ಅವರಿಗೆ ಯಾವುದಾದರೂ ಶಾಂತಿ ಅಥವಾ ಭೀತಿಯ ಸುದ್ಧಿ ಲಭಿಸಿದರೆ ಅವರದನ್ನು ಪ್ರಚಾರ ಮಾಡುತ್ತಾರೆ. ಅವರೇನಾದರೂ ಅದನ್ನು ಸಂದೇಶವಾಹಕ(ಸ)ರಿಗೂ ಮತ್ತು ಅಧಿಕಾರಸ್ಥರಿಗೆ ಒಪ್ಪಿಸುತ್ತಿದ್ದರೆ ಅವರ ಪೈಕಿ ವಿಚಾರಗಳನ್ನು ಆಳವಾಗಿ ಚಿಂತಿಸುವವರು ಅದರ ವಾಸ್ತವಿಕತೆಯನ್ನು ಅರಿತುಕೊಳ್ಳುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಇಲ್ಲದಿರುತ್ತಿದ್ದರೆ ಕೆಲವರ ಹೊರತು ನೀವೆಲ್ಲರೂ ಶೈತಾನನನ್ನು ಅನುಸರಿಸುತ್ತಿದ್ದೀರಿ.