ತಿಳಿಯಿರಿ! ನಿಷ್ಕಳಂಕವಾದ ಆರಾಧನೆಯು ಅಲ್ಲಾಹನಿಗೆ ಮಾತ್ರವಾಗಿರಬೇಕು. ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಮಾಡಿಕೊಂಡವರು ಹೇಳುತ್ತಾರೆ: “ನಾವು ಅವರನ್ನು ಆರಾಧಿಸುವುದು ಅವರು ನಮ್ಮನ್ನು ಅಲ್ಲಾಹನಿಗೆ ಹತ್ತಿರಗೊಳಿಸುತ್ತಾರೆಂಬ ಕಾರಣದಿಂದಾಗಿದೆ.” ಅವರು ಯಾವ ವಿಷಯದಲ್ಲಿ ಭಿನ್ನಮತದಲ್ಲಿದ್ದಾರೋ ಆ ವಿಷಯದಲ್ಲಿ ನಿಶ್ಚಯವಾಗಿಯೂ ಅಲ್ಲಾಹು ಅವರ ಮಧ್ಯೆ ತೀರ್ಪು ನೀಡುವನು. ನಿಶ್ಚಯವಾಗಿಯೂ ಸುಳ್ಳು ಹೇಳುವ ಮತ್ತು ಕೃತಜ್ಞತಾಭಾವವಿಲ್ಲದ ಯಾರಿಗೂ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.