ಹೂದ್ ಹೇಳಿದರು: ಖಂಡಿತವಾಗಿಯು ನಿಮ್ಮ ಮೇಲೆ ಅಲ್ಲಾಹನ ಕಡೆಯ ಶಿಕ್ಷೆ ಮತ್ತು ಕ್ರೋಧವು ಎರಗಿದೆ. ನೀವು ಮತ್ತು ನಿಮ್ಮ ಪೂರ್ವಿಕರು ನಿಶ್ಚಿಯಿಸಿದಂತಹ ಹೆಸರುಗಳ (ವಿಗ್ರಹಗಳ) ಕುರಿತು ನೀವು ನನ್ನಲ್ಲಿ ತರ್ಕ ಮಾಡುತ್ತಿರುವಿರಾ? ಮತ್ತು ಅವು ಆರಾಧ್ಯರೆಂಬುದಕ್ಕೆ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಹಾಗಾದರೆ ನೀವು ಕಾಯುತ್ತಿರಿ, ನಾನೂ ಸಹ ನಿಮ್ಮೊಂದಿಗೆ ಕಾಯುತ್ತಿರುವೆನು.