅವತೀರ್ಣಗೊಳಿಸಲಾದಂತಹ ಗ್ರಂಥವನ್ನು ಆಲಿಸಿರುವೆವು. ಅದು ತನ್ನ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅದು ಸತ್ಯಧರ್ಮದೆಡೆಗೆ ಮತ್ತು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತದೆ. info
التفاسير:

external-link copy
31 : 46

یٰقَوْمَنَاۤ اَجِیْبُوْا دَاعِیَ اللّٰهِ وَاٰمِنُوْا بِهٖ یَغْفِرْ لَكُمْ مِّنْ ذُنُوْبِكُمْ وَیُجِرْكُمْ مِّنْ عَذَابٍ اَلِیْمٍ ۟

ಓ ನಮ್ಮ ಜನಾಂಗವೇ, ನೀವು ಅಲ್ಲಾಹನತ್ತ ಕರೆ ನೀಡುವವನ ಕರೆಗೆ ಓಗೊಡಿರಿ ಹಾಗು ಅವನಲ್ಲಿ ವಿಶ್ವಾಸವನ್ನಿಡಿರಿ. ಆಗ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ವೇದನಾಜನಕ ಯಾತನೆಯಿಂದ ರಕ್ಷಿಸುವನು. info
التفاسير:

external-link copy
32 : 46

وَمَنْ لَّا یُجِبْ دَاعِیَ اللّٰهِ فَلَیْسَ بِمُعْجِزٍ فِی الْاَرْضِ وَلَیْسَ لَهٗ مِنْ دُوْنِهٖۤ اَوْلِیَآءُ ؕ— اُولٰٓىِٕكَ فِیْ ضَلٰلٍ مُّبِیْنٍ ۟

ಯಾರು ಅಲ್ಲಾಹನತ್ತ ಕರೆ ನೀಡುವವನ ಕರೆಗೆ ಓಗೊಡುವುದಿಲ್ಲವೋ ಅವನು ಭೂಮಿಯಲ್ಲಿ (ಅಲ್ಲಾಹನನ್ನು) ಸೋಲಿಸಲಾರನು. ಅವನಿಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕ ಮಿತ್ರರಿಲ್ಲ. ಅವರು ಪ್ರತ್ಯಕ್ಷ ಮಾರ್ಗಭ್ರಷ್ಟತೆಯಲ್ಲಿರುವರು. info
التفاسير:

external-link copy
33 : 46

اَوَلَمْ یَرَوْا اَنَّ اللّٰهَ الَّذِیْ خَلَقَ السَّمٰوٰتِ وَالْاَرْضَ وَلَمْ یَعْیَ بِخَلْقِهِنَّ بِقٰدِرٍ عَلٰۤی اَنْ یُّحْیِ الْمَوْتٰی ؕ— بَلٰۤی اِنَّهٗ عَلٰی كُلِّ شَیْءٍ قَدِیْرٌ ۟

ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿ, ಅವುಗಳ ಸೃಷ್ಟಿಯಿಂದ ದಣಿಯದ ಅಲ್ಲಾಹನು ನಿಜವಾಗಿಯು ಮೃತರನ್ನು ಜೀವಂತಗೊಳಿಸಲು ಶಕ್ತನೆಂದು ಅವರು ಕಾಣುವುದಿಲ್ಲವೇ ? ಯಾಕಿಲ್ಲ ! ಖಂತವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
34 : 46

وَیَوْمَ یُعْرَضُ الَّذِیْنَ كَفَرُوْا عَلَی النَّارِ ؕ— اَلَیْسَ هٰذَا بِالْحَقِّ ؕ— قَالُوْا بَلٰی وَرَبِّنَا ؕ— قَالَ فَذُوْقُوا الْعَذَابَ بِمَا كُنْتُمْ تَكْفُرُوْنَ ۟

ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯ ಮುಂದೆ ಹಾಜರುಗೊಳಿಸಲಾಗುವ ದಿನ (ಹೇಳಲಾಗುವುದು) ಇದು ನಿಜವಲ್ಲವೇ ? ಆಗ ಅವರು ಹೇಳುವರು; ಹೌದು, ನಮ್ಮ ಪ್ರಭುವಿನಾಣೆಗೂ ಅವನು (ಅಲ್ಲಾಹನು) ಹೇಳುವನು. ಇದೀಗ ನೀವು ನಿಮ್ಮ ನಿಷೇಧದ ಫಲವಾಗಿ ಯಾತನೆಯನ್ನು ಸವಿಯಿರಿ. info
التفاسير:

external-link copy
35 : 46

فَاصْبِرْ كَمَا صَبَرَ اُولُوا الْعَزْمِ مِنَ الرُّسُلِ وَلَا تَسْتَعْجِلْ لَّهُمْ ؕ— كَاَنَّهُمْ یَوْمَ یَرَوْنَ مَا یُوْعَدُوْنَ ۙ— لَمْ یَلْبَثُوْۤا اِلَّا سَاعَةً مِّنْ نَّهَارٍ ؕ— بَلٰغٌ ۚ— فَهَلْ یُهْلَكُ اِلَّا الْقَوْمُ الْفٰسِقُوْنَ ۟۠

ಓ ಪೈಗಂಬರರೇ ಮನೋದಾರ್ಢ್ಯ ಸಂದೇಶವಾಹಕರು ಸಹನೆ ವಹಿಸಿದಂತೆಯೇ ನೀವೂ ಸಹನೆವಹಿಸಿರಿ ಮತ್ತು ಅವರ ಯಾತನೆಗಾಗಿ ಆತುರಪಟ್ಟುಕೊಳ್ಳದಿರಿ. ಅವರು ಎಚ್ಚರಿಕೆ ನೀಡಲಾಗುತ್ತಿದ್ದುದನ್ನು ಕಣ್ಣೆದುರು ಕಾಣುವ ದಿನ ಒಂದು ತಾಸು ಮಾತ್ರ ನಾವು (ಇಹಲೋಕದಲ್ಲಿ) ತಂಗಿದ್ದೇವೆAದು ಅವರಿಗೆ ಭಾಸವಾಗುವುದು. ಈ ಸಂದೇಶವನ್ನು ತಲುಪಿಸುವುದು (ನಿಮ್ಮ ಕೆಲಸ), ಇನ್ನು ದುಷ್ಟರ ಹೊರತು ಇನ್ನಾರನ್ನೂ ನಾಶಕ್ಕೊಳಪಡಿಸಲಾಗದು. info
التفاسير: