[1] ಒಮ್ಮೆ ಒಂದು ಶುಕ್ರವಾರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖುತ್ಬಾ (ಪ್ರವಚನ) ನಿರ್ವಹಿಸುತ್ತಿದ್ದಾಗ ವ್ಯಾಪಾರ ತಂಡವು ಮದೀನ ಮಾರುಕಟ್ಟೆಗೆ ಆಗಮಿಸಿತು. ಸದ್ದುಗದ್ದಲ ಕೇಳಿ ಮಸೀದಿಯಲ್ಲಿದ್ದ ಜನರೆಲ್ಲರೂ ಸರಕು ಖರೀದಿಸಲು ಮಾರುಕಟ್ಟೆಗೆ ಓಡಿದರು. ಕೇವಲ 12 ಮಂದಿ ಮಾತ್ರ ಮಸೀದಿಯಲ್ಲಿ ಉಳಿದರು. ಇದರ ಬಗ್ಗೆ ಈ ವಚನವು ಅವತೀರ್ಣವಾಯಿತು.