ಓ ಆದಮ್ ಸಂತತಿಗಳೇ ಶೈತಾನನು ನಿಮ್ಮ ಮಾತಾಪಿತರನ್ನು ಒಬ್ಬರ ಮುಂದೆ ಇನ್ನೊಬ್ಬರ ಗುಹ್ಯಾಂಗಗಳನ್ನು ಗೋಚರಿಸುವಂತೆ ಮಾಡಿ, ಸ್ವರ್ಗದಿಂದ ಹೊರಗಟ್ಟಿದಂತೆ ನಿಮ್ಮನ್ನೂ ದಾರಿಗೆಡಿಸದಿರಲಿ. ಖಂಡಿತವಾಗಿಯು ಅವನು ಮತ್ತು ಅವನ ಸೈನ್ಯದವರು ನೀವು ಅವರನ್ನು ನೋಡದ ಸ್ಥಿತಿಯಲ್ಲಿ ನಿಮ್ಮನ್ನು ನೋಡುತ್ತಾರೆ. ನಾವು ಶೈತಾನರನ್ನು ಸತ್ಯವಿಶ್ವಾಸವಿಡದಂತಹ ಜನರಿಗೆ ಆಪ್ತಮಿತ್ರರನ್ನಾಗಿ ಮಾಡಿದ್ದೇವೆ.