ಕಪಟ ವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗುತ್ತೀರಿ? ವಸ್ತುತಃ ಅವರನ್ನು ಅಲ್ಲಾಹನು ಅವರ ಕರ್ಮಗಳ ನಿಮಿತ್ತ ಅಧೋಮುಖಿಗಳನ್ನಾಗಿಸಿರುವನು. ಅಲ್ಲಾಹನು ಪಥಭ್ರಷ್ಟಗೊಳಿಸಿರುವವನನ್ನು ನೀವು ಸನ್ಮಾರ್ಗ ನೀಡಲು ಇಚ್ಛಿಸುತ್ತೀರಾ? ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವನಿಗೆ ನೀವು ಯಾವ ಮಾರ್ಗವನ್ನೂ ಪಡೆಯಲಾರಿರಿ.