আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

ಅಲ್ -ಅಹ್ಕಾಫ್

external-link copy
1 : 46

حٰمٓ ۟ۚ

ಹಾ ಮೀಮ್ info
التفاسير:

external-link copy
2 : 46

تَنْزِیْلُ الْكِتٰبِ مِنَ اللّٰهِ الْعَزِیْزِ الْحَكِیْمِ ۟

ಈ ಗ್ರಂಥವು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ. info
التفاسير:

external-link copy
3 : 46

مَا خَلَقْنَا السَّمٰوٰتِ وَالْاَرْضَ وَمَا بَیْنَهُمَاۤ اِلَّا بِالْحَقِّ وَاَجَلٍ مُّسَمًّی ؕ— وَالَّذِیْنَ كَفَرُوْا عَمَّاۤ اُنْذِرُوْا مُعْرِضُوْنَ ۟

ನಾವು ಆಕಾಶಗಳನ್ನು, ಭೂಮಿಯನ್ನೂ ಮತ್ತು ಅವುಗಳ ನಡುವೆಯಿರುವ ಸಕಲ ವಸ್ತುಗಳನ್ನು ಉದ್ದೇಶಪೂರ್ವಕವಾಗಿಯೇ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿದ್ದೇವೆ, ಆದರೆ ಸತ್ಯನಿಷೇಧಿಗಳು ತಮಗೆ ಎಚ್ಚರಿಕೆ ನೀಡಲಾಗುತ್ತಿರುವುದರಿಂದ ವಿಮುಖರಾಗುತ್ತಾರೆ. info
التفاسير:

external-link copy
4 : 46

قُلْ اَرَءَیْتُمْ مَّا تَدْعُوْنَ مِنْ دُوْنِ اللّٰهِ اَرُوْنِیْ مَاذَا خَلَقُوْا مِنَ الْاَرْضِ اَمْ لَهُمْ شِرْكٌ فِی السَّمٰوٰتِ ؕ— اِیْتُوْنِیْ بِكِتٰبٍ مِّنْ قَبْلِ هٰذَاۤ اَوْ اَثٰرَةٍ مِّنْ عِلْمٍ اِنْ كُنْتُمْ صٰدِقِیْنَ ۟

ಓ ಪೈಗಂಬರರೇ ಹೇಳಿರಿ; ನೀವು ಅಲ್ಲಾಹನನ್ನು ಬಿಟ್ಟು ಕರೆದು ಬೇಡುತ್ತಿರುವವರ ಕುರಿತು ಯೋಚಿಸಿದ್ದೀರಾ. ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿದ್ದಾರೆ ? ಅಥವ ಅವರಿಗೆ ಆಕಾಶಗಳ ಸೃಷ್ಟಿಯಲ್ಲಿ ಯಾವ ಪಾಲುದಾರಿಕೆಯಿದೆ ಎಂಬುದನ್ನು ನನಗೆ ತೋರಿಸಿಕೊಡಿರಿ ? ನೀವು ಸತ್ಯವಂತರಾಗಿದ್ದರೆ ಇದಕ್ಕೆ ಮುಂಚಿನ ಯಾವುದಾದರೂ ಗ್ರಂಥವನ್ನು ಅಥವ ಜ್ಞಾನದ ಯಾವುದಾದರೂ ಪಳಿಯುಳಿಕೆಗಳು ನಿಮ್ಮ ಬಳಿಯಲ್ಲಿದ್ದರೆ ಅದನ್ನೇ ತನ್ನಿರಿ. info
التفاسير:

external-link copy
5 : 46

وَمَنْ اَضَلُّ مِمَّنْ یَّدْعُوْا مِنْ دُوْنِ اللّٰهِ مَنْ لَّا یَسْتَجِیْبُ لَهٗۤ اِلٰی یَوْمِ الْقِیٰمَةِ وَهُمْ عَنْ دُعَآىِٕهِمْ غٰفِلُوْنَ ۟

ಅಲ್ಲಾಹನನ್ನು ಬಿಟ್ಟು ತನ್ನ ಪ್ರಾರ್ಥನೆಗೆ ಪ್ರಳಯದಿನದವರೆಗೂ ಓಗೊಡಲಾರದಂತಹವರನ್ನು ಕರೆದು ಬೇಡುವವನಿಗಿಂತ ಹೆಚ್ಚು ದಾರಿಗೆಟ್ಟವನು ಇನ್ನಾರಿದ್ದಾನೆ, ಮಾತ್ರವಲ್ಲ ಅವರಂತು ಇವರ ಮೊರೆಯ ಬಗ್ಗೆ ಏನೂ ಅರಿವಿಲ್ಲದವರಾಗಿದ್ದಾರೆ. info
التفاسير: