ಅಲ್ಲಾಹು ಒಂದು ಉದಾಹರಣೆಯನ್ನು ಕೊಡುತ್ತಾನೆ. ನಿರ್ಭಯ ಮತ್ತು ನೆಮ್ಮದಿಯಾಗಿದ್ದ ಒಂದು ಊರು. ಅದಕ್ಕೆ ಎಲ್ಲಾ ಕಡೆಗಳಿಂದಲೂ ಯಥೇಷ್ಟ ಆಹಾರ ಸಾಮಗ್ರಿಗಳು ಬರುತ್ತಿದ್ದವು. ಆದರೆ ಅವರು ಅಲ್ಲಾಹನ ಅನುಗ್ರಹಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರಿಗೆ ಹಸಿವು ಮತ್ತು ಭಯದ ವಾತಾವರಣವನ್ನು ಅನುಭವಿಸುವಂತೆ ಮಾಡಿದನು. ಇದು ಅವರು ಮಾಡಿದ ಕರ್ಮಗಳ ಫಲವಾಗಿತ್ತು.