ಆ ಎರಡು ಪಂಗಡಗಳ ನಡುವೆ ಒಂದು ತಡೆಯಿದೆ ಮತ್ತು ಎತ್ತರದ ಸ್ಥಳದಲ್ಲಿ ಕೆಲವು ಜನರಿರುವರು. ಅವರು ಪ್ರತಿಯೊಬ್ಬರನ್ನು ಅವರ ಲಕ್ಷಣದ ಮೂಲಕ ಗುರುತಿಸುವರು ಮತ್ತು ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: ನಿಮ್ಮ ಮೇಲೆ ಶಾಂತಿಯಿರಲಿ, ಅವರು (ಎತ್ತರದ ಸ್ಥಳದವರು) ಇನ್ನೂ ಸ್ವರ್ಗವನ್ನು ಪ್ರವೇಶಿಸಿರುವುದಿಲ್ಲ. ಆದರೆ ಅದರ ನಿರೀಕ್ಷೆಯಲ್ಲಿರುವರು.