ಮತ್ತು ನಾವು ಮೂಸಾರವರಿಗೆ ಮೂವತ್ತು ರಾತ್ರಿಗಳ ವಾಗ್ದಾನವನ್ನು ಮಾಡಿದೆವು ನಂತರ ಹತ್ತು ರಾತ್ರಿಗಳನ್ನು ಹೆಚ್ಚಿಸಿ ಅವರ ಪ್ರಭೂ ನಿಶ್ಚಯಿಸಿದ ಅವಧಿಯು ಒಟ್ಟು ನಲ್ವತ್ತು ರಾತ್ರಿಗಳಾಗಿ ಪೂರ್ಣಗೊಂಡಿತು ಮತ್ತು ಮೂಸಾ ತನ್ನ ಸಹೋದರ ಹಾರೂನ್‌ರವರೊಂದಿಗೆ ಹೇಳಿದರು: ನನ್ನ ಪ್ರತಿನಿಧಿಯಾಗಿ ನನ್ನ ಜನಾಂಗದ ನಡುವೆ ಸುಧಾರಣೆ ಮಾಡುತ್ತಿರು ಮತ್ತು ಗಲಭೆ ಕೋರರ ಮಾರ್ಗವನ್ನು ಅನುಸರಿಸದಿರು.