ಮೂಸಾ ಹೇಳಿದರು: “ಹೊರಟು ಹೋಗು! ನೀನು ನಿರಂತರ “ನನ್ನನ್ನು ಮುಟ್ಟಬೇಡಿ” ಎಂದು ಹೇಳುತ್ತಿರುವುದೇ ಇಹಲೋಕದಲ್ಲಿ ನಿನಗಿರುವ ಶಿಕ್ಷೆ.[1] ನಿನಗೆ ಒಂದು ನಿಶ್ಚಿತ ಅವಧಿಯಿದೆ. ಅದನ್ನು ಉಲ್ಲಂಘಿಸಲು ನಿನಗೆ ಸಾಧ್ಯವಿಲ್ಲ. ನೀನು ಧ್ಯಾನ ಮಾಡುತ್ತಿದ್ದ ನಿನ್ನ ದೇವರನ್ನು (ಕರುವನ್ನು) ನೋಡು. ನಾವು ಅದನ್ನು ಖಂಡಿತ ಸುಟ್ಟು ಬಿಡುವೆವು. ನಂತರ ಅದನ್ನು ನುಚ್ಚುನೂರು ಮಾಡಿ ಕಡಲಿಗೆ ಎಸೆಯುವೆವು.
[1] ಇದರ ನಂತರ ಅವನು ಜೀವನವಿಡೀ ಜನರನ್ನು ಕಂಡೊಡನೆ ನನ್ನನ್ನು ಮುಟ್ಟಬೇಡಿ, ನನ್ನಿಂದ ದೂರವಿರಿ ಎಂದು ಹೇಳುತ್ತಲೇ ಇದ್ದ. ಏಕೆಂದರೆ ಅವನನ್ನು ಯಾರಾದರೂ ಮುಟ್ಟಿದರೆ, ಅವನಿಗೂ ಮುಟ್ಟಿದವನಿಗೂ ಜ್ವರ ಬರುತ್ತಿತ್ತು. ನಂತರ ಅವನು ಜನವಾಸದಿಂದ ೂದೂರವಾಗಿ ಅಡವಿಗೆ ಹೋಗಿ ಮೃಗಗಳೊಡನೆ ವಾಸಿಸತೊಡಗಿದನು.