ترجمة معاني القرآن الكريم - الترجمة الكنادية - حمزة بتور

رقم الصفحة:close

external-link copy
17 : 56

یَطُوْفُ عَلَیْهِمْ وِلْدَانٌ مُّخَلَّدُوْنَ ۟ۙ

ಚಿರಂಜೀವಿಗಳಾದ ಹುಡುಗರು ಅವರ ನಡುವೆ ಸುತ್ತುವರು.[1] info

[1] ಚಿರಂಜೀವಿಗಳಾದ ಹುಡುಗರು ಎಂದರೆ ಅವರು ಸದಾ ಹುಡುಗರೇ ಆಗಿರುತ್ತಾರೆ.

التفاسير:

external-link copy
18 : 56

بِاَكْوَابٍ وَّاَبَارِیْقَ ۙ۬— وَكَاْسٍ مِّنْ مَّعِیْنٍ ۟ۙ

ಲೋಟಗಳು, ಹೂಜಿಗಳು ಮತ್ತು ಹರಿಯುವ ತೊರೆಯ ಶರಾಬನ್ನು ಹೊಂದಿರುವ ಪಾತ್ರೆಗಳೊಂದಿಗೆ. info
التفاسير:

external-link copy
19 : 56

لَّا یُصَدَّعُوْنَ عَنْهَا وَلَا یُنْزِفُوْنَ ۟ۙ

ಅದನ್ನು ಕುಡಿಯುವುದರಿಂದ ತಲೆನೋವು ಅಥವಾ ಅಮಲು ಉಂಟಾಗುವುದಿಲ್ಲ. info
التفاسير:

external-link copy
20 : 56

وَفَاكِهَةٍ مِّمَّا یَتَخَیَّرُوْنَ ۟ۙ

ಅವರಿಗೆ ಇಷ್ಟವಾದ ಹಣ್ಣುಗಳೊಂದಿಗೆ. info
التفاسير:

external-link copy
21 : 56

وَلَحْمِ طَیْرٍ مِّمَّا یَشْتَهُوْنَ ۟ؕ

ಅವರು ಬಯಸುವ ಹಕ್ಕಿಗಳ ಮಾಂಸಗಳೊಂದಿಗೆ. info
التفاسير:

external-link copy
22 : 56

وَحُوْرٌ عِیْنٌ ۟ۙ

(ಅಲ್ಲಿ) ಅರಳಿದ ಕಣ್ಣುಗಳಿರುವ ಬೆಳ್ಳಗಿನ ಅಪ್ಸರೆಗಳಿರುವರು. info
التفاسير:

external-link copy
23 : 56

كَاَمْثَالِ اللُّؤْلُو الْمَكْنُوْنِ ۟ۚ

ಅವರು (ಚಿಪ್ಪುಗಳಲ್ಲಿ) ಜೋಪಾನವಾಗಿಡಲಾದ ಮುತ್ತುಗಳಂತೆ ಕಾಣುವರು. info
التفاسير:

external-link copy
24 : 56

جَزَآءً بِمَا كَانُوْا یَعْمَلُوْنَ ۟

ಇವೆಲ್ಲವೂ ಅವರು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿವೆ. info
التفاسير:

external-link copy
25 : 56

لَا یَسْمَعُوْنَ فِیْهَا لَغْوًا وَّلَا تَاْثِیْمًا ۟ۙ

ಅವರು ಅಲ್ಲಿ ಅನಗತ್ಯ ಮಾತುಗಳನ್ನು ಮತ್ತು ದೋಷಪೂರಿತ ಮಾತುಗಳನ್ನು ಕೇಳುವುದಿಲ್ಲ. info
التفاسير:

external-link copy
26 : 56

اِلَّا قِیْلًا سَلٰمًا سَلٰمًا ۟

ಸಲಾಂ ಸಲಾಂ (ಶಾಂತಿ ಶಾಂತಿ) ಎಂಬ ಮಾತುಗಳ ಹೊರತು. info
التفاسير:

external-link copy
27 : 56

وَاَصْحٰبُ الْیَمِیْنِ ۙ۬— مَاۤ اَصْحٰبُ الْیَمِیْنِ ۟ؕ

ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು? info
التفاسير:

external-link copy
28 : 56

فِیْ سِدْرٍ مَّخْضُوْدٍ ۟ۙ

ಅವರು ಮುಳ್ಳುಗಳಿಲ್ಲದ ಬೋರೆ ಮರಗಳಲ್ಲಿ. info
التفاسير:

external-link copy
29 : 56

وَّطَلْحٍ مَّنْضُوْدٍ ۟ۙ

ಪದರ ಪದರ ಗೊನೆಗಳಿರುವ ಬಾಳೆಗಳಲ್ಲಿ. info
التفاسير:

external-link copy
30 : 56

وَّظِلٍّ مَّمْدُوْدٍ ۟ۙ

ಸುದೀರ್ಘ ನೆರಳಿನಲ್ಲಿ. info
التفاسير:

external-link copy
31 : 56

وَّمَآءٍ مَّسْكُوْبٍ ۟ۙ

ಹರಿಯುವ ನೀರಿನಲ್ಲಿ. info
التفاسير:

external-link copy
32 : 56

وَّفَاكِهَةٍ كَثِیْرَةٍ ۟ۙ

ಹೇರಳ ಹಣ್ಣು-ಹಂಪಲುಗಳಲ್ಲಿ. info
التفاسير:

external-link copy
33 : 56

لَّا مَقْطُوْعَةٍ وَّلَا مَمْنُوْعَةٍ ۟ۙ

ಅದು ಎಂದಿಗೂ ಮುಗಿಯುವುದಿಲ್ಲ ಮತ್ತು ತಡೆಯಲ್ಪಡುವುದಿಲ್ಲ. info
التفاسير:

external-link copy
34 : 56

وَّفُرُشٍ مَّرْفُوْعَةٍ ۟ؕ

ಎತ್ತರವಾಗಿರುವ ಹಾಸಿಗೆಗಳಲ್ಲಿ. info
التفاسير:

external-link copy
35 : 56

اِنَّاۤ اَنْشَاْنٰهُنَّ اِنْشَآءً ۟ۙ

ನಿಶ್ಚಯವಾಗಿಯೂ ನಾವು ಅವರ ಪತ್ನಿಯರನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿದ್ದೇವೆ. info
التفاسير:

external-link copy
36 : 56

فَجَعَلْنٰهُنَّ اَبْكَارًا ۟ۙ

ನಾವು ಅವರನ್ನು ಕನ್ಯೆಯರಾಗಿ ಮಾಡಿದ್ದೇವೆ. info
التفاسير:

external-link copy
37 : 56

عُرُبًا اَتْرَابًا ۟ۙ

ಪ್ರೀತಿಸುವವರಾಗಿ ಮತ್ತು ಸಮವಯಸ್ಕರಾಗಿ. info
التفاسير:

external-link copy
38 : 56

لِّاَصْحٰبِ الْیَمِیْنِ ۟ؕ۠

ಇವೆಲ್ಲವೂ ಬಲಭಾಗದ ಜನರಿಗೋಸ್ಕರ. info
التفاسير:

external-link copy
39 : 56

ثُلَّةٌ مِّنَ الْاَوَّلِیْنَ ۟ۙ

ಅವರು ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು. info
التفاسير:

external-link copy
40 : 56

وَثُلَّةٌ مِّنَ الْاٰخِرِیْنَ ۟ؕ

ನಂತರದವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು. info
التفاسير:

external-link copy
41 : 56

وَاَصْحٰبُ الشِّمَالِ ۙ۬— مَاۤ اَصْحٰبُ الشِّمَالِ ۟ؕ

ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು? info
التفاسير:

external-link copy
42 : 56

فِیْ سَمُوْمٍ وَّحَمِیْمٍ ۟ۙ

ಅವರು ಬಿಸಿ ಗಾಳಿ ಮತ್ತು ಕುದಿಯುವ ನೀರಿನಲ್ಲಿರುವರು. info
التفاسير:

external-link copy
43 : 56

وَّظِلٍّ مِّنْ یَّحْمُوْمٍ ۟ۙ

ಕರಿ ಹೊಗೆಯ ನೆರಳುಗಳಲ್ಲಿ. info
التفاسير:

external-link copy
44 : 56

لَّا بَارِدٍ وَّلَا كَرِیْمٍ ۟

ಅದು ತಂಪಾಗಿಲ್ಲ ಅಥವಾ ಆಹ್ಲಾದಕರವಾಗಿಲ್ಲ. info
التفاسير:

external-link copy
45 : 56

اِنَّهُمْ كَانُوْا قَبْلَ ذٰلِكَ مُتْرَفِیْنَ ۟ۚۖ

ಇದಕ್ಕಿಂತ ಮೊದಲು (ಇಹಲೋಕದಲ್ಲಿ) ಅವರು ಐಶ್ವರ್ಯವಂತರಾಗಿದ್ದರು. info
التفاسير:

external-link copy
46 : 56

وَكَانُوْا یُصِرُّوْنَ عَلَی الْحِنْثِ الْعَظِیْمِ ۟ۚ

ಅವರು ದೊಡ್ಡ ದೊಡ್ಡ ಪಾಪಕೃತ್ಯಗಳಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಿದ್ದರು. info
التفاسير:

external-link copy
47 : 56

وَكَانُوْا یَقُوْلُوْنَ ۙ۬— اَىِٕذَا مِتْنَا وَكُنَّا تُرَابًا وَّعِظَامًا ءَاِنَّا لَمَبْعُوْثُوْنَ ۟ۙ

ಅವರು ಹೇಳುತ್ತಿದ್ದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವಂತವಾಗಿ ಎಬ್ಬಿಸಲಾಗುವುದೇ? info
التفاسير:

external-link copy
48 : 56

اَوَاٰبَآؤُنَا الْاَوَّلُوْنَ ۟

ನಮ್ಮ ಪೂರ್ವಜರನ್ನು ಕೂಡ?” info
التفاسير:

external-link copy
49 : 56

قُلْ اِنَّ الْاَوَّلِیْنَ وَالْاٰخِرِیْنَ ۟ۙ

ಹೇಳಿರಿ: “ನಿಶ್ಚಯವಾಗಿಯೂ ನಿಮ್ಮಲ್ಲಿ ಮೊದಲಿನವರನ್ನು ಮತ್ತು ನಂತರದವರನ್ನು. info
التفاسير:

external-link copy
50 : 56

لَمَجْمُوْعُوْنَ ۙ۬— اِلٰی مِیْقَاتِ یَوْمٍ مَّعْلُوْمٍ ۟

ಒಂದು ನಿಶ್ಚಿತ ದಿನದ ಸಮಯದಲ್ಲಿ ಒಟ್ಟುಗೂಡಿಸಲಾಗುವುದು. info
التفاسير: