ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಸ್ಪಷ್ಟ ಆಧಾರದ ಮೇಲೆ ನಿಂತಿರುವಾಗ ಮತ್ತು ಅವನು ತನ್ನ ದಯೆಯನ್ನು ನನಗೆ ದಯಪಾಲಿಸಿರುವಾಗ, ನಾನು ಅವನು ಹೇಳಿದಂತೆ ಕೇಳದಿದ್ದರೆ ಅವನಿಂದ ನನ್ನನ್ನು ರಕ್ಷಿಸುವವರು ಯಾರು? ನೀವು ನನಗೆ ನಷ್ಟವನ್ನೇ ಹೆಚ್ಚಿಸುತ್ತಿದ್ದೀರಿ.