ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ. ಅಧಿಪತ್ಯವು ಅವನದೇ ಆಗಿದೆ. ಮತ್ತು ಅವನಿಗೇ ರ‍್ವಸ್ತುತಿ ಅವನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯ ಉಳ್ಳವನಾಗಿದ್ದಾನೆ.
ಅವನೇ ನಿಮ್ಮನ್ನು ಸೃಷ್ಟಿಸಿರುವನು. ಹಾಗಿದ್ದು ನಿಮ್ಮ ಪೈಕಿ ಕೆಲವರು ಸತ್ಯನಿಷೇಧಿಗಳಾಗಿದ್ದಾರೆ ಇನ್ನು ಕೆಲವರು ಸತ್ಯವಿಶ್ವಾಸಿಗಳಾಗಿದ್ದಾರೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾನೆ.
ಅವನೇ ಆಕಾಶಗಳನ್ನು ಮತ್ತು ಭೂಮಿಯನ್ನು ನ್ಯಾಯೋಚಿತ ಹಾಗೂ ಯುಕ್ತಿಯುತವಾಗಿ ಸೃಷ್ಟಿಸಿರುತ್ತಾನೆ ಮತ್ತು ಅವನು ನಿಮಗೆ ರೂಪಕೊಟ್ಟನು. ಹಾಗೂ ನಿಮ್ಮ ರೂಪವನ್ನು ಸುಂದರಗೊಳಿಸಿದನು ನಿಮಗೆ ಅವನೆಡೆಗೇ ಮರಳಲಿಕ್ಕಿದೆ.
ಅವನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುತ್ತಾನೆ ನೀವು ರಹಸ್ಯವಾಗಿರಿಸುವುದನ್ನು ಬಹಿರಂಗಗೊಳಿಸುವುದನ್ನು ಅವನು ಅರಿಯುತ್ತಾನೆ ಮತ್ತು ಅಲ್ಲಾಹನು ಹೃದಯಗಳಲ್ಲಿ ಇರುವುದನ್ನು ಚೆನ್ನಾಗಿ ಬಲ್ಲನು.
ಇದೇಕೆಂದರೆ ಅವರ ಸಂದೇಶವಾಹಕರು ಸ್ಪಷ್ಟ ಪುರಾವೆಗಳನ್ನು ಅವರ ಬಳಿಗೆ ತಂದಾಗ ಅವರು ಹೇಳಿದ್ದರು; ಒಬ್ಬ ಮನುಷ್ಯ ನಮಗೆ ಮರ‍್ಗರ‍್ಶನ ನೀಡುವುದೇ ? ಕೊನೆಗೆ ಅವರು ಸತ್ಯವನ್ನು ನಿಷೇಧಿಸಿದರು ಹಾಗೂ ವಿಮುಖರಾಗಿ ಬಿಟ್ಟರು, ಮತ್ತು ಅಲ್ಲಾಹನು ಸಹ ಅಲಕ್ಷö್ಯತೆಯನ್ನು ತೋರಿದನು ಅಲ್ಲಾಹನು ನಿರಪೇಕ್ಷಕನೂ ಸ್ತುತ್ಯರ‍್ಹನೂ ಆಗಿದ್ದಾನೆ.
ಮರಣದ ನಂತರ ನಾವು ಪುನಃ ಜೀವಂತಗೊಳಿಸಲಾರೆವು ಎಂದು ಸತ್ಯನಿಷೇಧಿಗಳು ಭಾವಿಸಿಕೊಂಡಿದ್ದಾರೆ. ಪೈಗಂಬರರೇ ಹೇಳಿರಿ; ಏಕಿಲ್ಲ; ನನ್ನ ಪ್ರಭುವಿನಾಣೆ! ಖಂಡಿತವಾಗಿಯೂ ನೀವು ಪುನಃ ಜೀವಂತಗೊಳಿಸಲ್ಪಡುವಿರಿ, ಆಮೇಲೆ ನೀವು ಮಾಡಿರುವುದೆಲ್ಲವನ್ನು ನಿಮಗೆ ತಿಳಿಸಲಾಗುವುದು ಇದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
ಸಮ್ಮೇಳನದ ದಿನ ಅವನು ನಿಮ್ಮೆಲ್ಲರನ್ನು ಒಟ್ಟುಗೂಡಿಸುವನು. ಅದು ಸೋಲು-ಗೆಲುವಿನ ದಿನವಾಗಿರುವುದು ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ‍್ಮಗಳನ್ನು ಕೈಗೊಳ್ಳುತ್ತಾನೋ ಅವನಿಂದ ಅಲ್ಲಾಹನು ಪಾಪಗಳನ್ನು ಅಳಿಸಿಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುವಂತಹ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅದರಲ್ಲಿ ಶಾಶ್ವತವಾಗಿರುವರು. ಇದುವೇ ಮಹಾ ಯಶಸ್ಸಾಗಿದೆ.
ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ವಿಪತ್ತು ಸಂಭವಿಸುವುದಿಲ್ಲ ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೆ ಅವನ ಹೃದಯಕ್ಕೆ ಅಲ್ಲಾಹನು ಸನ್ಮರ‍್ಗವನ್ನು ಕರುಣಿಸುತ್ತಾನೆ ಅಲ್ಲಾಹನ ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು.
ಓ ಸತ್ಯವಿಶ್ವಾಸಿಗಳೇ, ನಿಮ್ಮ ಪತ್ನಿಯರಲ್ಲಿ ನಿಮ್ಮ ಮಕ್ಕಳಲ್ಲಿ ಕೆಲವರು ನಿಮ್ಮ ಶತ್ರುಗಳಿದ್ದಾರೆ. ಆದ್ದರಿಂದ ನೀವು ಅವರಿಂದ ಜಾಗ್ರತೆ ವಹಿಸಿರಿ ಇನ್ನು ನೀವು ಮನ್ನಿಸುವುದಾದರೆ, ಅವರ ಪ್ರಮಾದಗಳನ್ನು ಅಲಕ್ಷಿಸುವುದಾದರೆ ಹಾಗೂ ಕ್ಷಮಿಸುವುದಾದರೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
ಆದ್ದರಿಂದ ನೀವು ಅಲ್ಲಾಹನನ್ನು ನಿಮಗೆ ಸಾಧ್ಯವಿರುವಷ್ಟು ಭಯಪಡಿರಿ ಆಲಿಸಿರಿ ಮತ್ತು ಅನುಸರಿಸಿರಿ ಹಾಗೂ ನೀವು ಅಲ್ಲಾಹನ ಮರ‍್ಗದಲ್ಲಿ ದಾನರ‍್ಮ ಮಾಡಿರಿ. ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ. ಯಾರು ತನ್ನಲ್ಲಿನ ಲೋಭ ತನದಿಂದ ಪಾರು ಮಾಡಲಾಗುತ್ತಾನೋ ಅವನೇ ಯಶಸ್ಸು ಪಡೆದವನಾಗಿರುತ್ತಾನೆ.
ನೀವು ಅಲ್ಲಾಹನಿಗೆ ಅತ್ಯುತ್ತಮ ಸಾಲವನ್ನು ನೀಡುವುದಾದರೆ ಅವನದನ್ನು ನಿಮಗೆ ಅನೇಕಪಟ್ಟು ವೃದ್ಧಿಸಿಕೊಡುವನು ಮತ್ತು ನಿಮ್ಮನ್ನು ಕ್ಷಮಿಸಿಬಿಡುವನು ಅಲ್ಲಾಹನು ಕೃತಜ್ಞನೂ ಸಹನಶೀಲನೂ ಆಗಿರುವನು.