ಅಲ್ಲಾಹನೊಂದಿಗೆ (ಬೇರೆ ದೇವರುಗಳನ್ನು) ಸಹಭಾಗಿಗಳನ್ನಾಗಿ ಮಾಡಿದವರು ಹೇಳಿದರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸುತ್ತಿರಲಿಲ್ಲ. ಅವನು ಆಜ್ಞಾಪಿಸಿದ್ದಲ್ಲದೆ ಬೇರೇನನ್ನೂ ನಾವು ನಿಷಿದ್ಧವೆನ್ನುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ಮಾಡಿದ್ದರು. ಸಂದೇಶವಾಹಕರಿಗೆ ಸಂದೇಶವನ್ನು ತಲುಪಿಸುವುದಲ್ಲದೆ ಬೇರೇನಾದರೂ ಹೊಣೆಗಾರಿಕೆಯಿದೆಯೇ?