ನೀವು ಸತ್ಯವಿಶ್ವಾಸಿಗಳನ್ನು ಬೆದರಿಸುವ ಸಲುವಾಗಿ ಹಾಗೂ ಅಲ್ಲಾಹನ ಮಾರ್ಗದಿಂದ ತಡೆಯುವ ಸಲುವಾಗಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವ ಸಲುವಾಗಿ ಪ್ರತಿಯೊಂದು ಮಾರ್ಗದಲ್ಲಿ ಕುಳಿತು ಕೊಳ್ಳಬೇಡಿರಿ. ನೀವು ಅಲ್ಪಸಂಖ್ಯಾತರಾಗಿದ್ದಾಗ ಅಲ್ಲಾಹನು ನಿಮ್ಮನ್ನು ಬಹುಸಂಖ್ಯಾತರನ್ನಾಗಿ ಮಾಡಿದ್ದನ್ನು ಸ್ಮರಿಸರಿ ಮತ್ತು ವಿಛಿದ್ರಕಾರಿಗಳ ಅಂತ್ಯವು ಹೇಗಾಯಿತೆಂಬುದನ್ನು ನೋಡಿರಿ.