ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು ಮತ್ತು ಮುಹಮ್ಮದರಿಗೆ ಅವತೀರ್ಣವಾದ ಸಂದೇಶದಲ್ಲಿ—ಅದು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ—ವಿಶ್ವಾಸವಿಟ್ಟವರು ಯಾರೋ ಅವರ ಕೆಡುಕುಗಳನ್ನು ಅಲ್ಲಾಹು ಅಳಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
ಅದೇಕೆಂದರೆ ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವನ್ನು ಅನುಸರಿಸಿದರು. ಈ ರೀತಿ ಅಲ್ಲಾಹು ಜನರಿಗೆ ಅವರ ಸ್ಥಿತಿಗಳನ್ನು ವಿವರಿಸಿಕೊಡುತ್ತಾನೆ.
ನೀವು ಸತ್ಯನಿಷೇಧಿಗಳೊಡನೆ (ಯುದ್ಧದಲ್ಲಿ) ಮುಖಾಮುಖಿಯಾದರೆ ಅವರ ಕತ್ತುಗಳ ಮೇಲೆ ಬೀಸಿರಿ. ಅವರನ್ನು ಚೆನ್ನಾಗಿ ಬಗ್ಗುಬಡಿದ ನಂತರ ಅವರನ್ನು ಬಿಗಿಯಾಗಿ ಬಂಧಿಸಿರಿ. ನಂತರ ಒಂದೋ ಅವರೊಡನೆ ದಾಕ್ಷಿಣ್ಯ ತೋರಿರಿ[1] ಅಥವಾ ವಿಮೋಚನಾ ಶುಲ್ಕವನ್ನು ಪಡೆದು ಅವರನ್ನು ಸ್ವತಂತ್ರಗೊಳಿಸಿರಿ—ಯುದ್ಧವು ಅದರ ಭಾರವನ್ನು ಕಳಚುವ ತನಕ.[2] ಇದೇ ನಿಯಮ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನೇ ಅವರಿಂದ ಪ್ರತೀಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸುವುದಕ್ಕಾಗಿದೆ. ಯಾರು ಅಲ್ಲಾಹನ ಮಾರ್ಗದಲ್ಲಿ ಹತರಾಗುತ್ತಾರೋ ಅವರ ಕರ್ಮಗಳನ್ನು ಅವನು ಎಂದಿಗೂ ನಿಷ್ಫಲಗೊಳಿಸುವುದಿಲ್ಲ.
[1] ದಾಕ್ಷಿಣ್ಯ ತೋರುವುದು ಎಂದರೆ ಪರಿಹಾರ ಪಡೆಯದೆ ಅವರನ್ನು ಬಿಟ್ಟುಬಿಡುವುದು. [2] ಅಂದರೆ ಯುದ್ಧವು ಮುಗಿಯುವ ತನಕ.
التفاسير:
5:47
سَیَهْدِیْهِمْ وَیُصْلِحُ بَالَهُمْ ۟ۚ
ಅವನು ಅವರಿಗೆ ದಾರಿ ತೋರಿಸುವನು ಮತ್ತು ಅವರ ಸ್ಥಿತಿಯನ್ನು ಸುಧಾರಿಸುವನು.
التفاسير:
6:47
وَیُدْخِلُهُمُ الْجَنَّةَ عَرَّفَهَا لَهُمْ ۟
ಅವನು ಅವರಿಗೆ ಪರಿಚಯಿಸಿಕೊಟ್ಟ ಆ ಸ್ವರ್ಗಕ್ಕೆ ಅವನು ಅವರನ್ನು ಪ್ರವೇಶ ಮಾಡಿಸುವನು.