ಅಲ್ಲಾಹನ ಸ್ಮರಣೆಯಿಂದ ಹಾಗೂ ಅವತೀರ್ಣವಾದ ಸತ್ಯಸಂದೇಶದಿಂದ ಹೃದಯಗಳು ಮೃದುವಾಗಲು ಮತ್ತು ಇದಕ್ಕೆ ಮೊದಲು ಗ್ರಂಥ ನೀಡಲಾದವರಂತೆ (ಯಹೂದಿ-ಕ್ರೈಸ್ತರಂತೆ) ಆಗದಿರಲು ಸತ್ಯವಿಶ್ವಾಸಿಗಳಿಗೆ ಈಗಲೂ ಕೂಡ ಸಮಯವಾಗಲಿಲ್ಲವೇ? ಅವರ ಮುಖಾಂತರ ಒಂದು ದೀರ್ಘ ಅವಧಿಯು ಹಾದುಹೋದಾಗ ಅವರ ಹೃದಯಗಳು ಕಠೋರವಾದವು. ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದರು.