ತಿಳಿಯಿರಿ! ಅವರು ತಮ್ಮ ಮಾತುಗಳನ್ನು (ಅಲ್ಲಾಹನಿಂದ) ಮುಚ್ಚಿಡುವುದಕ್ಕಾಗಿ ತಮ್ಮ ಎದೆಗಳನ್ನು ಮಡಚುತ್ತಾರೆ. ತಿಳಿಯಿರಿ! ಅವರು ತಮ್ಮ ಬಟ್ಟೆಗಳನ್ನು ಹೊದ್ದುಕೊಳ್ಳುವಾಗ ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆ. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.