ಅವರು ಸತ್ಯನಿಷೇಧಿಗಳಾಗಿರುವಂತೆ ನೀವು ಸತ್ಯನಿಷೇಧಿಗಳಾಗಿ ಅನಂತರ ಎಲ್ಲರೂ ಸಮಾನರಾಗಬೇಕೆಂದು ಅವರು ಬಯಸುತ್ತಾರೆ. ಅವರು ಅಲ್ಲಾಹನ ಮಾರ್ಗದಲ್ಲಿ ತಮ್ಮ ನಾಡನ್ನು ತ್ಯಜಿಸುವವರಗೆ ನೀವು ಅವರ ಪೈಕಿ ಯಾರನ್ನೂ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ಇನ್ನು ಅವರು ವಿಮುಖರಾಗುವುದಾದರೆ ನೀವು ಅವರನ್ನು ಹಿಡಿಯಿರಿ ಮತ್ತು ಅವರನ್ನು ಕಂಡಲ್ಲಿ ಕೊಂದು ಹಾಕಿರಿ ಮತ್ತು ನೀವು ಅವರ ಪೈಕಿ ಯಾರನ್ನೂ ನಿಮ್ಮ ಮಿತ್ರರಾಗಿ ಹಾಗೂ ಸಹಾಯಕರಾಗಿ ಮಾಡಿಕೊಳ್ಳಬೇಡಿರಿ.