ಅಲ್ಲಾಹು ನಿಮಗೆ ನಿಮ್ಮ ಮನೆಗಳಲ್ಲಿ ವಿಶ್ರಾಂತಿಯ ಸ್ಥಳವನ್ನು ಮಾಡಿಕೊಟ್ಟಿದ್ದಾನೆ. ಜಾನುವಾರುಗಳ ತೊಗಲುಗಳಿಂದಲೂ ಅವನು ನಿಮಗೆ ಮನೆಗಳನ್ನು (ಡೇರೆಗಳನ್ನು) ಮಾಡಿಕೊಟ್ಟಿದ್ದಾನೆ. ನೀವು ಪ್ರಯಾಣ ಮಾಡುವ ದಿನಗಳಲ್ಲೂ ಮತ್ತು ಬಿಡಾರ ಹೂಡುವ ದಿನಗಳಲ್ಲೂ ಅವುಗಳನ್ನು ಅನಾಯಾಸವಾಗಿ ಒಯ್ಯುತ್ತೀರಿ. ಅವುಗಳ ಉಣ್ಣೆ, ತುಪ್ಪಳ ಮತ್ತು ಕೇಶಗಳಿಂದ ನೀವು ನಿಗದಿತ ಕಾಲದವರೆಗೆ ಉಪಯೋಗಗಳನ್ನು ಮತ್ತು ಆನಂದವನ್ನು ಪಡೆಯುತ್ತೀರಿ.