ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿರುವವರ ಆತ್ಮವನ್ನು ದೂತರು ವಶಪಡಿಸಿಕೊಳ್ಳುವಾಗ ನೀವು ಯಾವ ಸ್ಥಿತಿಯಲ್ಲಿದ್ದಿರಿ? ಎಂದು ಅವರೊಂದಿಗೆ ಕೇಳುವರು: ನಾವು ನಮ್ಮ ನಾಡಿನಲ್ಲಿ ದುರ್ಬಲರಾಗಿದ್ದೆವು ಎಂದು ಅವರು ಉತ್ತರಿಸುವರು. ಅವರು (ದೂತರು) ಕೇಳುವರು: ನೀವು ನಿಮ್ಮ ನಾಡನ್ನು ಬಿಟ್ಟು ಅನ್ಯ ನಾಡಿಗೆ ಹೋಗುವಷ್ಟು ಅಲ್ಲಾಹನ ಭೂಮಿ ವಿಶಾಲವಾಗಿರಲಿಲ್ಲವೇ? ಅಂತಹ ಜನರ ವಾಸಸ್ಥಳವು ನರಕವಾಗಿದೆ. ಮತ್ತು ಅದು ಕೆಟ್ಟ ವಾಸಸ್ಥಳವಾಗಿದೆ.