ಅಲ್ಲಾಹನ ಖಜಾನೆಗಳು ನನ್ನ ಬಳಿಯಿವೆ ಎಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ಅದೃಶ್ಯ ಜ್ಞಾನವಿಲ್ಲ. ನಾನೊಬ್ಬ ದೇವದೂತನೆಂದು ನಾನು ಹೇಳುವುದಿಲ್ಲ. ನಿಮ್ಮ ಕಣ್ಣುಗಳು ಕೀಳಾಗಿ ಕಾಣುವ ಈ ಜನರಿಗೆ ಅಲ್ಲಾಹು ಒಳ್ಳೆಯದು ಮಾಡಲಾರನೆಂದು ನಾನು ಹೇಳುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. ನಾನು ಇಂತಹ ಮಾತುಗಳನ್ನು ಹೇಳಿದರೆ ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿಬಿಡುವೆನು.”