ನಾವು ಅನುಸರಿಸುವೆವು ಎಂದು ಅವರು ಹೇಳುತ್ತಾರೆ ಅನಂತರ ಅವರು ನಿಮ್ಮ ಬಳಿಯಿಂದ ಎದ್ದು ಹೋದರೆ ಅವರಲ್ಲಿನ ಒಂದು ಗುಂಪು ನೀವು ಹೇಳಿರುವುದಕ್ಕೆ ವ್ಯತಿರಿಕ್ತವಾಗಿ ರಾತ್ರಿ ವೇಳೆ ಗೂಢಾಲೋಚನೆ ನಡೆಸುತ್ತಾರೆ. ಅವರ ರಾತ್ರಿ ವೇಳೆಯ ಗೂಢಾಲೋಚನೆಗಳನ್ನು ಅಲ್ಲಾಹನು ದಾಖಲಿಸುತ್ತಿರುವನು. ಆದ್ದರಿಂದ ನೀವು ಅರವನ್ನು ಕಡೆಗಣಿಸಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಕಾರ್ಯನಿರ್ವಾಹಕನಾಗಿ ಅಲ್ಲಾಹನೇ ಸಾಕು.